ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್ ರೈಸರ್ಸ್ ಗೆಲುವನ್ನು ಕಸಿದ ಮಹೇಂದ್ರ ಸಿಂಗ್ ಧೋನಿ

ಕೊನೆಯ ಓವರ್ ಗಳಲ್ಲಿ ಮಾಜಿ ನಾಯಕ ಧೋನಿ ರನ್ ಸುರಿಮಳೆ; ಉತ್ತಮ ಮೊತ್ತ ಪೇರಿಸಿದ ಹೊರತಾಗಿಯೂ ಪಂದ್ಯ ಸೋತು ನಿರಾಸೆ ಅನುಭವಿಸಿದ ಸನ್ ರೈಸರ್ಸ್ ಹೈದರಾಬಾದ್.

ಪುಣೆ, ಏಪ್ರಿಲ್ 22: ಮಹೇಂದ್ರ ಸಿಂಗ್ ಧೋನಿಯವರ ಆಕ್ರಮಣಕಾರಿ ಬ್ಯಾಟಿಂಗ್ (ಅಜೇಯ 61 ರನ್, 34 ಎಸೆತ, 5 ಬೌಂಡರಿ, 3 ಸಿಕ್ಸರ್) ಸಹಾಯದಿಂದಾಗಿ ಪುಣೆ ರೈಸಿಂಗ್ ಸೂಪರ್ ಜಿಯಾಂಟ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಗಳ ಜಯ ಗಳಿಸಿತು.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್ ತಂಡ, ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ತಂಡ, 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.[ಸ್ಕೋರ್ ವಿವರ]

IPL 2017: Match 24: Warner, Henriques help Sunrisers to put good score against Pune

ಪುಣೆ ತಂಡದ ಗೆಲುವು ಕಷ್ಟವಾಗಿತ್ತಾದರೂ, ಕ್ರೀಸ್ ನಲ್ಲಿದ್ದ ಏಕೈಕ ಭರವಸೆಯಾಗಿದ್ದ ಧೋನಿ, ತಮ್ಮ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. 18ನೇ ಓವರ್ ನ ಆರಂಭದಲ್ಲಿ ಪುಣೆಗೆ ಪಂದ್ಯ ಗೆಲ್ಲಲು 12 ಎಸೆತಗಳಿಂದ 30 ರನ್ ಬೇಕಿತ್ತು. ಅದೇ ಓವರ್ ನಲ್ಲಿ ಕ್ರೀಸ್ ನಲ್ಲಿದ್ದ ಧೋನಿ ಜತೆಗಾರ ಮನೋಜ್ ಪಾಂಡೆ 1 ಬೌಂಡರಿ ಬಾರಿಸಿದರೆ, ಧೋನಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ಗೆಲುವಿನ ಗುರಿಯನ್ನು ಸ್ವಲ್ಪ ಸನಿಹಕ್ಕೆ ತಂದುಕೊಂಡರು.

ಇನ್ನು, 19ನೇ ಓವರ್ ನಲ್ಲಿ ಮಿಂಚಿದ ಧೋನಿ, ಎರಡು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಪುಣೆ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದರು. ಇವರಿಬ್ಬರ ಜುಗಲ್ ಬಂದಿಯಿಂದ 19ನೇ ಓವರ್ ನಲ್ಲಿ 19 ರನ್ ಹರಿದುಬಂದವು !

ಆಗ, ಕಡೇ ಓವರ್ ನಲ್ಲಿ 11 ರನ್ ಪೇರಿಸಬೇಕಾದ ಅವಶ್ಯಕತೆಯಿತ್ತು. ಆದರೆ, ಮೊದಲ ಎಸೆತದಲ್ಲಿ ಬ್ಯಾಟ್ ಬೀಸಿದ ತಿವಾರಿ ಬೌಂಡರಿ ಬಾರಿಸುವ ಭರದಲ್ಲಿ ಮಿಡ್ ವಿಕೆಟ್ ನಲ್ಲಿ ಎತ್ತರಕ್ಕೆ ಚೆಂಡು ಚಿಮ್ಮಿಸಿ ಕ್ಯಾಚ್ ನೀಡಿದ್ದರು. ಆದರೆ, ಬೌಂಡರಿಯಲ್ಲಿದ್ದ ರಷೀದ್ ಖಾನ್ ಇದನ್ನು ಡ್ರಾಪ್ ಮಾಡಿ ಜೀವದಾನ ನೀಡಿದರು. ಆ ಚೆಂಡು ಬೌಂಡರಿ ಗೆರೆಯನ್ನೂ ದಾಟಿತು.

