ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯಂತೆ ಸಿಕ್ಸ್ ಎತ್ತಿದ ಎಲಿಯಟ್ 'ನ್ಯೂ' ಹೀರೋ

By Mahesh

ಆಕ್ಲೆಂಡ್, ಮಾ.24: ಗ್ರಾಂಟ್ ಡೇವಿಡ್ ಎಲಿಯಟ್ ನ್ಯೂಜಿಲೆಂಡ್ ನ ಹೊಸ ಕ್ರಿಕೆಟ್ ಹೀರೋ ಆಗಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಎಡನ್ ಪಾರ್ಕ್ ನಲ್ಲಿ ವಿರೋಚಿತ ಆಟವಾಡಿ ತಮ್ಮ ತಂಡವನ್ನು ವಿಶ್ವಕಪ್ 2015 ಫೈನಲ್ ಗೆ ಮುಟ್ಟಿಸಿದ್ದು ಈಗ ಇತಿಹಾಸ.

ಅಂದ ಹಾಗೆ ನ್ಯೂಜಿಲೆಂಡ್ ನಿವಾಸಿ ಎಲಿಯಟ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಎಂಬುದು ವಿಶೇಷ. ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರಗಣ್ಯ ವೇಗಿ ಡೇಲ್ ಸ್ಟೇನ್ ಐದನೇ ಎಸೆತವನ್ನು ಸಿಕ್ಸರ್ ಎತ್ತುವ ಮೂಲಕ ವಿಜಯೋತ್ಸವ ಅಚರಿಸಿದರು. ಈ ಮೂಲಕ ಫೈನಲ್ ತಲುಪುವ ಕನಸು ಹೊತ್ತಿದ್ದ ದಕ್ಷಿಣ ಆಫ್ರಿಕಾ ಕಣ್ಣೀರ ಕೋಡಿ ಹರಿಸುವಂತೆ ಮಾಡಿದರು.[ಚಿತ್ರಗಳಲ್ಲಿ: ಕಣ್ಣೀರು ಹರಿಸಿದ ಹರಿಣಗಳು, ಕೇಕೆ ಹಾಕಿದ ಕಿವಿಗಳು]

ಮಳೆ ಪೀಡಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಒಡ್ಡಿದ್ದ 43 ಓವರ್ ಗಳಲ್ಲಿ 298 ರನ್ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು 1 ಎಸೆತ ಬಾಕಿ ಇರುವಂತೆ ಚೇಸ್ ಮಾಡಿದರು. ಬ್ರೆಂಡನ್ ಮೆಕಲಮ್ ಕೊಟ್ಟ ಉತ್ತಮ ಆರಂಭದ ಲಾಭ ಪಡೆದ ಎಲಿಯಟ್ ಎಚ್ಚರಿಕೆಯ ಆಟವಾಡಿ ತಾಳ್ಮೆ ಕಾಯ್ದುಕೊಂಡು ಜಯದ ನಗೆ ಬೀರಿದರು. [ಟ್ವೀಟ್ಸ್ ಸುರಿಮಳೆ: ಹರಿಣಗಳ ರೋದನೆ, ಕಿವೀಸ್ ಸಾಧನೆ]

Johannesburg-born Grant Elliott does a Dhoni to knock South Africa out of World Cup

ವಿಶ್ವಕಪ್ 2015 ವಿಶೇಷ ಪುಟ
ಧೋನಿ ನೆನಪಿಸಿದ ಎಲಿಯಟ್: 36 ವರ್ಷದ ಎಲಿಯಟ್ ಸಿಕ್ಸ್ ಎತ್ತಿ ಗೆಲ್ಲಿಸಿದ್ದು, ಧೋನಿ ಅಟವನ್ನು ನೆನಪಿಸಿತು. 2 ಎಸೆತ 5 ರನ್ ಬೇಕಿದ್ದಾಗ ಸೆಮಿಫೈನಲ್ ಪಂದ್ಯದ ರೋಚಕ ಕ್ಷಣದಲ್ಲಿ ಸಹನೆಯುಕ್ತ ಆಟವಾಡಿ ಅಂತ್ಯದಲ್ಲಿ ಸಿಕ್ಸ್ ಎತ್ತುವ ಮೂಲಕ ತಂಡವನ್ನು ಫೈನಲ್ ಹಂತ ತಲುಪಿಸಿದರು.

2011ರ ವಿಶ್ವಕಪ್ ನಲ್ಲಿ ವಾಂಖೆಡೇ ಸ್ಟೇಡಿಯಂನಲ್ಲಿ ಸಿಕ್ಸ್ ಎತ್ತಿ ಕಪ್ ಎತ್ತಿ ಹಿಡಿದ ಧೋನಿ ಅವರು ಎಲಿಯಟ್ ನ ಈ ಸಿಕ್ಸ್ ನೋಡಿದ್ದರೆ ಮೆಚ್ಚದೆ ಇರಲಾರರು.


ನ್ಯೂಜಿಲೆಂಡ್ ಪ್ರಥಮ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಲು ನೆರವಾದ ಎಲಿಯಟ್ ಅಜೇಯ 84ರನ್(73 ಎಸೆತ, 7x4,3x6) ಸಿಡಿಸಿದ್ದು ನ್ಯೂಜಿಲೆಂಡ್ ಅಭಿಮಾನಿಗಳಲ್ಲದೆ ವಿಶ್ವದ ಹಲವೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವಕಪ್ ನಲ್ಲಿ ಸತತ 8 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿರುವ ನ್ಯೂಜಿಲೆಂಡ್ ಮ.29ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ)ದಲ್ಲಿ ಭಾರತ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X