ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುಣೆ ವಿರುದ್ಧ ಸೋತ ಆರ್ ಸಿಬಿ ಪ್ಲೇ ಆಫ್ ಕನಸು ನುಚ್ಚುನೂರು

ಐಪಿಎಲ್ 10ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟ ಪ್ರಯೋಜನಕ್ಕೆ ಬರಲಿಲ್ಲ. ಸತತ ಏಳನೇ ಸೋಲಿನ ಮಾಲೆಗೆ ಆರ್ ಸಿಬಿ ಕೊರಳೊಡ್ಡಬೇಕಾಯಿತು.

By Mahesh

ಪುಣೆ, ಏಪ್ರಿಲ್ 29: ಐಪಿಎಲ್ 10ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟ ಪ್ರಯೋಜನಕ್ಕೆ ಬರಲಿಲ್ಲ. ಸತತ ಏಳನೇ ಸೋಲಿನ ಮಾಲೆಗೆ ಆರ್ ಸಿಬಿ ಕೊರಳೊಡ್ಡಬೇಕಾಯಿತು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಪುಣೆ ಸೂಪರ್ ಜೈಂಟ್ ತಂಡ 157/3 ಸ್ಕೋರ್ ಮಾಡಿತು. ಆರ್ ಸಿಬಿ ಮತ್ತೆ ಕುಸಿತ ಕಂಡು 96/9 ಸ್ಕೋರ್ ಮಾಡಿ, 61ರನ್ ಗಳಿಂದ ಸೊಲೊಪ್ಪಿಕೊಂಡಿತು.

ಆರ್ ಸಿಬಿ ಕುಸಿತ: ಗೇಲ್ ಬದಲಿಗೆ ಬಂದ ಟ್ರಾವಿಸ್ ಹೆಡ್ 2 ರನ್ ಗಳಿಸಿ ಔಟಾದರೆ, ಎಬಿ ಡಿ ವಿಲಿಯರ್ಸ್, ಜಾಧವ್, ಸಚಿನ್ ಬೇಬಿ, ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ, ಪವನ್ ನೇಗಿ ಎಲ್ಲರೂ ಬ್ಯಾಟಿಂಗ್ ವೈಫಲ್ಯ ಕಂಡು ಗೆಲ್ಲಬಹುದಾದ ಪಂದ್ಯವನ್ನು ಸುಲಭವಾಗಿ ಸೋತರು.[ಐಪಿಎಲ್ 2017: ಅಂಕಪಟ್ಟಿ]

ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ 48 ಎಸೆತಗಳಲ್ಲಿ 55ರನ್(4 ಬೌಂಡರಿ, 1 ಸಿಕ್ಸರ್) 18ನೇ ಓವರ್ ನಲ್ಲಿ 9ನೇ ಓವರ್ ನಲ್ಲಿ ಔಟಾದರು. [ಈ ಬಾರಿ ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!]

ಉಳಿದಂತೆ, ಆರ್ ಸಿಬಿ ಆಟಗಾರರ ಸ್ಕೋರ್ 2,3,7,2,1,3,5,2,8,4 ಜತೆಗೆ ಸ್ಕೋರ್ 4 ರನ್ ಸೇರಿ 158 ಸ್ಕೋರ್ ಚೇಸ್ ಮಾಡಿದ ಆರ್ ಸಿಬಿ 96/9 ಗಳಿಸಿದ್ದೇ ಸಾಧನೆ. ಪುಣೆ ಪರ ಇಮ್ರಾನ್ ತಾಹೀರ್ 4 ಓವರ್ ಗಳಲ್ಲಿ 18 ರನ್ನಿತ್ತು 3 ವಿಕೆಟ್, ಫರ್ಗುಸನ್ 2, ಉನದ್ಕತ್, ಕ್ರಿಶ್ಚಿಯನ್, ಸುಂದರ್ ತಲಾ 1 ವಿಕೆಟ್ ಗಳಿಸಿದರು.

ನಾಯಕ ಸ್ಟೀವ್ ಸ್ಮಿತ್ 45, ಮನೋಜ್ ತಿವಾರಿ 44, ರಾಹುಲ್ ತ್ರಿಪಾಠಿ 37, ಎಂಎಸ್ ಧೋನಿ 21 ಸ್ಕೋರ್ ಮಾಡಿದ್ದಾರೆ.

ಸತತ ಆರು ಸೋಲು ಕಂಡಿರುವ ಆರ್ ಸಿಬಿ ತಂಡ, ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಇಂದಿನ ಪಂದ್ಯಕ್ಕೆ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

IPL 2017: Match 34: Bangalore win the toss and elect to field first


ರೈಸಿಂಗ್ ಪುಣೆ ಸೂಪರ್ ಜೈಂಟ್: ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ, ಸ್ಟೀವ್ ಸ್ಮಿತ್ (ನಾಯಕ), ಎಂಎಸ್ ಧೋನಿ(ವಿಕೆಟ್ ಕೀಪರ್), ಮನೋಜ್ ತಿವಾರಿ, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಲೋಕಿ ಫರ್ಗುಸನ್,ಜಯದೇವ್ ಉನದ್ಕಟ್, ದೀಪಕ್ ಚಾಹರ್, ಇಮ್ರಾನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ(ನಾಯಕ), ಟ್ರಾವಿಸ್ ಹೆಡ್, ಎಬಿ ಡಿ ವಿಲಿಯರ್ಸ್, ಕೆದಾರ್ ಜಾಧವ್ (ವಿಕೆಟ್ ಕೀಪರ್), ಸಚಿನ್ ಬೇಬಿ, ಸ್ಟುವರ್ಟ್ ಬಿನ್ನಿ, ಪವನ್ ನೇಗಿ, ಆಡಂ ಮಿಲ್ನೆ, ಸ್ಯಾಮುಯಲ್ ಬದ್ರಿ, ಯುಜುವೇಂದ್ರ ಚಾಹಲ್, ಶ್ರೀನಾಥ್ ಅರವಿಂದ್ (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X