ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈನಲ್ಲಿ ಐಪಿಎಲ್ ಹರಾಜು, ಎಂಎಸ್ ಧೋನಿ ಯಾರ ತೆಕ್ಕೆಗೆ?

ಮಂಬೈ, ಡಿಸೆಂಬರ್, 12: ಇಂಡಿಯನ್ ಪ್ರೀಮಿರ್ ಲೀಗ್ ಗೆ ವೇದಿಕೆ ಸಿದ್ಧವಾಗಿದೆ. ನಿಷೇಧಕ್ಕೆ ಗುರಿಯಾಗಿರುವ ಚೆನ್ನೈ ಮತ್ತು ರಾಜಸ್ಥಾನದ ಜಾಗದಲ್ಲಿ ಪುಣೆ ಮತ್ತು ರಾಜ್ ಕೋಟ್ ತಂಡಗಳು ಆಡಲು ಸಿದ್ಧವಾಗಿವೆ. ಹೊಸ ತಂಡಗಳಾದ ರಾಜ್ ಕೋಟ್ ಮತ್ತು ಪುಣೆ ತಂಡಗಳು ಡಿಸೆಂಬರ್ 15 ರಂದು 10 ಜನರ ತಂಡ ಆಯ್ಕೆ ಮಾಡಿಕೊಳ್ಳಲಿವೆ.

ಮುಂಬೈನ ಬಿಕೆಸಿ ಕ್ಲಬ್ ಹೌಸ್ ನಲ್ಲಿ ಡಿಸೆಂಬರ್ 15 ರಂದು ಮಧ್ಯಾಹ್ನ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಂಜೀವ್ ಗೊಯಂಕಾ ಮಾಲೀಕತ್ವದ ನ್ಯೂ ರೈಸಿಂಗ್ ಕನ್ಸೊರ್ಟಿಯಂ ಪುಣೆ ತಂಡವನ್ನು ಮುನ್ನಡೆಸಲಿದೆ. ಇಂಟೆಕ್ಸ್ ಮೊಬೈಲ್ ಸಂಸ್ಥೆ ರಾಜ್ ಕೋಟ್ ತಂಡವನ್ನು ಹೊಂದಿದೆ. ರಿವರ್ಸ್ ಬಿಡ್ಡಿಂಗ್ ಮಾದರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇವರೆಡು ಕಂಪನಿಗಳು ಮಾಲೀಕತ್ವ ಪಡೆದುಕೊಂಡಿವೆ.[ಬೆಂಗಳೂರಲ್ಲಿ ಧೋನಿ ಬ್ಯಾಟಿಂಗ್]

dhoni

ಕಡಿಮೆ ಬಿಡ್ ಮಾಡಿದ್ದ ಪುಣೆಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಅವಕಾಶ ಸಿಗಲಿದೆ. ಎರಡು ತಂಡಗಳು ಗರಿಷ್ಠ 66 ಕೋಟಿ ಮತ್ತು ಕನಿಷ್ಠ 40 ಕೋಟಿ ಮೊತ್ತದ ಒಳಗಡೆ ಎಲ್ಲ ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ.

ಎಂಎಸ್ ಧೋನಿ ಯಾರ ತೆಕ್ಕೆಗೆ?
ಆರಂಭದಿಂದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದು ಯಶಸ್ವಿ ನಾಯಕ ಎಂದು ಸಾಬೀತು ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಅವರನ್ನು ಯಾವ ತಂಡ ಖರೀದಿ ಮಾಡುತ್ತದೆ ಎಂಬುದು ಕುತೂಹಲದ ಸಂಗತಿಯಾಗಿದೆ. ನಿರೀಕ್ಷೆಯಂತೆ ಎಂಎಸ್ ಮೇಲೆ ಬಿಡ್ಡಿಂಗ್ ಪ್ರಭಾವ ಹೆಚ್ಚಲಿದೆ.
ಇನ್ನು ರಾಜ್ ಕೋಟ್ ತವರಿನ ಆಟಗಾರ ರವೀಂದ್ರ ಜಡೇಜಾ ಮೇಲೂ ದೃಷ್ಟಿ ನೆಡಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಡೇಜಾ ನೀಡಿದ ಪ್ರದರ್ಶನ ಇಲ್ಲಿ ಲೆಕ್ಕಕ್ಕೆ ಬರಲಿದೆ.[ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

ಟೆಂಡರ್ ಗೆ ಅನುಗುಣವಾಗಿ ಮೊದಲು ಆಯ್ಕೆ ಮಾಡಿಕೊಳ್ಳುವ ಆಟಗಾರನಿಗೆ 12.5 ಕೋಟಿ ರು. ನೀಡಬೇಕು. ನಂತರದವರಿಗೆ ಕ್ರಮವಾಗಿ 9.5, 7.5, 5.5 ಮತ್ತು ಉಳಿದವರಿಗೆ 4 ಕೋಟಿ ರು. ನೀಡಬೇಕಾಗುತ್ತದೆ.

ಹರಾಜಿಗೆ ಸಿಗದ ಆಟಗಾರರನ್ನು 4 ಕೋಟಿ ರು.ಗೆ ಖರೀದಿಸಬೇಕಾದ್ದು ಅನಿವಾರ್ಯ. ಫೆಬ್ರವರಿ 6ರಂದು ಉಳಿದ ಆಟಗಾರರ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ. 9ನೇ ಐಪಿಎಲ್ ಏಪ್ರಿಲ್ 9 ರಿಂದ ಮೇ 29 ರ ವರೆಗೆ ನಡೆಯಲಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X