ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2015: ರಾಬಿನ್, ಸಾದಿಕ್, ಕಾರ್ಯಪ್ಪ ಸ್ಟಾರ್ಸ್

By Mahesh

ಮೈಸೂರು, ಸೆ.21: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸ್ಮರಣಾರ್ಥವಾಗಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಆಯೋಜನೆಯ ಕರ್ನಾಟಕ ಪ್ರಿಮಿಯರ್ ಲೀಗ್ 2015ರಲ್ಲಿ ರಾಬಿನ್ ಉತ್ತಪ್ಪ, ಸಾದಿಕ್ ಕಿರ್ಮಾನಿ ಹಾಗೂ ಕೆಸಿ ಕಾರ್ಯಪ್ಪ ಅವರು ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು.[ಹುಬ್ಬಳ್ಳಿ ಟೈಗರ್ಸ್ ಮಣಿಸಿದ ಬಿಜಾಪುರ ಬುಲ್ಸ್ ಚಾಂಪಿಯನ್ಸ್]

ಬಿಜಾಪುರ ಬುಲ್ಸ್ ಪರ ಆಡಿದ ರಾಬಿನ್ ಉತ್ತಪ್ಪ ಹಾಗೂ ಕೆಸಿ ಕಾರ್ಯಪ್ಪ ಅವರು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಲೀಗ್ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಮ್ಮ ಶಿವಮೊಗ್ಗ ತಂಡದ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್, ವಿಶ್ವಕಪ್ ವಿಜೇತ ಸೈಯದ್ ಕಿರ್ಮಾನಿ ಅವರ ಮಗ ಸಾದಿಕ್ ಕಿರ್ಮಾನಿ ಈ ಬಾರಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರ ಹೊಮ್ಮಿದ್ದಾರೆ.

Full list of award winners and important statistics

ಕೆಪಿಎಲ್ 2015 ಅಂಕಿ ಅಂಶ ಹಾಗೂ ಪ್ರಶಸ್ತಿ ವಿಜೇತರು:
* ಅಂತಿಮ ಪಂದ್ಯದ ಪಂದ್ಯಶ್ರೇಷ್ಠ: ವೈಶಾಕ್ ವಿಜಯಕುಮಾರ್ (3/16, 4 ಓವರ್ಸ್)
* ಅತಿ ಹೆಚ್ಚು ರನ್ ಸ್ಕೋರರ್ (ಕಿತ್ತಳೆ ಟೋಪಿ) ಸಾದಿಕ್ ಕಿರ್ಮಾನಿ (ನಮ್ಮ ಶಿವಮೊಗ್ಗ): 7 ಪಂದ್ಯ 338 ರನ್.
* ಅತಿ ಹೆಚ್ಚು ವಿಕೆಟ್ ಗಳಿಕೆ (ನೇರಳೆ ಟೋಪಿ) ಕೆಸಿ ಕಾರ್ಯಪ್ಪ (ಬಿಜಾಪುರ ಬುಲ್ಸ್) : 9 ಪಂದ್ಯಗಳಲ್ಲಿ 16 ವಿಕೆಟ್ ಗಳು.
* ಅತಿ ಹೆಚ್ಚು ಸಿಕ್ಸರ್: ಸಾದಿಕ್ ಕಿರ್ಮಾನಿ : 17.
* ಸರಣಿ ಶ್ರೇಷ್ಠ: 8 ಇನ್ನಿಂಗ್ಸ್ 290ರನ್, ವಿಕೆಟ್ ಕೀಪರ್ ಆಗಿ 13 ವಿಕೆಟ್ - ರಾಬಿನ್ ಉತ್ತಪ್ಪ (ಬಿಜಾಪುರ್ ಬುಲ್ಸ್)
* ಸರಣಿಯ ಅತ್ಯಂತ ನಂಬುಗೆಯ ಆಟಗಾರ : ಮೊಹಮ್ಮದ್ ತಾಹ (308 ರನ್ ಗಳು)
* ಅತಿಹೆಚ್ಚು ವೈಯಕ್ತಿಕ ಮೊತ್ತ: ಮಾಯಾಂಕ್ ಅಗರವಾಲ್ (ಬೆಳಗಾವಿ ಪ್ಯಾಂಥರ್ಸ್) 103.

