ಐಪಿಎಲ್: ಕೊಹ್ಲಿ, ಧೋನಿ ಸಂಬಳ ವಿವರ ಬಹಿರಂಗ

By:
Subscribe to Oneindia Kannada

ಬೆಂಗಳೂರು, ಜ.04: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 2016ರ ಆವೃತ್ತಿಗಾಗಿ 6 ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಐಪಿಎಲ್ ನ ಪ್ರಮುಖ ಆಟಗಾರರ ಸಂಬಳ ವಿವರ ಕೂಡಾ ಬಹಿರಂಗವಾಗಿದೆ.

ಕಳೆದ ವರ್ಷದ ಅತ್ಯಂತ ದುಬಾರಿ ಆಟಗಾರ ಯುವರಾಜ್ ಸಿಂಗ್ (16 ಕೋಟಿ ರು) ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮುಂದಿನ ಸೀಸನ್ ಗೆ ತಂಡದಲ್ಲಿ ಉಳಿಸಿಕೊಂಡಿಲ್ಲ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚು (19 ) ಆಟಗಾರರನ್ನು ಉಳಿಸಿಕೊಂಡಿದೆ. ಐಪಿಎಲ್ 2016 ಏಪ್ರಿಲ್ 9 ರಿಂದ ಮೇ 29ರ ತನಕ ನಡೆಯಲಿದೆ.

Salary details of Kohli

ಪ್ರತಿ ತಂಡದಲ್ಲಿ ಎಷ್ಟೆಷ್ಟು ಹಣ ಉಳಿದಿದೆ. ಯಾವ ಆಟಗಾರನಿಗೆ ಎಷ್ಟು ಹಣ ಸಂದಾಯವಾಗುತ್ತಿದೆ ಎಂಬ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಸದ್ಯಕ್ಕೆ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ ಕೈಬಿಟ್ಟಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಅವರು 15 ಕೋಟಿ ರು ಪಡೆಯುವ ಮೂಲಕ ಅತ್ಯಧಿಕ ಸಂಬಳದಾರ ಎನಿಸಿಕೊಂಡಿದ್ದಾರೆ. ಬಿಸಿಸಿಐ 23 ಕ್ರಿಕೆಟರ್ ಗಳ ಸಂಬಳ ವಿವರ ನೀಡಿದೆ. ಉಳಿದಂತೆ, ಪುಣೆ ತಂಡ ಸೇರಿರುವ ಧೋನಿ ಅವರಿಗೆ ಹಳೆ ಒಪ್ಪಂದದಂತೆ 12.5 ಕೋಟಿ ರು ಸಿಗಲಿದೆ.


TeamPlayerCountryPurse Deduction (Indian Rupees)Actual Salary (INR)
1KXIPDavid MillerSouth Africa125,000,000.0050,000,000.00
2KXIPManan VoraIndia40,000,000.003,500,000.00
3KKRGautam GambhirIndia125,000,000.00&l t;/td>100,000,000.00
4KKRSunil NarineWest Indies95,000,000.0080,000,000.00
5MIRohit Sharma125,000,000.00115,000,002.00
6MIKeiron PollardWest Indies95,000,000.0097,000,000.00
7MILasith MalingaSri Lanka75,000,000.0081,000,000.00
8MIHarbhajan SinghIndia55,000,000.0080,000,000.00
9MIAmbati RayuduIndia40,000,000.0060,000,000.00
10RCBVirat KohliIndia125,000,000.00150,000,000.00
11RCBAB de VilliersSouth Africa95,000,000.0095,000,000.00
12RCBChris GayleWest Indies75,000,000.0084,000,000.00
13SRHShikhar DhawanIndia125,000,000.00125,000,000.00
14Team PuneMS Dhoni;India125,000,000.00125,000,000.00
15Team PuneAjinkya RahaneIndia95,000,000.0080,000,000.00
16Team PuneR AshwinIndia75,000,000.0075,000,000.00
17Team PuneSteve SmithAustralia55,000,000.0040,000,000.00
18Team PuneFaf du PlessisSouth Africa40,000,000.0047,500,000.00
19Team RajkotSuresh RainaIndia125,000,000.0095,000,000.00
20Team RajkotRavindra JadejaIndia95,000,000.0055,000,000.00
21Team RajkotBrendon McCullumNew Zealand75,000,000.0032,500,000.00
22Team RajkotJames FaulknerAu stralia55,000,000.0051,000,000.00
23Team RajkotDwayne BravoWest Indies40,000,000.0040,000,000.00

English summary
The Board of Control for Cricket in India (BCCI) has revealed the salary details of Indian Premier League's (IPL) top cricketers including national team captains Virat Kohli and MS Dhoni.
Please Wait while comments are loading...