ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಟ್ರೋಫಿಗಾಗಿ ಹುಬ್ಬಳ್ಳಿ-ಬಿಜಾಪುರ ಸೆಣಸು

ಮೈಸೂರು, ಸೆಪ್ಟೆಂಬರ್. 20 : ಕನ್ನಡಿಗರನ್ನು ರಂಜಿಸಿದ ಕೆಪಿಎಲ್ ಅಂತಿಮ ಘಟ್ಟ ತಲುಪಿದ್ದು ಭಾನುವಾರ ಸಂಜೆ ಹುಬ್ಬಳ್ಳಿ ಟೈಗರ್ಸ್ ಮತ್ತು ಬಿಜಾಪುರ ಬುಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಶನಿವಾರ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು 23 ರನ್ ಗಳಿಂದ ಬಗ್ಗು ಬಡಿದ ಹುಬ್ಬಳ್ಳಿ ಟೈಗರ್ಸ್ ಫೈನಲ್ ಗೆ ಲಗ್ಗೆ ಇಟ್ಟಿತು. [ಕೆಪಿಎಲ್ : ಮಂಗಳೂರನ್ನು ಬಗ್ಗು ಬಡಿದ ಹುಬ್ಬಳ್ಳಿ ಹುಲಿಗಳು]

KPL 2015: Hubli Tigers to face Bijapur Bulls in final

ಎರಡು ತಂಡಗಳು ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದು ಚೊಚ್ಚಲ ಪ್ರಶಸ್ತಿ ಕನಸು ಕಾಣುತ್ತಿವೆ. ಹುಬ್ಬಳ್ಳಿ ನೀಡಿದ 178 ರನ್ ಗಳ ಗುರಿ ಬೆನ್ನು ಹತ್ತಿದ ಬೆಳಗಾವಿ 20 ಓವರ್ ಗಳಲ್ಲಿ 154 ರನ್ ಗಳಿಸಲು ಮಾತ್ರ ಶಕ್ತವಾಯಿತು. ಹುಬ್ಬಳ್ಳಿ ಪರ ಮೊಹಮದ್ ತಾಹಾ 93 ರನ್ ಗಳ ಭರ್ಜರಿ ಕಾಣಿಕೆ ನೀಡಿದ್ದರು.

ಕಣಕ್ಕಿಳಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಮೊಹಮದ್ ತಾಹ ಮತ್ತು ಕೆ.ಬಿ. ಪವನ್ (9) ತಂಡಕ್ಕೆ 54 ರನ್ ಗಳ ಆರಂಭ ಒದಗಿಸಿದರು. 56 ಚೆಂಡುಗಳಲ್ಲಿ 93 ರನ್ ಗಳಿಸಿದ ತಾಹ ಇನಿಂಗ್ಸ್ ನಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ತಾಹ ಪಂದ್ಯದ ಹೀರೋ ಆಗಿ ಹೊರಹೊಮ್ಮಿದರು.[ಕೆಪಿಎಲ್: ದಾಖಲೆ ಬರೆದ 15ರ ಹರೆಯದ ಮೈಸೂರು ಹುಡುಗ]

ಸಾಂಸ್ಕೃತಿಕ ನಗರಿ ಫೈನಲ್ ಪಂದ್ಯಕ್ಕೆ ಸಜ್ಜಾಗಿದ್ದು ಸೆಪ್ಟೆಂಬರ್ 20 ರಂದು ಸಂಜೆ 5 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸೋನಿ ಸಿಕ್ಸ್ ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಣೆ ಮಾಡಬಹುದು. ಎರಡನೇ ಕ್ಯಾಲಿಫೈಯರ್ ನಲ್ಲಿ ಸೋತ ಬೆಳಗಾವಿ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತು. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೆಪಿಎಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದ್ದು ಜನರಿಂದ ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X