ಆನಂತರ ಒಂದು ರನ್ ಗಳಿಸಿ ಧೋನಿಗೆ ಬ್ಯಾಟಿಂಗ್ ಸರದಿ ಬಿಟ್ಟುಕೊಟ್ಟರು ತಿವಾರಿ. ಆಗ, ಸಾವಕಾಶವಾಗಿ 1, 2 ರನ್ ಪೇರಿಸಿದ ಇಬ್ಬರೂ ತಂಡವನ್ನು ಗೆಲುವಿನ ದಡದ ಸಮೀಪಕ್ಕೆ ತಂದರು. ಕೊನೆಯ ಎಸೆತದಲ್ಲಿ 2 ರನ್ ಪೇರಿಸುವ ಒತ್ತಡದಲ್ಲಿದ್ದ ಧೋನಿ, ಭರ್ಜರಿ ಬೌಂಡರಿ ಬಾರಿಸಿ, ಪುಣೆ ತಂಡಕ್ಕೆ ಜಯ ತಂದರಲ್ಲದೆ, ತಾವು ಬೆಸ್ಟ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದವರಲ್ಲಿ ರಾಹುಲ್ ತ್ರಿಪಾಠಿಯವರ ಅಮೋಘ ಅರ್ಧಶತಕ (59 ರನ್, 41 ಎಸೆತ, 6 ಬೌಂಡರಿ, 3 ಸಿಕ್ಸರ್) ತಂಡಕ್ಕೆ ತುಂಬಾ ಪ್ರಯೋಜನವಾಯಿತು.[ಅಂಕ ಪಟ್ಟಿ]

ಪುಣೆ ಉತ್ತಮ ಮೊತ್ತ
ಇದಕ್ಕೂ ಮೊದಲು ಟಾಸ್ ಗೆದ್ದ ಪುಣೆ, ಪ್ರವಾಸಿ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಸನ್ ರೈಸರ್ಸ್ ತಂಡದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಜೋಡಿ, ಮೊದಲ ವಿಕೆಟ್ ಗೆ 8.1 ಓವರ್ ಗಳಲ್ಲಿ 55 ರನ್ ಪೇರಿಸಿ ಬೇರ್ಪಟ್ಟಿತು. ಶಿಖರ್ ಧವನ್ ವೈಯಕ್ತಿಕವಾಗಿ 33 ರನ್ ಗಳಿಸಿ ಔಟಾದರು. ಆಗ ಬಂದ ಕೇನ್ ವಿಲಿಯಮ್ಸನ್ (21) ಹೆಚ್ಚು ಆಡಲಿಲ್ಲ. ಆದರೆ, ಆನಂತರ ಬಂದ ಹೆನ್ರಿಕ್ಸ್ (ಅಜೇಯ 55 ರನ್, 28 ಎಸೆತ, 6 ಬೌಂಡರಿ, 1 ಸಿಕ್ಸರ್) ವಾರ್ನರ್ ಜತೆಗೂಡಿ 3ನೇ ವಿಕೆಟ್ ಗೆ 45 ರನ್ ಪೇರಿಸಿದರು.

17ನೇ ಓವರ್ ನಲ್ಲಿ ವಾರ್ನರ್ ಔಟಾದರೂ, ದೀಪಕ್ ಹೂಡಾ (ಅಜೇಯ 19) ಜತೆ ಇನಿಂಗ್ಸ್ ಮುಂದುವರಿಸಿದ ಹೆನ್ರಿಕ್ಸ್ ಕೊನೆಯವರೆಗೂ ಅಜೇಯರಾಗುಳಿದು ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್:

ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 176ಕ್ಕೆ 3 (ಹೆನ್ರಿಕ್ಸ್ ಅಜೇಯ 55, ಡೇವಿಡ್ ವಾರ್ನರ್ 43; ಡೇನಿಯಲ್ ಕ್ರಿಶ್ಚಿಯನ್ 20ಕ್ಕೆ 1, ಇಮ್ರಾನ್ ತಾಹಿರ್ 23ಕ್ಕೆ 1).

ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ 20 ಓವರ್ ಗಳಲ್ಲಿ 179ಕ್ಕೆ 4 (ಧೋನಿ ಅಜೇಯ 61, ರಾಹುಲ್ ತ್ರಿಪಾಠಿ 59; ರಷೀದ್ ಖಾನ್ 17ಕ್ಕೆ 1, ಬಿಪಿಲ್ ಶರ್ಮಾ 30ಕ್ಕೆ 1).

ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ (ಪುಣೆ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X