ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು 2016: ಸಂಪೂರ್ಣ ಅಪ್ಡೇಟ್ ಗಳು

By Mahesh

ಬೆಂಗಳೂರು, ಫೆ. 06: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆರಂಭವಾಗಿದೆ. ಒಟ್ಟಾರೆ 351 ಆಟಗಾರರು (230 ಭಾರತೀಯ ಹಾಗೂ 121 ವಿದೇಶಿಯರು) ಫೆಬ್ರವರಿ 06ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.

ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ರೂ.ಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಅವರಿಗೆ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲ ಬೆಲೆ ನಿಗದಿ ಮಾಡಲಾಗಿದೆ. [ಐಪಿಎಲ್ ಹರಾಜಿಗೆ ಮಾರ್ಗದರ್ಶಿ]

LIVE: IPL 2016 Players Auction in Bengaluru

ಯುವರಾಜ್ ಸಿಂಗ್, ಇಶಾಂತ್ ಶರ್ಮ ಸೇರಿದಂತೆ ಒಟ್ಟು 7 ಸ್ಟಾರ್ ಆಟಗಾರರು ಇಷ್ಟೇ ಮೊತ್ತದ ಮೂಲ ಬೆಲೆ ಫಿಕ್ಸ್ ಮಾಡಲಾಗಿದೆ.[ಹರಾಜಿಗೆ ಸಿದ್ಧರಾಗಿರುವ ಆಟಗಾರರ ಪಟ್ಟಿ]

ಐಪಿಎಲ್ 2016ರ ಹರಾಜು ಪ್ರಕ್ರಿಯೆ:

* ಕರಣ್ ವೀರ್ ಸಿಂಗ್ (10 ಲಕ್ಷ ರು) ಸೇಲ್ ಆಗಿಲ್ಲ.
* ಕರ್ನಾಟಕದ ಕೆಸಿ ಕಾರ್ಯಪ್ಪ 80 ಲಕ್ಷ ರು ಗೆ ಕಿಂಗ್ಸ್ ‍XI ಪಂಜಾಬ್ ತಂಡಕ್ಕೆ ಮಾರಾಟ.
* ಕೆಸಿ ಕಾರ್ಯಫ್ಪ (10 ಲಕ್ಷ ರು ) ಪಂಜಾಬ್ ಹಾಗೂ ಬೆಂಗಳೂರು ನಡುವೆ ಬಿಡ್ಡಿಂಗ್
* ತಮಿಳುನಾಡಿನ ಲೆಗ್ ಸ್ಪಿನ್ನರ್ ಎಂ ಅಶ್ವಿನ್ 3.25 ಕೋಟಿ ರು ಗೆ ಪುಣೆ ಪಾಲು.
* ಎಂ ಅಶ್ವಿನ್ (10 ಲಕ್ಷ ರು) ಪುಣೆ ಹಾಗೂ ಬೆಂಗಳೂರು ನಡುವೆ ಪೈಪೋಟಿ
* ಸಬರ್ ಜಿತ್ ಲಡ್ಡಾ (10 ಲಕ್ಷ ರು) ಮೂಲ ಬೆಲೆಗೆ ಗುಜರಾತ್ ಲಯನ್ಸ್ ಗೆ ಮಾರಾಟ.
* ರಾಹಿಲ್ ಎಸ್ ಶಾ (10 ಲಕ್ಷ ರು) ಸೇಲ್ ಆಗಿಲ್ಲ
* ಶಿವಿಲ್ ಕೌಶಿಕ್ (10 ಲಕ್ಷ ರು) ಮೂಲ ಬೆಲೆಗೆ ಗುಜರಾತ್ ಲಯನ್ಸ್
* ಪ್ರವೀಣ್ ತಾಂಬೆ (10 ಲಕ್ಷ ರು) 20 ಲಕ್ಷ ರುಗೆ ಖರೀದಿಸಿದ ಗುಜರಾತ್ ಲಯನ್ಸ್
* ಹಾರ್ದಿಕ್ ಪಟೇಲ್ (10 ಲಕ್ಷ ರು), ಆಡಂ ಝಂಪಾ (30 ಲಕ್ಷ ರು ), ಪವನ್ ಸುಯಾಲ್ (10 ಲಕ್ಷ ರು), ಸಿದ್ದಾರ್ಥ್ ತ್ರಿವೇದಿ 10 ಲಕ್ಷರು ಸೇಲ್ ಆಗಿಲ್ಲ.
* ಅಂಕಿತ್ 1.5 ಕೋಟಿ ರು ಗೆ ಕೋಲ್ಕತ್ತಾ ಪಾಲು
* ಅಂಕಿತ್ ರಜಪುತ್ (10 ಲಕ್ಷ ರು )- ಪುಣೆ, ಕೋಲ್ಕತ್ತಾ ಬಿಡ್ಡಿಂಗ್
* ಈಶ್ವರ್ ಪಾಂಡೆ 20 ಲಕ್ಷ ರು ಮೂಲ ಬೆಲೆಗೆ ಪುಣೆ ತಂಡಕ್ಕೆ ಸೇರ್ಪಡೆ.[ಐಪಿಎಲ್: ಕೊಹ್ಲಿ, ಧೋನಿ ಸಂಬಳ ವಿವರ ಬಹಿರಂಗ]

