ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಜರಾತಿನ ಲಯನ್ಸ್ ಕಟ್ಟಿ ಹಾಕಿ ಜಯಭೇರಿ ಬಾರಿಸಿದ ಪಂಜಾಬ್

ಗುಜರಾತ್ ಲಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಎಲೆವನ್ ಪಂಜಾಬ್ ತಂಡ 20 ಓವರ್ ಗಳಲ್ಲಿ 188/7 ಸ್ಕೋರ್ ಮಾಡಿತು. ನಂತರ ಲಯನ್ಸ್ ತಂಡವನ್ನು ನಿಯಂತ್ರಿಸಿ 26ರನ್ ಗಳಿಂದ ಜಯ ದಾಖಲಿಸಿತು.

By Mahesh

ರಾಜ್ ಕೋಟ್, ಏಪ್ರಿಲ್ 23: ಐಪಿಎಲ್ 10ರ ಮಹತ್ವದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಎಲೆವನ್ ಪಂಜಾಬ್ ತಂಡ 20 ಓವರ್ ಗಳಲ್ಲಿ 188/7 ಸ್ಕೋರ್ ಮಾಡಿ, ನಂತರ ಗುಜರಾತ್ ಲಯನ್ಸ್ ತಂಡದ ರನ್ ಚೇಸಿಂಗ್ ಗೆ ಬ್ರೇಕ್ ಹಾಕಿ 26ರನ್ ಗಳಿಂದ ಜಯ ದಾಖಲಿಸಿದೆ.

ಗುಜರಾತ್ ರನ್ ಚೇಸ್: ಬ್ರೆಂಡನ್ ಮೆಕಲಮ್ 6 ಹಾಗೂ ಅರೋನ್ ಫಿಂಚ್ 13 ರನ್ ಮಾತ್ರ ಗಳಿಸಿ ಔಟಾದ ಬಳಿಕ ನಾಯಕ ಸುರೇಶ್ ರೈನಾ ರನ್ ಚೇಸಿಂಗ್ ಮುಂದುವರೆಸಿದರು. 24 ಎಸೆತಗಳಲ್ಲಿ 34 ರನ್ ಗಳಿಸಿದ್ದ ರೈನಾ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರು.

ದಿನೇಶ್ ಕಾರ್ತಿಕ್ ಉತ್ತಮವಾಗಿ ಆಡಿ 44 ಎಸೆತಗಳಲ್ಲಿ 58ರನ್ ಗಳಿಸಿ ಅಜೇಯರಾಗಿ ಉಳಿದು ಗುಜರಾತ್ ಗೆ ಜಯದ ಆಸೆ ಹುಟ್ಟಿಸಿದರು. ಆದರೆ, ಇನ್ನೊಂದು ತುದಿಯಲ್ಲಿ ಯಾವುದೇ ಬೆಂಬಲ ಸಿಗಲಿಲ್ಲ. ರವೀಂದ್ರ ಜಡೇಜ 9, ಡ್ವಾಯ್ನೆ ಸ್ಮಿತ್ 4 ಔಟಾದರು. ಆಂಡ್ರ್ಯೂ ಟೈ 12 ಎಸೆತಗಳಲ್ಲಿ 22 ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು. ಅಂತಿಮವಾಗಿ 20ಓವರ್ ಗಳಲ್ಲಿ 7/162 ಸ್ಕೋರ್ ಮಾಡಿ, ಸೋಲೊಪ್ಪಿಕೊಂಡಿತು.

ಪಂಜಾಬ್ ಪರ ಸಂದೀಪ್ ಶರ್ಮ, ಕೆಸಿ ಕಾರಿಯಪ್ಪ, ಆಕ್ಷರ್ ಪಟೇಲ್ ತಲಾ 2 ವಿಕೆಟ್ ಗಳಿಸಿ, ಗುಜರಾತ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸಿದರು.

ಪಂಜಾಬ್ ಬ್ಯಾಟಿಂಗ್: ಉತ್ತಮ ಲಯದಲ್ಲಿರುವ ಮನನ್ ವೋಹ್ರಾ ಅವರ ವಿಕೆಟನ್ನು ಕಳೆದುಕೊಂಡು ಪಂಜಾಬ್ ತಂಡ ಆರಂಭಿಕ ಆಘಾತ ಅನುಭವಿಸಿತು. ಆದರೆ, ಇನ್ನೊಂದು ತುದಿಯಲ್ಲಿ ಕಳೆದ ಪಂದ್ಯದ ಶತಕ ವೀರ ಹಶೀಂ ಆಮ್ಲಾ ಭರ್ಜರಿಯಾಗಿ ಇನ್ನಿಂಗ್ಸ್ ಕಟ್ಟಿ ಬೆಳೆಸಿದರು.

IPL 2017: Match 26: Gujarat Lions opt to bowl against Kings XI Punjab

ಆಮ್ಲಾ 40 ಎಸೆತಗಳಲ್ಲಿ 65 ರನ್(9 ಬೌಂಡರಿ, 2 ಸಿಕ್ಸರ್)ಗಳಿಸಿದರೆ, ತಂಡಕ್ಕೆ ಮರಳಿರುವ ಶಾನ್ ಮಾರ್ಷ್ 30 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ 18 ಎಸೆತಗಳಲ್ಲಿ 31, ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಗುಜರಾತ್ ಪರ ಆಂಡ್ರ್ಯೂ ಟಿ 2ವಿಕೆಟ್ ಪಡೆದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X