ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 10: ಸೋನಿ ಟಿವಿಯಿಂದ ಕನ್ನಡ ಕಾಮೆಂಟ್ರಿಗೆ ಕೊಕ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ 10ನೇ ಆವೃತ್ತಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಕನ್ನಡ ಭಾಷೆಯಲ್ಲಿ ಕೇಳಲು ಈ ಬಾರಿ ಸಾಧ್ಯವಿಲ್ಲ. ಈ ಬಗ್ಗೆ ಪ್ರಸಾರಕರಾದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಬುಧವಾರದಂದು ಸ್ಪಷ್ಟನೆ ನೀಡಿದೆ

By Mahesh

ಬೆಂಗಳೂರು, ಮಾರ್ಚ್ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ 10ನೇ ಆವೃತ್ತಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಕನ್ನಡ ಭಾಷೆಯಲ್ಲಿ ಕೇಳಲು ಈ ಬಾರಿ ಸಾಧ್ಯವಿಲ್ಲ. ಈ ಬಗ್ಗೆ ಪ್ರಸಾರಕರಾದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಬುಧವಾರದಂದು ಸ್ಪಷ್ಟನೆ ನೀಡಿ, ಕನ್ನಡ ಕಾಮೆಂಟ್ರಿ ನಮ್ಮ ಪಟ್ಟಿಯಲ್ಲಿಲ್ಲ ಎಂದಿದೆ.

ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?

ಐಪಿಎಲ್ ವೀಕ್ಷಕ ವಿವರಣೆಯನ್ನು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಪಡೆಯಬಹುದಾಗಿದೆ. ಇದಕ್ಕೆ ಪ್ರತ್ಯೇಕವಾಗಿ ಯಾವುದೇ ವ್ಯವಸ್ಥೆ ಬೇಡವಾಗಿದ್ದು, ಪ್ರಸಾರಕರಿಂದ ನೇರ ಫೀಡ್ ಲಭ್ಯವಿರುತ್ತದೆ.

IPL 2017: No television commentary in Kannada, say broadcasters


ಕಳೆದ ಆವೃತ್ತಿಯಿಂದ ಕೆಲವು ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲು ಆರಂಭಿಸಲಾಗಿದ್ದು,ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಏಪ್ರಿಲ್ 5ರಿಂದ ಮೇ 21ರವರೆಗೆ ಐಪಿಎಲ್ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಕನ್ನಡ ಕಾಮೆಂಟ್ರಿ ಕೇಳುವ ಯೋಗವಿಲ್ಲ.

ಷಡಗೋಪನ್ ರಮೇಶ್, ಹೇಮಂಗ್ ಬದಾನಿ ಮತ್ತು ವಿ.ಬಿ. ಚಂದ್ರಶೇಖರ್ ತಮಿಳಿನಲ್ಲಿ ಕಾಮೆಂಟ್ರಿ ನೀಡಲಿದ್ದಾರೆ. ವೆಂಕಟಾಪತಿ ರಾಜು, ವೇಣುಗೋಪಾಲ ರಾವ್ ಮತ್ತು ಕಲ್ಯಾಣ ಕೃಷ್ಣನ್ ತೆಲುಗಿನಲ್ಲಿ ವೀಕ್ಷಕ ವಿವರಣೆಗಾರರಾಗಿದ್ದಾರೆ. ಸೋನಿ ಸಿಕ್ಸ್ ನಲ್ಲಿ ಇಂಗ್ಲೀಷ್ ಫೀಡ್ ಸಿಗಲಿದೆ. ಸೋನಿ ಮ್ಯಾಕ್ಸ್ ನಲ್ಲಿ ಹಿಂದಿ ಆವೃತ್ತಿ ಪ್ರಸಾರವಾಗಲಿದೆ. ಈ ಹಿಂದೆ ಸುವರ್ಣ ಚಾನೆಲ್ ನಲ್ಲಿ ಕನ್ನಡ ವೀಕ್ಷಕ ವಿವರಣೆ ಲಭ್ಯವಿತ್ತು. (ಐಎಎನ್ಎಸ್)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X