* ನಾಥು ಸಿಂಗ್ 3.2 ಕೋಟಿ ರು ಗೆ ಮುಂಬೈ ಇಂಡಿಯನ್ಸ್ ಪಾಲು.
* ನಾಥು ಸಿಂಗ್ (10 ಲಕ್ಷ ರು) ಬೆಂಗಳೂರು ರಾಯಲ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಬಿಡ್ಡಿಂಗ್
* ಸಿ ಸ್ಟೀಫನ್, ಡಿಜೆ ಮುತ್ತುಸ್ವಾಮಿ (10 ಲಕ್ಷ ರು), ವಿಪಿ ಸಿಂಗ್ (10 ಲಕ್ಷ ರು), ಎಚ್ ಸಿಂಗ್ ಬನ್ಸಾಲ್ ಸೇಲ್ ಆಗಿಲ್ಲ.
* ಪ್ರದೀಪ್ ಸಾಂಗ್ವಾನ್ (20 ಲಕ್ಷ ರು) ಮೂಲ ಬೆಲೆಗೆ ಗುಜರಾತ್ ಲಯನ್ಸ್ ಪಾಲು.
* ರಜತ್ ಭಾಟಿಯಾ 60 ಲಕ್ಷ ರು ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪಾಲು.
* ರಜತ್ ಭಾಟಿಯಾ (30 ಲಕ್ಷ ರು) ಹೈದರಾಬಾದ್, ಪುಣೆ ತಂಡದಿಂದ ಬಿಡ್ಡಿಂಗ್.



* ಪವನ್ ನೇಗಿ 8.5 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.
* ಪವನ್ ನೇಗಿ (30 ಲಕ್ಷ ರು) ಗಾಗಿ ಪುಣೆ, ಡೆಲ್ಲಿ ಪೈಪೋಟಿ ಬಿಡ್ಡಿಂಗ್
* ಕೆವಿನ್ ಓಬ್ರಿಯಾನ್ (30 ಲಕ್ಷ ರು), ಕೆವನ್ ಕೂಪರ್ ಸೇಲ್ ಆಗಿಲ್ಲ
* ಪ್ರಶಾಂತ್ ಪದ್ಮನಾಭನ್ (10 ಲಕ್ಷ ರು) ಸೇಲ್ ಆಗಿಲ್ಲ
* ದೀಪಕ್ ಹೂಡಾ 4.2 ಕೋಟಿ ರು ಗಳಿಗೆ ಸನ್ ರೈಸರ್ಸ್ ಹೈದರಾಬಾದಿಗೆ ಮಾರಾಟ
* ದೀಪಕ್ ಹೂಡಾ (10 ಲಕ್ಷ ರು) ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಬಿಡ್ಡಿಂಗ್

* ಇಕ್ಬಾಲ್ ಅಬ್ದುಲ್ಲಾ (10 ಲಕ್ಷ ರು) ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟ.
14.47: ಮತ್ತೊಮ್ಮೆ ಆಲ್ ರೌಂಡರ್ಸ್ ಮಾರಾಟ
* ಅಂಕುಶ್ ಬೈನ್ಸ್ (10 ಲಕ್ಷ ರು). ಮನ್ವಿಂದರ್ ಬಿಸ್ಲಾ (10 ಲಕ್ಷ ರು) ಸೇಲ್ ಆಗಿಲ್ಲ
* ಆದಿತ್ಯ ತಾರೆ 1.2 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ ಮಾರಾಟ.
* ಆದಿತ್ಯಾ ತಾರೆ (20 ಲಕ್ಷ ರು) ಸನ್ ರೈಸರ್ಸ್, ಮುಂಬೈ ಇಂಡಿಯನ್ಸ್ ನಿಂದ ಬಿಡ್ಡಿಂಗ್
* ಪಿನಾಲ್ ಶಾ (10 ಲಕ್ಷ ರು), ಸಿಎಂ ಗೌತಮ್ (20 ಲಕ್ಷ ರು) ಮಾರಾಟ ಆಗಿಲ್ಲ.

