ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ತಂಡದ ಮಾನ ಕಾಪಾಡಿದ ಕರುಣ್ ನಾಯರ್

By Mahesh

ವಯನಾಡು (ಕೇರಳ), ಆಗಸ್ಟ್ 21: ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಕರುಣ್ ನಾಯರ್ ಆಟದ ನೆರವಿನಿಂದ ಭಾರತ 'ಎ' ತಂಡದ ಮಾನ ಉಳಿದಿದೆ. ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಡ್ರಾ ಸಾಧಿಸಿದೆ.

ಗೆಲುವಿಗೆ ಬೇಕಾದ 444 ರನ್ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಎ ತಂಡ ದಿನದ ಅಂತ್ಯಕ್ಕೆ 309/4 ರನ್ ಗಳಿಸಿದ್ದಾಗ ಅಂಪೈರ್ ಗಳು ಪಂದ್ಯವನ್ನು ಮುಕ್ತಾಯಗೊಳಿಸಿದರು. ಭಾರತ ಎ ನಾಯಕ ಅಂಬಟಿ ರಾಯುಡು ಹಾಗೂ ದಕ್ಷಿಣ ಆಫ್ರಿಕಾ ಎ ತಂಡದ ನಾಯಕ ಡೇನ್ ವಿಲಾಸ್ ಅವರು ಕೂಡಾ ಡ್ರಾಗೆ ಸಮ್ಮತಿಸಿದರು.

Karun Nair's century helps India A earn a draw against South Africa A

ಪಂದ್ಯದ ಕೊನೆ ದಿನವಾದ ಶುಕ್ರವಾರ (ಆಗಸ್ಟ್ 21) ಭಾರತ ಎ ಪರ 23 ವರ್ಷ ವಯಸ್ಸಿನ ಕರುಣ್ ನಾಯರ್ ಅವರು ಅಜೇಯ 114ರನ್ ಗಳಿಸಿದ್ದು ವಿಶೇಷವಾಗಿತ್ತು. 192 ಎಸೆತಗಳಲ್ಲಿ ಶತಕ ಬಾರಿಸಿದ ಕರುಣ್ ಅವರ ಆಕರ್ಷಕ ಆಟದಲ್ಲಿ 18 ಬೌಂಡರಿ ಹಾಗೂ ಒಂದು ಸಿಕ್ಸ್ ಇತ್ತು.

ಕರುಣ್ ನಾಯರ್ ಗೆ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಸಾಥ್ ನೀಡಿದರು. ಇಬ್ಬರು ಐದನೇ ವಿಕೆಟ್ ಗೆ ಮುರಿಯದ 148 ರನ್ ಜೊತೆಯಾಟ ಪ್ರದರ್ಶಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X