ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿಗೆ ಆಘಾತ! ತಂಡದಿಂದ ಮಿಚೆಲ್ ಸ್ಟಾರ್ಕ್ ಹೊರಕ್ಕೆ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ಪ್ರಮುಖ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೊರನಡೆದಿದ್ದಾರೆ. ಈ ಬಗ್ಗೆ ಭಾನುವಾರ ಅಧಿಕೃತ ಪ್ರಕಟಿಸಲಾಗಿದೆ.

By Mahesh

ಬೆಂಗಳೂರು, ಫೆಬ್ರವರಿ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ಪ್ರಮುಖ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೊರನಡೆದಿದ್ದಾರೆ. ಈ ಬಗ್ಗೆ ಭಾನುವಾರ ಅಧಿಕೃತ ಪ್ರಕಟಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧಿನಿಯಮ 41 ದಂತೆ ಆರ್ ಸಿ ಬಿ ಹಾಗೂ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಸ್ಟಾರ್ಕ್ ಅವರು ಪರಸ್ಪರ ಸಮ್ಮತಿಯಿಂದ ಬೇರ್ಪಡುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.[2015: ಆರ್ ಸಿಬಿಗೆ ಕಿಕ್ ನೀಡಲು ಬಂದ ವಿಶ್ವಕಪ್ ಹೀರೋ]

IPL 2017: Royal Challengers Bangalore part ways with Mitchell Starc

[ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಎಸೆತ ಹಾಕಿದ ಮಿಚೆಲ್ ಸ್ಟಾರ್ಕ್]

ಸ್ಟಾರ್ಕ್ ಅವರು ತಂಡದಿಂದ ಹೊರ ನಡೆದಿರುವುದರಿಂದ ಆರ್ ಸಿಬಿ ಬಳಿ ಹೆಚ್ಚುವರಿ 5 ಕೋಟಿ ರು ಉಳಿಯಲಿದ್ದು, ಸೋಮವಾರ (ಫೆಬ್ರವರಿ 20) ದಂದು ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೋಟೆಲ್ ನಲ್ಲಿ ನಡೆಯಲಿರುವ ಐಪಿಎಲ್ 10 ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಆಟಗಾರರೊಬ್ಬರನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ತಂಡವೊಂದರಲ್ಲಿ ಗರಿಷ್ಠ 9 ವಿದೇಶಿ ಆಟಗಾರರಿರಬಹುದು. ಅರ್ ಸಿಬಿ 8 ಆಟಗಾರರನ್ನು ಹೊಂದಿದೆ.[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]

ಐಪಿಎಲ್ 10 ರಿಂದ ಔಟ್: ಸ್ಟಾರ್ಕ್ ಅವರ ಅನುಪಸ್ಥಿತಿಯ ಬಗ್ಗೆ ಕ್ರಿಕೆಟ್ ಅಸ್ಟೇಲಿಯಾ ಕೂಡಾ ಪ್ರಕಟಣೆ ಹೊರಡಿಸಿದ್ದು, ಈ ಬಾರಿ ಆರ್ ಸಿಬಿ ತಂಡವನ್ನಷ್ಟೇ ಅಲ್ಲ ಐಪಿಎಲ್ ಟೂರ್ನಮೆಂಟ್ ತೊರೆದಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧರಾಗಬೇಕಿದೆ ಎಂದು ಹೇಳಿದೆ.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

ಮಿಚೆಲ್ ಸ್ಟಾಕ್ರ್ ಪ್ರತಿಕ್ರಿಯಿಸಿ: ನಾನು ಮತ್ತೊಮ್ಮೆ ಬೆಂಗಳೂರು ಪರ ಆಡುತ್ತೇನೆ. ಈ ಬಾರಿ ಸಾಧ್ಯವಾಗುತ್ತಿಲ್ಲ, ಸದ್ಯಕ್ಕೆ ಆಟದಿಂದ ಬಿಡುವು ಪಡೆಯುತ್ತಿದ್ದೇನೆ. ಆರ್ ಸಿಬಿಗೆ ಶುಭವಾಗಲಿ ಎಂದಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿ ನಂತರ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿ ಅಗತ್ಯ ಇರುವುದರಿಂದ ಸ್ಟಾರ್ಕ್ ಗೆ ವಿಶ್ರಾಂತಿ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.[ಬೆಂಗಳೂರಿನ ಐಪಿಎಲ್ ಹರಾಜಿಗೆ ಸಂಪೂರ್ಣ ಗೈಡ್]

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X