* ಏಕಲವ್ಯ್ ದ್ವಿವೇದಿ (20 ಲಕ್ಷ ರು) ಗುಜರಾತ್, ಹೈದರಾಬಾದ್ ಹಾಗೂ ಮುಂಬೈನಿಂದ ಬಿಡ್ಡಿಂಗ್

* ರಿಷಬ್ ಪಂತ್ 1.9 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲು
* ರಿಷಬ್ ಪಂತ್ (10 ಲಕ್ಷ ರು) ಸನ್ ರೈಸರ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಬಿಡ್ಡಿಂಗ್

* ಇಶಾನ್ 35 ಲಕ್ಷ ರು ಗೆ ಗುಜರಾತ್ ಲಯನ್ಸ್ ಪಾಲು
* ಇಶಾನ್ ಕಿಶಾನ್ (10 ಲಕ್ಷ ರು) ಗುಜರಾತ್ ಲಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಬಿಡ್ಡಿಂಗ್

* ಮಿಥುನ್ ಮನ್ಹಾಸ್ (30 ಲಕ್ಷ ರು)
* ಕರುಣ್ ನಾಯರ್ 4 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.
* ಕರ್ನಾಟಕದ ಕರುಣ್ ನಾಯರ್ (10 ಲಕ್ಷ ರು) ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಡೇರ್ ಡೆವಿಲ್ಸ್
* ಸಚಿನ್ ಬೇಬಿ (10 ಲಕ್ಷ ರು) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೂಲಬೆಲೆಗೆ ಖರೀದಿ

14.15: ಬ್ಯಾಟ್ಸ್ ಮನ್ ಗಳ ಹರಾಜು ಆರಂಭ

Karun Nair

13.05: ಭೋಜನ ವಿರಾಮ. 14.15 ರಿಂದ ಮತ್ತೆ ಹರಾಜು ಆರಂಭ
* ತಸ್ಕೀನ್ ಅಹ್ಮದ್, ಶಾನನ್ ಗೇಬ್ರಿಯಲ್ ಸೇಲ್ ಆಗಿಲ್ಲ
13.02: ಮತ್ತೊಂದು ಸೆಟ್ ಬೌಲರ್ಸ್ ಹರಾಜು
* ಸೌಮ್ಯ ಸರ್ಕಾರ್ (30 ಲಕ್ಷರು ), ಡಿ ಪೆರೆರಾ ಸೇಲ್ ಆಗಿಲ್ಲ

12.55: ಮತ್ತೊಂದು ಸೆಟ್ ಆಲ್ ರೌಂಡರ್ಸ್ ಹರಾಜು [ಐಪಿಎಲ್ 2016 : ಶೇನ್ ವಾಟ್ಸನ್ ಭಾರಿ ಮೊತ್ತಕ್ಕೆ ಸೇಲ್]
* ಪರ್ವೀಂದರ್ ಅವಾನ, ಸುದೀಪ್ ತ್ಯಾಗಿ (30 ಲಕ್ಷ ರು), ಶೇನ್ ಟೈಟ್, ಪಂಕಜ್ ಸಿಂಗ್ , ನುವಾನ್ ಕುಲಶೇಖರ, ಸೊಂಟಕಿ ಸೇಲ್ ಆಗಿಲ್ಲ,
12.50: ಮತ್ತೊಮ್ಮೆ ಬೌಲರ್ ಗಳ ಹರಾಜು
* ರಯಾದ್ ಎಮ್ರಿತ್ (30 ಲಕ್ಷ ರು), ಯುವಾನ್ ಬೋಥಾ (50 ಲಕ್ಷ ರು), ಆಸ್ಟರ್ನ್ ಆಗರ್ ಸೇಲ್ (50 ಲಕ್ಷ ರು), ರಾಬಿನ್ ಪೀಟರ್ಸನ್ (50 ಲಕ್ಷ ರು), ಅಂಟಾನ್ ದೆವ್ಸಿಚ್, ಸೇಲ್ ಆಗಿಲ್ಲ
* ನಾಥನ್ ಮೆಕಲಮ್ (50 ಲಕ್ಷ ರು), ಜುವಾನ್ ಥೆರಾನ್ (30 ಲಕ್ಷ ರು), ಎಸ್ ಜಯಸೂರ್ಯ(30 ಲಕ್ಷ ರು) ಸೇಲ್ ಆಗಿಲ್ಲ.
* ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡೀನ್ ಎಲ್ಗಾರ್ (30 ಲಕ್ಷ ರು), ಫರ್ಹಾನ್ ಬೆಹರ್ದೀನ್ (30 ಲಕ್ಷರು )ಸೇಲ್ ಆಗಿಲ್ಲ.
* ಟ್ರಾವೆಸ್ ಹೆಡ್ (30 ಲಕ್ಷ ರು ) ಗೆ 50 ಲಕ್ಷ ರು ಕೊಟ್ಟು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ಬ್ಯಾಟ್ಸ್ ಮನ್ ಗಳಾದ ಲಹಿರು ತಿರಿಮನ್ನೆ, ರಿಚರ್ಡ್ ಲೆವಿ, ಕೆಮರೂನ್ ವೈಟ್, ತಮಿಮ್ ಇಕ್ಬಾಲ್, ಮರ್ಲಾನ್ ಸ್ಯಾಮುಯಲ್ಸ್, ಡೀನ್ ಎಲ್ಗಾರ್, ರೀಜಾ ಹೆಂಡ್ರಿಕ್ಸ್ ಸೇಲ್ ಆಗಿಲ್ಲ.
* ಮುನಾಫ್ ಪಟೇಲ್ (50 ಲಕ್ಷ ರು), ದಕ್ಷಿಣ ಆಫ್ರಿಕಾದ ಬಿಯುರೆನ್ ಹೆಂಡ್ರಿಕ್ಸ್ ಸೇಲ್ ಆಗಿಲ್ಲ

Barinder Sran

* ಆರ್ ಪಿ ಸಿಂಗ್ (30 ಲಕ್ಷ ರು) ಮೂಲ ಬೆಲೆಗೆ ಪುಣೆ ಪಾಲು
* ಕರ್ನಾಟಕದ ಅಭಿಮನ್ಯು ಮಿಥುನ್ (30 ಲಕ್ಷ ರು) ಮೂಲ ಬೆಲೆಗೆ ಸನ್ ರೈಸರ್ಸ್ ಹೈದರಾಬಾದಿಗೆ ಖರೀದಿ.
* ಬರೀಂದರ್ ಸ್ರಾನ್ 1.20 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ ಖರೀದಿ.
* ಬರೀಂದರ್ ಸ್ರಾನ್ (50 ಲಕ್ಷ ರು ) ಸನ್ ರೈಸರ್ಸ್ ಹೈದರಾಬಾದ್ ಮೂಲ ಬೆಲೆಗೆ ಖರೀದಿ.
* ಕೈಲಿ ಅಬಾಟ್ 2.10 ಕೋಟಿ ರು ಗೆ ಕಿಂಗ್ಸ್ ‍XI ಪಂಜಾಬ್ ತಂಡದ ಪಾಲು.
* ಕೈಲಿ ಅಬಾಟ್ (30 ಲಕ್ಷರು) ಕಿಂಗ್ಸ್ ‍XI ಪಂಜಾಬ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ಡಿಂಗ್
* ಜಯದೇವ್ ಉನದ್ಕತ್ ಗೆ 1.6 ಕೋಟಿ ರು ಕೊಟ್ಟು ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
* ಜಯದೇವ್ ಉನದ್ಕತ್ (30 ಲಕ್ಷ ರು) ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ನಿಂದ ಬಿಡ್ಡಿಂಗ್

* ಮುಷ್ತಫಿಜುರ್ ರಹಮನ್ 1.4 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ ಮಾರಾಟ.
* ಮುಷ್ತಫಿಜುರ್ (50 ಲಕ್ಷ ರು) ಗಾಗಿ ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ಡಿಂಗ್
* ಜೊಯಿಲ್ ಪ್ಯಾರೀಸ್ (30 ಲಕ್ಷ ರು) ಸೇಲ್ ಆಗಿಲ್ಲ.
* ಅಭಿಶೇಕ್ ನಾಯರ್ (30 ಲಕ್ಷ ರು) ಸೇಲ್ ಆಗಿಲ್ಲ.
* ಮಾರ್ಕಸ್ ಸ್ಟೊಯಿನಿಸ್ (30 ಲಕ್ಷ ರು ) 55 ಲಕ್ಷ ರುಗೆ ಕಿಂಗ್ಸ್ XI ಪಂಜಾಬ್ ಗೆ
* ಜೇಸನ್ ನೆಷಾ, ಸೀನ್ ಅಬಾಟ್ ಸೇಲ್ ಆಗಿಲ್ಲ
* ವೆಸ್ಟ್ ಇಂಡೀಸ್ ನ ಕ್ರಿಸ್ ಬ್ರಥ್ ವೈಟ್ ಗೆ 4.2 ಕೋಟಿ ರು ಕೊಟ್ಟು ಖರೀದಿಸಿದ ಡೆಲ್ಲಿ ಡೇರ್ ಡೆವಿಲ್ಸ್
* ಕ್ರಿಸ್ ಬ್ರಥ್ ವೈಟ್ (30 ಲಕ್ಷರು) ಡೆಲ್ಲಿ ಡೇರ್ ಡೆವಿಲ್ಸ್ , ಕೋಲ್ಕತ್ತಾ ನೈಟ್ ರೈಡರ್ಸ್ ನಿಂದ ಬಿಡ್ಡಿಂಗ್

* ಗ್ರ್ಯಾಂಟ್ ಎಲಿಯಟ್ (30 ಲಕ್ಷ ರು)
* ಕ್ರಿಸ್ ಜೋರ್ಡನ್ (1 ಕೋಟಿ ರು), ವಾಯ್ನೆ ಪಾರ್ನೆಲ್ (50 ಲಕ್ಷ ರು)
* ಡಗ್ ಬ್ರೇಸ್ ವೆಲ್ (30 ಲಕ್ಷ ರು), ಆಂಡ್ಯೂ ಟೈಟ್ (30 ಲಕ್ಷ ರು), ಸೇಲ್ ಆಗಿಲ್ಲ

* ಅಭಿನವ್ ಮುಕುಂದ್ (30 ಲಕ್ಷ ರು) ಸೇಲ್ ಆಗಿಲ್ಲ
* ಓವೈಸ್ ಶಾ (1 ಕೋಟಿ ರು ) ಸೇಲ್ ಆಗಿಲ್ಲ
* ನಿಕ್ ಮ್ಯಾಡಿಸನ್ (50 ಲಕ್ಷ ರು) ಸೇಲ್ ಆಗಿಲ್ಲ
* ಆಡಮ್ ವೋಗಸ್ (1 ಕೋಟಿ ರು)ಕೂಡಾ ಸೇಲ್ ಅಗಿಲ್ಲ.
* ಡರೇನ್ ಹಸ್ಸಿ (50 ಲಕ್ಷ ರು) ಕೂಡಾ ಸೇಲ್ ಅಗಿಲ್ಲ.
* ಡೇವಿಡ್ ಹಸ್ಸಿ ಯಾರು ಖರೀದಿಸಿಲ್ಲ.
12.00: ಸ್ಪಿನ್ನರ್ಸ್ ನಂತರ ಬ್ಯಾಟ್ಸ್ ಮನ್ ಗಳ ಹರಾಜು.


* ಪ್ರಗ್ನಾನ್ ಓಜಾ (50 ಲಕ್ಷ ರು) ಯಾರು ಖರೀದಿಸಿಲ್ಲ
* ಸ್ಯಾಮುಯಲ್ ಬದ್ರಿ (50 ಲಕ್ಷ ರು ) ಕೂಡಾ ಯಾರು ಖರೀದಿಸಿಲ್ಲ.
* ಕೆಮರೂನ್ ಬಾಯ್ಸ್ (50 ಲಕ್ಷ ರು ) ಕೂಡಾ ಯಾರು ಖರೀದಿಸಿಲ್ಲ.
* ರಾಹುಲ್ ಶರ್ಮ (30 ಲಕ್ಷ ರು) ಕೂಡಾ ಯಾರು ಖರೀದಿಸಿಲ್ಲ.
* ಸಚಿತ್ರಾ ಸೇನಾನಾಯಕೆ, ನಾಥನ್ ಲಿಯಾನ್, ದೇವೆಂದ್ರ ಬಿಶು, ಮೈಕಲ್ ಬೀರ್, ಅಜಂತಾ ಮೆಂಡಿಸ್, ಸುಲೇಮಾನ್ ಬೆನ್ ಸೇಲ್ ಆಗಿಲ್ಲ.

11.35: ವೇಗಿಗಳ ನಂತರ ಸ್ಪಿನ್ ಬೌಲರ್ ಗಳ ಹರಾಜು ಆರಂಭ.
* ಆಸ್ಟ್ರೇಲಿಯಾ ಜೇಮ್ಸ್ ಪಾಟಿಸನ್ (1.50ಕೋಟಿ ರು) ಯಾವ ತಂಡವೂ ಖರೀದಿಸಿಲ್ಲ.
* ಮೋಹಿತ್ ಶರ್ಮಗೆ 6.50 ಕೋಟಿ ರು ಕೊಟ್ಟು ಖರೀದಿಸಿದ ಕಿಂಗ್ಸ್ XI ಪಂಜಾಬ್
* ಮೋಹಿತ್ ಶರ್ಮ (1.5 ಕೋಟಿ ರು) ಕೋಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ XI ಪಂಜಾಬ್, ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಬಿಡ್ಡಿಂಗ್
* ಅಶೋಕ್ ದಿಂಡಾ ಸೇಲ್ ಆಗಿಲ್ಲ.
* ಟಿಮ್ ಸೌಥಿ 2.50 ಕೋಟಿ ರು ನೀಡಿ ಖರೀದಿಸಿದ ಮುಂಬೈ ಇಂಡಿಯನ್ಸ್
* ಟಿಮ್ ಸೌಥಿ (1 ಕೋಟಿ ರು) ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ತಂಡದಿಂದ ಬಿಡ್ಡಿಂಗ್.
* ಪ್ರವೀಣ್ ಕುಮಾರ್ ಗೆ 3.50 ಕೋಟಿ ರು ಕೊಟ್ಟು ಖರೀದಿಸಿದ ಗುಜರಾತ್ ಲಯನ್ಸ್
* ಪ್ರವೀಣ್ ಕುಮಾರ್ (50 ಲಕ್ಷ ರು) ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಗುಜರಾತ್ ಲಯನ್ಸ್ ತಂಡದಿಂದ ಬಿಡ್ಡಿಂಗ್

IPL 2016 Players Auction

* ಜಾನ್ ಹೇಸ್ಟಿಂಗ್ಸ್ (1 ಕೋಟಿ ರು) ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ತಂಡದಿಂದ ಬಿಡ್ಡಿಂಗ್.
* ಕೇನ್ ರಿಚರ್ಡ್ಸನ್ (2 ಕೋಟಿ ರು ಮೂಲ ಬೆಲೆ) ಯಾವುದೇ ತಂಡ ಖರೀದಿಸಿಲ್ಲ.
* ಧವಳ್ ಕುಲಕರ್ಣಿ (2 ಕೋಟಿ ರು ) ಮೂಲ ಬೆಲೆಗೆ ಗುಜರಾತ್ ಲಯನ್ಸ್ ಪಾಲು.
11.15: ಬೌಲರ್ ಗಳ ಹರಾಜು ಪ್ರಕ್ರಿಯೆ ಆರಂಭ


* ತಿಸ್ಸಾರ ಪೆರೆರಾ (1 ಕೋಟಿ ರು ಮೂಲಬೆಲೆ) ಯಾವ ತಂಡಕ್ಕೂ ಬಿಕರಿಯಾಗಿಲ್ಲ.
* ಮಿಚೆಲ್ ಮಾರ್ಷ್ 4.8 ಕೋಟಿರು ಗೆ ಪುಣೆ ತಂಡದ ಪಾಲು
* ಡರೇನ್ ಸಾಮಿ ಖರೀದಿಸಲು ಯಾವುದೇ ತಂಡ ಮುಂದೆ ಬಂದಿಲ್ಲ.

* ಕರ್ನಾಟಕದ ಸ್ಟುವರ್ಟ್ ಬಿನ್ನಿ (2 ಕೋಟಿ ರು) ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ ಮಾಡಿ ಮೂಲಬೆಲೆಗೆ ಖರೀದಿಸಿದ್ದಾರೆ.

* ಕಾಲಿನ್ ಮಾನ್ರೋ (30 ಲಕ್ಷ ರು) 50 ಲಕ್ಷ ರುಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲು.
* ಕ್ರಿಸ್ ಮಾರಿಸ್ ಗೆ 7 ಕೋಟಿ ರು ಕೊಟ್ಟು ಗೆದ್ದ ಖರೀದಿಸಿದ ಡೆಲ್ಲಿ ಡೇರ್ ಡೇವಿಲ್ಸ್
* ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ (50 ಲಕ್ಷ ರು ಮೂಲ ಬೆಲೆ) ಕೋಲ್ಕತ್ತಾ ನೈಟ್ಸ್ ರೈಡರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ತಂಡದಿಂದ ಬಿಡ್ಡಿಂಗ್

Binny

*
ವೆಸ್ಟ್ ಇಂಡೀಸ್ ಜಾಸನ್ ಹೋಲ್ಡನ್ (50 ಲಕ್ಷ ರು) ಕೂಡಾ ಸೇಲ್ ಆಗಿಲ್ಲ.
* ತಿಲಕರತ್ನೆ ದಿಲ್ಶನ್ (1 ಕೋಟಿ ರು) ಗಾಗಿ ಹರಾಜು. ಯಾವುದೇ ತಂಡಕ್ಕೆ ಸೇಲ್ ಆಗಿಲ್ಲ.
* ರವಿ ಬೋಪಾರ ಖರೀದಿಸಲು ಯಾವ ಫ್ರಾಂಚೈಸಿಯೂ ಇಚ್ಛಿಸಿಲ್ಲ.
Irfan Pathan

* ಇರ್ಫಾನ್ ಪಠಾಣ್ (1 ಕೋಟಿ ರು ) ಮೂಲಬೆಲೆಗೆ ಪುಣೆ ಸೂಪರ್ ಜೈಂಟ್ಸ್ ಗೆ ಬಿಕರಿ
* ಮನೋಜ್ ತಿವಾರಿ ಖರೀದಿಸಲು ಯಾರು ಮುಂದೆ ಬಂದಿಲ್ಲ.
10.54: ವಿಕೆಟ್ ಕೀಪರ್ ಗಳ ನಂತರ ಆಲ್ ರೌಂಡರ್ ಗಳ ಹರಾಜು ಆರಂಭ.
* ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 2.30 ಕೋಟಿ ರು ಗೆ ಗುಜರಾತ್ ಲಯನ್ಸ್ ಪಾಲು.
* ದಿನೇಶ್ ಕಾರ್ತಿಕ್ (2 ಕೋಟಿ ರು) ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್ ಬಿಡ್ಡಿಂಗ್,
* ಬಾಂಗ್ಲಾದೇಶದ ಮುಷ್ಪಿಕರ್ ರಹೀಂ, ಬ್ರಾಡ್ ಹಡ್ಡಿನ್, ಮಾರ್ನೆ ವಾನ್ ವಿಕ್, ಬೆನ್ ಡಕ್ ಸೇಲ್ ಆಗಿಲ್ಲ.

* ವಿಕೆಟ್ ಕೀಪರ್ ಬಟ್ಲರ್ 3.8 ಕೋಟಿ ರು ಗೆ ಮುಂಬೈ ಇಂಡಿಯನ್ಸ್ ಪಾಲು
* ಜೋಸ್ ಬಟ್ಲರ್ (ಮೂಲ ಬೆಲೆ 1.50 ಕೋಟಿ ರು) ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ಸ್ ರೈಡರ್ಸ್ ಬಿಡ್ಡಿಂಗ್
* ಸಂಜು ಸಾಮ್ಸನ್ 4.20 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು
* ಸಂಜು ಸಾಮ್ಸನ್ (ಮೂಲ ಬೆಲೆ 2 ಕೋಟಿ ರು ) ಗುಜರಾತ್ ಲಯನ್ಸ್, ಡೇರ್ ಡೆವಿಲ್ಸ್ ತೀವ್ರ ಬಿಡ್ಡಿಂಗ್

* ಬಿಗ್ ಬಾಷ್ ಲೀಗ್ ಟ್ವೆಂಟಿ0 ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ ಮನ್ ಉಸ್ಮಾನ್ ಖವಜಾ(ಮೂಲ ಬೆಲೆ 1 ಕೋಟಿ) ಕೂಡಾ ಯಾವುದೇ ತಂಡಕ್ಕೆ ಸೇಲ್ ಆಗಿಲ್ಲ.

* ರಿಲೇ ರೊಸ್ಸ್ಸೊ,ಚೇತೇಶ್ವರ್ ಪೂಜಾರಾ, ಹಶೀಂ ಆಮ್ಲಾ, ಜಾರ್ಜ್ ಬೈಲಿ, ಸುಬ್ರಮಣಿಯನ್ ಬದ್ರಿನಾಥ್, ಮಹೇಲ್ ಜಯವರ್ದನೆ, ಮೈಕಲ್ ಹಸ್ಸಿ

10.25: 15 ನಿಮಿಷದ ವಿರಾಮದ ನಂತರ ಮತ್ತೊಮ್ಮೆ ಹರಾಜು ಆರಂಭ.


* ಡೇಲ್ ಸ್ಟೈನ್ 2.3 ಕೋಟಿ ರು ಗಳಿಗೆ ಗುಜರಾತ್ ಲಯನ್ಸ್ ತಂಡದ ಪಾಲು
* ಡೇಲ್ ಸ್ಟೈನ್ (1.50 ಕೋಟಿ ರು) ಗಾಗಿ ಬಿಡ್ಡಿಂಗ್ ಶುರು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್ ನಿಂದ ಬಿಡ್ಡಿಂಗ್.
* ಯುವರಾಜ್ ಸಿಂಗ್ 7 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲು
* ಯುವರಾಜ್ ಸಿಂಗ್ (ಮೂಲ ಬೆಲೆ 2 ಕೋಟಿ ರು) -ಮುಂಬೈ ಇಂಡಿಯನ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ನಿಂದ ತೀವ್ರ ಬಿಡ್ಡಿಂಗ್.
Yuvraj Singh

* ಆಶೀಶ್ ನೆಹ್ರಾ (ಮೂಲ ಬೆಲೆ 2 ಕೋಟಿ ರು) ಗೆ 5.50 ಕೋಟಿ ರು ಕೊಟ್ಟು ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್. ಕಿಂಗ್ಸ್ ‍XI ಪಂಜಾಬ್, ಸನ್ ರೈಸರ್ಸ್ ಹೈದರಾಬಾದಿನಿಂದ ತೀವ್ರ ಬಿಡ್ಡಿಂಗ್.
* ಅರೋನ್ ಫಿಂಚ್ (ಮೂಲ ಬೆಲೆ 1 ಕೋಟಿ ರು) ಯಾವುದೇ ತಂಡ ಸದ್ಯಕ್ಕೆ ಖರೀದಿಸಿಲ್ಲ
* ಶೇನ್ ವಾಟ್ಸನ್ (2 ಕೋಟಿ ರು ಮೂಲಬೆಲೆ) 9.50 ಕೋಟಿ ರು ಕೊಟ್ಟು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು. ವಾಟ್ಸನ್ ಖರೀದಿಸಲು ಆಸಕ್ತಿ ತೋರಿಸಿದ್ದ ಮುಂಬೈ ಇಂಡಿಯನ್ಸ್, ಪುಣೆ.
Ishanth Sharma

* ಇಶಾಂತ್ ಶರ್ಮ 3.8 ಕೋಟಿ ರು ಗೆ ರೈಸಿಂಗ್ ಪುಣೆ ತಂಡದ ಪಾಲು
* ವೇಗಿ ಇಶಾಂತ್ ಶರ್ಮ(ಮೂಲ ಬೆಲೆ 2 ಕೋಟಿ ರು)
* ಡ್ವಾಯ್ನೆ ಸ್ಮಿತ್ (ಮೂಲ ಬೆಲೆ 50 ಲಕ್ಷರು) ಗೆ 2.3 ಕೋಟಿ ರು ಕೊಟ್ಟು ಖರೀದಿಸಿದ ಗುಜರಾತ್ ಲಯನ್ಸ್
* ಕೆವಿನ್ ಪೀಟರ್ಸನ್ 3.5 ಕೋಟಿ ರು ಗೆ ಪುಣೆ ಪಾಲು
* ಕೆವಿನ್ ಪೀಟರ್ಸನ್ (ಮೂಲ ಬೆಲೆ 2 ಕೋಟಿ ರು) -ಪುಣೆ ಹಾಗೂ ಗುಜರಾತ್ ನಿಂದ್ ಬಿಡ್ಡಿಂಗ್
* 329.72 ಕೋಟಿ ರುಗಳನ್ನು 8 ಫ್ರಾಂಚೈಸಿಗಳು ಖರ್ಚು ಮಾಡಿ ಸೀಸನ್ 9 ಗಾಗಿ ತಂಡದಲ್ಲಿದ್ದ ಕೆಲ ಆಟಗಾರರನ್ನು ಉಳಿಸಿಕೊಂಡಿದ್ದಾರೆ.

ಪ್ರತಿ ತಂಡಕ್ಕೂ ಲಭ್ಯವಿರುವ ಮೊತ್ತ : 66 ಕೋಟಿ ರು, 2 ಕೋಟಿ ರು ಗರಿಷ್ಠ ಬೆಲೆ, 10 ಲಕ್ಷ ರು ಕನಿಷ್ಠ ಬೆಲೆ.
ರಿಚರ್ಡ್ ಮಾಡ್ಲೆ ಹರಾಜು ನಡೆಸಿಕೊಡಲಿದ್ದಾರೆ. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X