ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ರೋಹಿತ್ ಶರ್ಮ ಅವರಿಗೆ ಶೇ 50ರಷ್ಟು ದಂಡ

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಕಳೆದ ಪಂದ್ಯದಲ್ಲಿ ಸಿಕ್ಕ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ.

By Mahesh

ಮುಂಬೈ, ಏಪ್ರಿಲ್ 25: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರಿಗೆ ಏಪ್ರಿಲ್ 24ರ ದಿನ ಯಾಕೋ ಚೆನ್ನಾಗಿರಲಿಲ್ಲ. ಪುಣೆ ವಿರುದ್ಧ ಮ್ಯಾಚ್ ಸೋತಿದ್ದಲ್ಲದೆ, ಪಂದ್ಯದ ಸಂಭಾವನೆಯಲ್ಲೂ ಶೇ 50ರಷ್ಟು ಕಳೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಿದೆ. ಅಂಪೈರ್ ತೀರ್ಮಾನಕ್ಕೆ ಅಸಮ್ಮತಿ ಸೂಚಿಸಿದ್ದರಿಂದ ಐಸಿಸಿ ನಿಯಮದ ಪ್ರಕಾರ ದಂಡ ಹಾಕಲಾಗಿದೆ.[ಐಪಿಎಲ್ 2017: ಅಂಕಪಟ್ಟಿ]

IPL 2017: Rohit Sharma fined 50% of match fee

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ರೈಸಿಂಗ್ ಪುಣೆ ಸೂಪರ್‍ ಜೈಂಟ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಅಂಪೈರ್ ತೀರ್ಮಾನಕ್ಕೆ ರೋಹಿತ್ ಶರ್ಮ ಅಸಮ್ಮತಿ ಸೂಚಿಸಿದ್ದರು.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]

ಐಪಿಎಲ್ ಕೋಡ್ 2.1.5ನ ವಿಭಾಗ 1ರ ಅಪರಾಧಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ರೋಹಿತ್ ಶರ್ಮರ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ. ಆದರೆ, ರೋಹಿತ್ ಯಾವುದೇ ರೀತಿ ಅಸಮ್ಮತಿ ಸೂಚಿಸಿಲ್ಲ ಎಂದು ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

161ರನ್ ಚೇಸ್ ಮಾಡುತ್ತಿದ್ದ ಮುಂಬೈ ತಂಡಕ್ಕೆ ಕೊನೆ ಓವರ್ ನಲ್ಲಿ 17ರನ್ ಗೆಲ್ಲಲು ಅಗತ್ಯವಿತ್ತು. ಜಯದೇವ್ ಉನದ್ಕತ್ ಅವರ ಎಸೆತವನ್ನು ಸಿಕ್ಸರ್ ಬಾರಿಸಿದ್ದ ರೋಹಿತ್ ಅವರು ಪಂದ್ಯವನ್ನು ಮುಗಿಸುವ ಆತುರದಲ್ಲಿದ್ದರು.[ಗ್ಯಾಲರಿ: ಐಪಿಎಲ್ 10]

ಆದರೆ, ಮೂರನೇ ಎಸೆತದಲ್ಲಿ ರೋಹಿತ್ ಸ್ಟಂಪ್ ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಿದರು. ಇದರಿಂದ ಬಾಲ್ ವೈಡ್ ಆಗಿದ್ದು ಕಾಣದೆ ಅಂಪೈರ್ ಅವರು ವೈಡ್ ಎಂದು ಕರೆಯಲಿಲ್ಲ. ಇದರಿಂದ ಬೇಸತ್ತ ರೋಹಿತ್ ಅವರು ಅಂಪೈರ್ ಎಸ್ ರವಿ ಬಳಿ ತೆರಳಿ ತಮ್ಮಕೋಪವನ್ನು ಹೊರ ಹಾಕಿದ್ದರು'.

3 ಎಸೆತಗಳಲ್ಲಿ 11 ರನ್ ಬೇಕಿದ್ದಾಗ ನಾಲ್ಕನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. 39 ಎಸೆತಗಳಲ್ಲಿ 58ರನ್ ಗಳಿಸಿದ್ದು ವ್ಯರ್ಥವಾಯಿತು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X