ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಓವರ್ ನಲ್ಲಿ ಬೂಮ್ರಾ ಸೂಪರ್, ಮುಂಬೈಗೆ ಸೂಪರ್ ಗೆಲವು

ರಾಜ್‌ಕೋಟ್‌, ಏಪ್ರಿಲ್ 30: ಟಿ20 ಬೌಲಿಂಗ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬೂಮ್ರಾ ಅವರ ಸೂಪರ್ ಬೌಲಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ ಶನಿವಾರ ಗುಜರಾತ್ ಲಯನ್ಸ್ ತಂಡದ ವಿರುದ್ಧ ಸೂಪರ್ ಓವರ್‌ನಲ್ಲಿ 5 ರನ್‌ ಗಳಿಂದ ವಿರೋಚಿತ ಜಯ ಸಾಧಿಸಿದೆ.

ಐಪಿಎಲ್ ಹತ್ತನೇ ಆವೃತ್ತಿಯಲ್ಲಿ ಮೊಟ್ಟ ಮೊದಲ ಸೂಪರ್ ಓವರ್‌ ಪಂದ್ಯಕ್ಕೆ ಗುಜರಾತ್ ಲಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 ರನ್ ಗಳಿಸಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಮುಂಬೈ 153 ರನ್ ಗಳಿಸಿತು. ಇದರಿಂದ ಪಂದ್ಯ ಟೈ ಆಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಈವರ್ ನೀಡಿ ಸೂಪರ್ ಓವರ್ ಆಡಿಸಲಾಯಿತು.

IPL 2017 Mumbai Indians beat Gujarat in Super Over thriller

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ಕೀರನ್ ಪೊಲಾರ್ಡ್ ಅವರ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 1 ಓವರ್‌ನಲ್ಲಿ 2 ವಿಕೆಟ್‌ಗಳಿಗೆ 11 ರನ್‌ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಗುಜರಾತ್ 1 ಓವರ್‌ನಲ್ಲಿ ಕೇವಲ 6 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಲಯನ್ಸ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಗಳಾದ ಬ್ರೆಂಡನ್ ಮೆಕ್ಲಮ್ ಮತ್ತು ಆರಂನ್ ಫಿಂಚ್ ಅವರು ದೊಡ್ಡ ಹೊಡೆತಗಳಿಗೆ ಯತ್ನಿಸಿದರೂ ಬೂಮ್ರಾ ಅದಕ್ಕೆ ಅವರಕಾಶ ಮಾಡಿಕೊಡಲಿಲ್ಲ.

ಬೂಮ್ರಾ ತಮ್ಮ ಓವರ್ ಆರಂಭದಲ್ಲಿ ಒಂದು ನೋ ಬಾಲ್, ಒಂದು ವೈಡ್ ಎಸೆತಗಳನ್ನು ಹಾಕಿದ್ದರು ಗುಜರಾತ್ ಗೆಲವು ಸಾಧಿಸಲು ವಿಫಲವಾಯಿತು.

ಸ್ಕೋರ್ ವಿವರ:
ಗುಜರಾತ್‌ ಲಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 (ಇಶಾನ್ ಕಿಶನ್‌ 48, ರವೀಂದ್ರ ಜಡೇಜ 28, ಜೇಮ್ಸ್‌ ಫಾಕ್ನರ್ 21, ಟೈ 25. ಮಾಲಿಂಗ 33ಕ್ಕೆ2, ಬೂಮ್ರಾ 32ಕ್ಕೆ2, ಕೃಣಾಲ್ ಪಾಂಡ್ಯ 14ಕ್ಕೆ3).

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 153 (ಪಾರ್ಥಿವ್ ಪಟೇಲ್ 70, ನಿತೀಶ್ ರಾಣಾ 19, ಕೀರನ್ ಪೊಲಾರ್ಡ್ 15, ಕೃಣಾಲ್ ಪಾಂಡ್ಯ 29, ಬೇಸಿಲ್ ಥಂಪಿ 29ಕ್ಕೆ3, ಜೇಮ್ಸ್‌ ಫಾಕ್ನರ್ 34ಕ್ಕೆ2.

ಸೂಪರ್ ಓವರ್ ಸ್ಕೋರ್: ಮುಂಬೈ: 1 ಓವರ್‌ನಲ್ಲಿ 2 ವಿಕೆಟ್‌ಗೆ 11 (ಕೀರನ್ ಪೊಲಾರ್ಡ್ 10, ಜಾಸ್ ಬಟ್ಲರ್ 1, ಜೇಮ್ಸ್‌ ಫಾಕ್ನರ್ 11ಕ್ಕೆ2)
ಗುಜರಾತ್: 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 6 (ಬ್ರೆಂಡನ್ ಮೆಕ್ಲಮ್ 1, ಫಿಂಚ್ 2)
ಫಲಿತಾಂಶ: ಮುಂಬೈ ಇಂಡಿಯನ್ಸ್ ಗೆ ಸೂಪರ್‌ ಓವರ್‌ನಲ್ಲಿ ಜಯ. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕೃಣಾಲ್ ಪಾಂಡ್ಯ ಭಾಜನರಾದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X