ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರು ಸೋಲಿನ ಬಳಿಕ ಆರ್ ಸಿಬಿ ಪ್ಲೇ ಅಫ್ ಕನಸು ಭಗ್ನ?

ಆ ಆಘಾತಕಾರಿ ಸೋಲಿನಿಂದ ಹೊರಬರದ ಆರ್ ಸಿಬಿ ಐಪಿಎಲ್ 10ರಲ್ಲಿ ಸತತ ಆರು ಸೋಲು ಕಂಡಿದ್ದು, ಪ್ಲೇ ಆಫ್ ಹಂತಕ್ಕೇರುವುದು ಬಹುತೇಕ ಕಷ್ಟವಾಗಿದೆ. ಕೊಹ್ಲಿ ಪಡೆ ಕನಸು ಭಗ್ನಗೊಳ್ಳಲು ಸ್ವಯಂಕೃತ ಅಪರಾಧವೇ ಕಾರಣ,

By Mahesh

ಬೆಂಗಳೂರು, ಏಪ್ರಿಲ್ 28: ಆ ಆಘಾತಕಾರಿ ಸೋಲಿನಿಂದ ಹೊರಬರದ ಆರ್ ಸಿಬಿ ಐಪಿಎಲ್ 10ರಲ್ಲಿ ಸತತ ಆರು ಸೋಲು ಕಂಡಿದ್ದು, ಪ್ಲೇ ಆಫ್ ಹಂತಕ್ಕೇರುವುದು ಬಹುತೇಕ ಕಷ್ಟವಾಗಿದೆ. ಕೊಹ್ಲಿ ಪಡೆ ಕನಸು ಭಗ್ನಗೊಳ್ಳಲು ಸ್ವಯಂಕೃತ ಅಪರಾಧವೇ ಕಾರಣ, ಯಾವುದೇ ತಂಡದ ಶಕ್ತಿಯಾಗಿತ್ತೋ ಅದೇ ಬಲಹೀನತೆಯಾಗಿ ಪರಿಣಮಿಸಿ, ಅನಾಹುತವಾಗಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಐಪಿಎಲ್ 10ರಲ್ಲಿ ಮತ್ತೊಮ್ಮೆ ಆರ್ ಸಿಬಿಯ ಟಾಪ್ 3 ಬ್ಯಾಟಿಂಗ್ ಆಧಾರ ಶಕ್ತಿಗಳಾಗಿರುವ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಿಂಚುತ್ತಿಲ್ಲ.ಬೌಲಿಂಗ್ ಕೂಡಾ ಸಾಧಾರಣ ಮಟ್ಟ ಮೀರಿ ಮೇಲಕ್ಕೇರಿಲ್ಲ.

49ರನ್ನಿಗೆ ಆಲೌಟ್ ಆಗಿ ಕಳಪೆ ನಿರ್ವಹಣೆ ತೋರಿದ ಕೊಹ್ಲಿ ಪಡೆ, ಆಘಾತಕಾರಿ ಸೋಲಿನ ನೋವಿನಿಂದ ಹೊರ ಬಂದಿಲ್ಲ. ಮುಖ್ಯವಾಗಿ ತಂಡದಲ್ಲಿ ಇಚ್ಛಾಶಕ್ತಿ ಕೊರತೆ ಎದುರಾಗಿದೆ. ಇವರ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವ ಕಲೆ ಮರೆತಂತೆ ಕಾಣುತ್ತಿದೆ.

IPL 2017: RCB's play-off chances over after 6th loss?

ಉಳಿದ 5 ಪಂದ್ಯಗಳ ಪೈಕಿ ಎರಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದ್ದು, ಉಳಿದ ಮೂರು ಬೇರೆ ಕಡೆ ಆಡಲಿದೆ. ಐದು ಪಂದ್ಯಗಳನ್ನು ಉತ್ತಮ ರನ್ ಸರಾಸರಿಯಲ್ಲಿ ಗೆದ್ದರೂ 15 ಅಂಕಗಳನ್ನು ದಾಟುವುದಿಲ್ಲ.

ಏಪ್ರಿಲ್ 27, 2017ರಂತೆ ಆರ್ ಸಿಬಿ ರನ್ ರೇಟ್ ಅತ್ಯಂತ ಕಳಪೆಯಾಗಿದೆ. 8 ತಂಡಗಳ ಅಂಕಪಟ್ಟಿಯಲ್ಲಿ -1.401 ರನ್ ಸರಾಸರಿ ಹೊಂದಿದೆ.

ಆರ್ ಸಿಬಿ ಮುಂದಿನ ಪಂದ್ಯವನ್ನು ಪುಣೆಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಆಡಲಿದೆ. ನಂತರ ಮುಂಬೈ, ಪಂಜಾಬ್, ಕೆಕೆಆರ್ ಹಾಗೂ ದೆಹಲಿ ತಂಡವನ್ನು ಎದುರಿಸಲಿದೆ.

* ಏಪ್ರಿಲ್ 29 (ಶನಿವಾರ) - Vs ಫುಣೆ in ಪುಣೆ - 4 PM IST

* ಮೇ 1 (ಸೋಮವಾರ) - Vs ಮುಂಬೈ in ಮುಂಬೈ - 4 PM

* ಮೇ 5 (ಶುಕ್ರವಾರ) - Vs ಪಂಜಾಬ್ in ಬೆಂಗಳೂರು - 8 PM

* ಮೇ 7 (ಭಾನುವಾರ) - Vs ಕೋಲ್ಕತ್ತಾ in ಬೆಂಗಳೂರು- 4 PM

* ಮೇ 14 (ಭಾನುವಾರ) - Vs ಡೆಲ್ಲಿ ಡೇರ್ ಡೆವಿಲ್ಸ್ in ದೆಹಲಿ - 8 PM

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X