ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡದಲ್ಲಿ ಮಾತನಾಡಿದ ಮನೀಶ್ ಗೆ ಅಚ್ಚರಿ ಮೂಡಿಸಿದ 'ಪಾಮಿ'

ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಆಡುವ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಅವರು ಕೊಡಗಿನ ಕಲಿ ರಾಬಿನ್ ಉತ್ತಪ್ಪ ಅವರ ಜತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಇದಕ್ಕಿಂತ ಅಚ್ಚರಿ ಮತ್ತೊಂದಿದೆ ಏನದು?

By Mahesh

ಕೋಲ್ಕತಾ, ಏಪ್ರಿಲ್ 27: ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಆಡುವ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಅವರು ಕೊಡಗಿನ ಕಲಿ ರಾಬಿನ್ ಉತ್ತಪ್ಪ ಅವರ ಜತೆ ಕನ್ನಡದಲ್ಲಿ ಮಾತನಾಡಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಅದರಲ್ಲಿ ಅಚ್ಚರಿ ವಿಷಯ ಏನಿದು ಎನ್ನಬಹುದು. ಆದರೆ, ಇದಕ್ಕಿಂತ ಅಚ್ಚರಿಯ ವಿಷ್ಯ ಎಂದರೆ, ಕಾಮೆಂಟೆಟರ್ ಪಾಮಿ ಎಂಬಾಂಗ್ವಾ ಅವರು 'ಕನ್ನಡ' ಭಾಷೆಯನ್ನು ಗುರುತಿಸಿ, ಪ್ರತಿಕ್ರಿಯಿಸಿದ್ದು ಕನ್ನಡಿಗರಿಗೆ ಸಕತ್ ಖುಷಿಕೊಟ್ಟಿದೆ.

IPL 2017: Manish Pandey talks in Kannada during match against RPS

ಪುಣೆ ತಂಡದ ಇನ್ನಿಂಗ್ಸ್ ನಲ್ಲಿ ರಹಾನೆ ಹಾಗೂ ರಾಹುಲ್ ತ್ರಿಪಾಠಿ ಆಡುತ್ತಿದ್ದರು. ಪಂದ್ಯದ ಎರಡನೇ ಓವರ್ ನ ಎರಡನೇ ಎಸೆತ ಹಾಕುವಾಗ ಕ್ರಿಸ್ ವೋಕ್ಸ್ ಬೌಲ್ ಮಾಡಿ ವಾಪಸ್ ಬರುವಾಗ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಜತೆ ಫೀಲ್ಡರ್ ಮನೀಶ್ ಪಾಂಡೆ ಮಾತನಾಡಿದ್ದು ಈಗ ವೈರಲ್ ಆಗಿದೆ.

ಮನೀಶ್ ಮಾತನಾಡಿದ್ದು 'ಕನ್ನಡ' ಭಾಷೆ ಎಂದು ಜಿಂಬಾಬ್ವೆಯ ಕಾಮೆಂಟೆಟರ್ ಪಾಮಿ ಎಬಾಂಗ್ವಾ ಅವರು ಗುರುತಿಸಿದ್ದು ಕನ್ನಡಿಗರಿಗೆ ಸಕತ್ ಖುಷಿ ಕೊಟ್ಟಿದೆ.

ನಂತರ 'ಹೇಗಿದ್ದೀರಾ ಮನೀಶ್' ಎಂದು ಕೇಳುತ್ತಾರೆ. ಮನೀಶ್ ತಮ್ಮ ಬಾಲ್ಯದ ಕನಸು ಆರ್ಮಿಸೇರಲು ಬಯಸಿದ್ದು, ನಂತರ ಕ್ರಿಕೆಟರ್ ಆಗಿದ್ದನ್ನು ಚುಟುಕಾಗಿ ಹೇಳುತ್ತಾರೆ.

ಈ ನಡುವೆ ಪಾಮಿಗೆ ಭಾಷಾ ಜ್ಞಾನ ಚೆನ್ನಾಗಿದೆ. ಐಪಿಎಲ್ 10ನೇ ವರ್ಷವಾಗಿದ್ದು ,ಪಾಮಿಗೆ ಈಗ ಕನ್ನಡ, ತಮಿಳು, ಹಿಂದಿ, ಮರಾಠಿ ