ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯ ನೋಡಲು ಯೋಧರಿಗೆ ಆಹ್ವಾನವಿತ್ತ ಕರ್ನಾಟಕ ಕ್ರಿಕೆಟ್ ಸಂಸ್ಥೆ

ಕರ್ನಾಟಕ, ಕೇರಳ ಸೇನಾ ವಲಯದ ಸುಮಾರು ಐದು ಸಾವಿರ ಯೋಧರಿಗೆ ಪಂದ್ಯದ ಕೊನೆಯ ಮೂರು ದಿನಗಳ ಆಟವನ್ನು ನೋಡುವ ಅವಕಾಶ.

ಬೆಂಗಳೂರು, ಫೆಬ್ರವರಿ 24: ಭಾರತೀಯ ಸೇನೆಯ ಸುಮಾರು 5 ಸಾವಿರ ಯೋಧರಿಗೆ ಮುಂದಿನ ತಿಂಗಳ 4ರಿಂದ 8ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಉಚಿತವಾಗಿ ನೋಡುವ ಅವಕಾಶವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ನೀಡಿದೆ.

ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯದ ಕೊನೆಯ ಮೂರು ದಿನಗಳಿಗೆ ಈ ಪ್ರವೇಶ ನೀಡಲಾಗಿದೆ ಎಂದು ಕೆಎಸ್ ಸಿಎ ವಕ್ತಾರರಾದ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ ಭಾರತೀಯ ಸೇನೆಯ ಕಚೇರಿ ಹಾಗೂ ಕೇರಳ ಉಪ ವಿಭಾಗಗಳ ಕೇಂದ್ರ ಕಚೇರಿಯ ಅಧೀನದಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ತಿಳಿಸಿದರು.

KSCA invites 5000 army personnel to watch test match in Chinnaswamy stadium


ಯೋಧರ ಜತೆಗೆ, ಹಲವಾರು ಬಡ ವಿದ್ಯಾರ್ಥಿಗಳಿಗೂ ಈ ಟೆಸ್ಟ್ ಪಂದ್ಯದ ಕೊನೆಯ ಮೂರು ದಿನಗಳ ಪಂದ್ಯವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ 'ಪಯೋನಿಯರ್ ಕಾರ್ಪ್ಸ್ ಟ್ರೈನಿಂಗ್ ಸೆಂಟರ್ ಮಿಲಿಟರಿ ಬ್ಯಾಂಡ್'ನ ಕಲಾವಿದರು ಪಂದ್ಯದ ಟೀ ಹಾಗೂ ಲಂಚ್ ಬ್ರೇಕ್ ಗಳ ವೇಳೆ ತಮ್ಮ ವಾದ್ಯಗೋಷ್ಠಿಯ ಮೂಲಕ ಮನರಂಜನೆ ನೀಡಲಿದ್ದಾರೆ.

ಅಂದಹಾಗೆ, ಟೆಸ್ಟ್ ಪಂದ್ಯದ ಟಿಕೆಟ್ ಗಳಿಗಾಗಿ ಫೆ. 25, 26ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಮಾರಾಟಕ್ಕೆ ಏರ್ಪಾಟು ಮಾಡಲಾಗಿದೆ ಎಂದು ವಿನಯ್ ಮೃತ್ಯಂಜಯ ತಿಳಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X