ಪ್ರಶಸ್ತಿ ಮೊತ್ತ
ಚಾಂಪಿಯನ್ (ಬಿಜಾಪುರ ಬುಲ್ಸ್) : 10 ಲಕ್ಷ ರು.
ರನ್ನರ್ ಅಪ್ (ಹುಬ್ಬಳ್ಳಿ ಟೈಗರ್ಸ್) : 5 ಲಕ್ಷ ರು.
ಸೆಮಿಫೈನಲ್ ತಲುಪಿದ ತಂಡಗಳಿಗೆ: ತಲಾ 2.5 ಲಕ್ಷ ರು.

KPL


ಕೆಪಿಎಲ್ ಚಾಂಪಿಯನ್ ಗಳು:
2009ರ ಚಾಂಪಿಯನ್: ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ)
2010: ಮಂಗಳೂರು ಯುನೈಟೆಡ್
2011 to 2013 - ಟೂರ್ನಿ ನಡೆದಿರಲಿಲ್ಲ.
2014 - ಮೈಸೂರು ವಾರಿಯರ್ಸ್
2015 - ಬಿಜಾಪುರ್ ಬುಲ್ಸ್

ಚಾಂಪಿಯನ್ಸ್ ಬಿಜಾಪುರ ಬುಲ್ಸ್ ಪೂರ್ಣ ತಂಡ: ಬಿ ಅಖಿಲ್ (ನಾಯಕ), ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್, ಕೆಸಿ ಕಾರ್ಯಪ್ಪ, ಆರ್ ಸಮರ್ಥ್, ರಾಘವೇಂದ್ರ ಸಿ, ಕೆಪಿ ಅಪ್ಪಣ್ಣ, ವೈಶಾಕ್ ವಿಜಯ್ ಕುಮಾರ್, ಆದಿತ್ಯ ಸೋಮಣ್ಣ, ರಾಜು ಭಟ್ಕಳ, ಸುನೀಲ್ ರಾಜು, ಶರತ್ ಬಿಆರ್, ದೀಪಕ್ ಚೌಗುಲೆ, ನಿದೇಶ್ ಎಂ, ರಿತೇಶ್ ಭಟ್ಕಳ, ಭರತ್ ಬಿ, ಶರಣ್ ಗೌಡ, ರಾಜಾ ನಾಯಕ್

ಮಾಲೀಕರು: ವಿವಿಡ್ ಕ್ರಿಯೇಷನ್ಸ್, ಸಿಐಒ, ಕಿರಣ್ ಕಟ್ಟಿಮನಿ.

ಸಹಾಯಕ ಸಿಬ್ಬಂದಿ: ರಾಜಶೇಖರ್ ಶಾಂಬಾಳ್, ಕೋಚ್: ಅನಿಲ್, ಸಹಾಯಕ ಕೋಚ್: ನಾಗೇಂದ್ರ ಪ್ರಸಾದ್, ತರಬೇತುದಾರ: ಡಾ. ಮಂಜುನಾಥ್, ಫಿಜಿಯೋ: ಎಆರ್ ಶ್ರೀಕಾಂತ್, ಮಾರ್ಗದರ್ಶಕ: ಸುಧೀಂದ್ರ ಶಿಂಧೆ.

ಟೂರ್ನಿ ಪ್ರಮುಖ ಅಂಶಗಳು:
ಬೌಂಡರಿ: 701
ಸಿಕ್ಸರ್: 224
ಅರ್ಧ ಶತಕ: 35
ಶತಕ :1
ವಿಕೆಟ್ : 363
ಕ್ಯಾಚ್ : 226
ಡಾಟ್ ಬಾಲ್ಸ್ : 2,472

ಅತ್ಯಂತ ಮಿತವ್ಯಯಿ ಬೌಲಿಂಗ್ (4 ಓವರ್ ) 4.00-ಟಿ ಪ್ರದೀಪ್ (ಮಂಗಳೂರು ಯುನೈಟೆಡ್)
ಅತ್ಯಂತ ಹೆಚ್ಚಿನ ಸ್ಟ್ರೈಕ್ ರೇಟ್: (ಕನಿಷ್ಠ 25ರನ್) 226.67- ಜೆ ಸುಚಿತ್ ( ಮೈಸೂರು ವಾರಿಯರ್ಸ್)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X