ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್ಸ್ ಪಂಜಾಬ್ ದಾಳಿಗೆ ಬೆದರಿದ ಡೆಲ್ಲಿ ಡೇರ್ ಡೆವಿಲ್ಸ್

ಮೊಹಲಿ, ಏಪ್ರಿಲ್ 30 : ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೇಗಿ ಸಂದೀಪ್ ಶರ್ಮ ಅವರ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಡೇರ್ ಡೆವಿಲ್ಸ್ ಬೆದರಿ 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ.

ಇಲ್ಲಿನ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ 10ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ 17.1 ಓವರ್ ಗಳಲ್ಲಿ ಕೇವಲ 67 ರನ್ ಗಳಿಗೆ ಸರ್ವ ಪತನ ಕಂಡಿತು.

ಈ ಸುಲಭ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ವಿಕೆಟ್ ನಷ್ಟವಿಲ್ಲದೆ 7.5 ಓವರ್ ಗಳಲ್ಲಿ 68 ರನ್ ಗಳಿಸಿ 10 ವಿಕೆಟ್ ಗಳ ಸುಲಭ ಜಯ ಸಾಧಿಸಿತು.

IPL 2017: Punjab demolish Delhi by 10 wickets; Guptill-Sandeep shine for KXIP

ಡೆಲ್ಲಿ ಪರ ಕರುಣ್ ನಾಯರ್ 11, ಕೋರೆ ಆಂಡರ್ಸನ್ 18 ಮತ್ತು ರಬಾಡ 11 ರನ್ ಬಿಟ್ಟರೇ ಉಳಿದ ಯಾವೊಬ್ಬ ಆಟಗಾರನು ಎರಡಂಕಿಯ ಮೊತ್ತವನ್ನು ಕಲೆಹಾಕಿಲ್ಲ. ಪಂಜಾಬ್ ಪರ ಸಂದೀಪ್ ಶರ್ಮ ( 20ಕ್ಕೆ 4) ನಡೆಸಿದ ದಾಳಿಗೆ ಡೆಲ್ಲಿ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಅಕ್ಷರ್ ಪಟೇಲ್ 2 ಮತ್ತು ಅರುಣ್ ಅರನ್ 2 ವಿಕೆಟ್ ಪಡೆದು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಡೆಲ್ಲಿ 67 ರನ್ ಗಳಿಸುವಷ್ಟರಲ್ಲಿಯೇ ಸುಸ್ತಾಗಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಇನ್ನು 68 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಮಾರ್ಟಿನ್ ಗುಫ್ತಿಲ್ ಅಜೇಯ 50 ಮತ್ತು ಆಶಿಮ್ ಆಮ್ಲ 16 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X