ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ವಿರುದ್ಧ ಆರ್ ಸಿಬಿಗೆ ಅತ್ಯಂತ ಹೀನಾಯ ಸೋಲು

ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ಅತ್ಯಂತ ಹೀನಾಯ ಸೋಲು ಕಂಡಿದೆ. 132 ರನ್ ಚೇಸ್ ಮಾಡಿದ ಕೊಹ್ಲಿ ಪಡೆ ಕೇವಲ 49 ರನ್ ಸ್ಕೋರಿಗೆ ಆಲೌಟ್ ಆಗಿ ತಲೆ ತಗ್ಗಿಸಿದೆ.

By Mahesh

ಕೋಲ್ಕತಾ, ಏಪ್ರಿಲ್ 23: ಪಂದ್ಯದ ಮೊದಲ ಆರು ಓವರ್ ಗಳಲ್ಲಿ ಕೆಕೆಆರ್ ಬ್ಯಾಟಿಂಗ್ ನೋಡಿದವರು ಭಾರಿ ಮೊತ್ತದ ಪಂದ್ಯದ ನಿರೀಕ್ಷೆ ಇಟ್ಟುಕೊಂಡಿದ್ದರು. ನಂತರ ನಿರಂತರವಾಗಿ ವಿಕೆಟ್ ಉದುರಿದಾಗ ಆರ್ ಸಿಬಿಗೆ ಈ ಪಂದ್ಯ ಸುಲಭ ತುತ್ತು ಎನಿಸಿತು. ಆದರೆ, ಆರ್ ಸಿಬಿ ರನ್ ಚೇಸ್ ಆರಂಭಿಸಿ ಕೊಹ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಪಂದ್ಯ ಕೆಕೆಆರ್ ಕಡೆಗೆ ವಾಲಿತು. 132 ರನ್ ಚೇಸ್ ಮಾಡುತ್ತಿದ್ದ ಆರ್ ಸಿಬಿ 49 ರನ್ನಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಅರ್ ಸಿಬಿ ಪರ ಯಾವೊಬ್ಬ ಆಟಗಾರ ಕೂಡಾ ಎರಡಂಕಿ ಸ್ಕೋರ್ ಮಾಡಲಿಲ್ಲ. 10 ಓವರ್ ಗಳಲ್ಲೇ ಆರ್ ಸಿಬಿ ಇನ್ನಿಂಗ್ಸ್ ಮುಕ್ತಾಯ. 49 ಸ್ಕೋರಿಗೆ ಔಟಾಗಿ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತಕ್ಕೆ ಔಟಾದ ತಂಡ ಎಂಬ ಕಳಪೆ ಸಾಧನೆ ಮಾಡಿದ ಕೊಹ್ಲಿ ಪಡೆ.[ಐಪಿಎಲ್ : ಟಾಪ್ 10 ವೈಯಕ್ತಿಕ ಸ್ಕೋರರ್, ಗೇಲ್ ನಿಂದ ಸೈಮಂಡ್ ತನಕ]

ಆರ್ ಸಿಬಿ : ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು ಆರ್ ಸಿಬಿ ಏನೂ ಕಿಸಿಯಲಿಕ್ಕೆ ಆಗಲಿಲ್ಲ. ಗೇಲ್ 17 ಎಸೆತಗಳನ್ನು ಎದುರಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರ ಕೂಡಾ ಎರಡಂಕಿ ಎಸೆತಗಳನ್ನು ಎದುರಿಸಲಿಲ್ಲ. 9.4 ಓವರ್ ಗಳಲ್ಲಿ 49 ಸ್ಕೋರಿಗೆ ಇಡೀ ತಂಡವೇ ಶರಣಾಗಿ ಪೆವಿಲಿಯನ್ ಸೇರಿ, ಐಪಿಎಲ್ ನ ಅತ್ಯಂತ ಕಳಪೆ ಮೊತ್ತಕ್ಕ ಆಲೌಟ್ ಆದ ತಂಡ ಎನಿಸಕೊಂಡಿತು.[ಐಪಿಎಲ್ 2017: ಅಂಕಪಟ್ಟಿ]

IPL 2017: Match 27: Rain delays toss between Kolkata-Bangalore at Eden


ಕೆಕೆಆರ್ ಇನ್ನಿಂಗ್ಸ್: ಸುನಿಲ್ ನಾರಾಯಣ್ ಪಿಂಚ್ ಹಿಟ್ಟರ್ ಆಗಿ ಮತ್ತೊಮ್ಮೆ ಮಿಂಚಿದರು. 17 ಎಸೆತಗಳಲ್ಲಿ 34ರನ್ ಚೆಚ್ಚಿ ಭರ್ಜರಿ ಆರಂಭ ಒದಗಿಸಿದರು. ಗಂಭೀರ್ 14ರನ್ ಗಳಿಸಿದರು. ನಂತರ ಉಳಿದ ಆಟಗಾರರು ಆರಂಭ ಪಡೆದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ರಾಬಿನ್ ಉತ್ತಪ್ಪ11, ಮನೀಶ್ ಪಾಂಡೆ 15,ಸೂರ್ಯ ಕುಮಾರ್ ಯಾದವ್ 15, ಕ್ರಿಸ್ ವೋಕ್ಸ್ 18ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಯತ್ನಿಸಿದರು. ಅಂತಿಮವಾಗಿ ಕೆಕೆ ಆರ್ 19.3 ಓವರ್ ಗಳಲ್ಲಿ 131 ಸ್ಕೋರಿಗ ಆಲೌಟ್ ಆಯಿತು.

ಆರ್ ಸಿಬಿ ಪರ ಯಜುವೇಂದ್ರ ಚಾಹಲ್ ಉತ್ತಮ ಬೌಲಿಂಗ್ ಮಾಡಿ 3 ವಿಕೆಟ್ ಗಳಿಸಿದರು.

ಟಾಸ್ ವರದಿ: ಮಳೆಯಿಂದ ವಿಳಂಬವಾಗಿದ್ದ ಆರ್ ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ಭಾನುವಾರ ರಾತ್ರಿ 8.30ಕ್ಕೆ ಆರಂಭವಾಗಿದೆ.

ಈಡನ್ ಗಾರ್ಡನ್ ನಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಆರ್ ಸಿಬಿ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಎಬಿ ಡಿ ವಿಲಿಯಸ್ ಹಾಗೂ ಸ್ಯಾಮುಯಲ್ ಬದ್ರಿ ತಂಡಕ್ಕೆ ಮರಳಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X