ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಭೀರ್-ಉತ್ತಪ್ಪ ಜುಗಲ್ ಬಂದಿ, ಕೆಕೆಆರ್ 7 ವಿಕೆಟ್ ಗಳ ಜಯ

ಕೋಲ್ಕತ್ತಾ, ಏಪ್ರಿಲ್ 28 : ಗೌತಮ್ ಗಂಭೀರ್ (71) ಮತ್ತು ಕರ್ನಾಟಕದ ರಾಬಿನ್ ಉತ್ತಪ್ಪ ಅವರ ಜುಗಲ್ ಬಂದಿಯಿಂದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿ 20 ಓವರ್ ಗಳಲ್ಲಿ 160 ಗಳಿಸಿತ್ತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಕೇವಲ 16.2 ಓವರ್ ಗಳಲ್ಲಿ 161 ರನ್ ಗಳಿಸಿ 7 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು.

IPL 2017: Match 32: Gambhir-Uthappa shine again as Kolkata thrash Delhi by 7 wickets

ನಾಯಕ ಗೌತಮ್ ಗಂಭೀರ್ 52 ಎಸೆತಗಳಲ್ಲಿ ಅಜೇಯ 71, ರಾಬಿನ್ ಉತ್ತಪ್ಪ 33 ಎಸೆತಗಳಲ್ಲಿ 59, ಮನೀಶ್ ಪಾಂಡೆ 5, ನರೈನ್ 4 ಹಾಗೂ ಜಾಕ್ಸನ್ ಅಜೇಯ 15 ರನ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ದಡ ಸೇರಿತು.

ಯುವ ಆಟಗಾರರಾದ ಸಂಜು ಸ್ಯಾಮ್ಸನ್ (60) ಮತ್ತು ಶ್ರೇಯಸ್ ಐಯ್ಯರ್ (47) ಅವರ ಸೊಗಸಾದ ಆಟದ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ಕೆಕೆಆರ್ ಗೆ 161 ರನ್ ಗಳ ಸವಾಲಿನ ಗುರಿ ನೀಡಿದೆ.

ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಂಣದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ನಿಗದಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ಗಳನ್ನು ಕಲೆಹಾಕಿದೆ.

ಡೆಲ್ಲಿ ಪರ ಸಂಜು ಸ್ಯಾಮ್ಸನ್ ಮತ್ತೆ ಅಬ್ಬರಿಸಿದರು. 38 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ನೆರವಿನಿಂದ ಬರೊಬ್ಬರಿ 60 ರನ್ ತಂಡಕ್ಕೆ ಕಾಣಿಕೆಯಾಗಿ ನೀಡಿ ಔಟ್ ಆದರು.

ಮತ್ತೊಂದೆಡೆ ಐಯ್ಯರ್ 34 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಮೂಲಕ 47 ಚೆಚ್ಚಿದರು. ಇನ್ನುಳಿದಂತೆ ಕರುಣ್ ನಾಯರ್ 15, ಮೋರಿಸ್ 11, ಪಂಥ್ 6, ಅಂಕೀತ್ ಭವನೆ ಅಜೇಯ 12 ರನ್ ಗಳಿಸಿದರು.

ಇನ್ನು ಕೆಕೆಆರ್ ಪರ ನಾಥಲ್ ನೆಲ್ 3, ನರೈನ್ ಮತ್ತು ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X