ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ

By Mahesh

ಪುಣೆ, ಏಪ್ರಿಲ್ 25: ಇಂಡಿಯನ್ ಪ್ರೀಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ಹೊಚ್ಚ ಹೊಸ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿ ಅವರು ಸೋಲಿನಲ್ಲೂ ದಾಖಲೆ ಬರೆದಿದ್ದಾರೆ. ಐಪಿಎಲ್ ಸೀಸನ್ ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಕಳೆದುಕೊಂಡ ನಾಯಕ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಎಂಎಸ್ ಧೋನಿ ನೇತೃತ್ವ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ತಂಡ ಐಪಿಎಲ್-9ರಲ್ಲಿ ತನ್ನ ಸತತ 4ನೇ ಸೋಲು ಕಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಪುಣೆ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ವಿಕೆಟ್ ಗಳಿಂದ ಸೋಲಿಸಿದೆ.[]

ಕೋಲ್ಕತ್ತಾ ಪರ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಮೇಲಿನ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ 60 ರನ್(49 ಎಸೆತ, 6‍X4, 2X6) ಅರ್ಧಶತಕದ ನೆರವಿನಿಂದ ಗೆಲುವಿನ ದಡ ಮುಟ್ಟಿತು.[ಧೋನಿ ಪಡೆಗೆ ಇನ್ನೊಂದು ಆಘಾತ!]

IPL 2016: Suryakumar Yadav stars in KKR's thrilling win as KKR pip Pune Supergiants by two wickets

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪುಣೆ ತಂಡಕ್ಕೆ ಮತ್ತೊಮ್ಮೆ ಅಜಿಂಕ್ಯ ರಹಾನೆ ಆಸರೆಯಾದರು. 67ರನ್( 52ಎಸೆತ, 4X4, 3X6) ಅರ್ಧಶತಕ, ಸ್ಟೀವನ್ ಸ್ಮಿತ್ 31ರನ್, ಎಂಎಸ್ ಧೋನಿ ಅಜೇಯ 23ರನ್(12ಎಸೆತ) ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್​ಗೆ 160 ರನ್ ಗಳಿಸಿತು. ಆದರೆ, ಕೆಕೆಆರ್ ತಂಡ 19.3 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 162 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ಲಯಕ್ಕೆ ಮರಳಿದ ಯೂಸುಫ್ ಪಠಾಣ್ 36 ರನ್(27 ಎಸೆತ, 2X4, 2X6) ಅವರು ಯಾದವ್ ಗೆ ಸಾಥ್ ನೀಡಿದರು. ಇಬ್ಬರು 47 ಎಸೆತ ಗಳಲ್ಲಿ 51 ರನ್​ಗಳ ಜೊತೆಯಾಟ ಸಾಧಿಸಿದ್ದು, ನಿರ್ಣಾಯಕವಾಯಿತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X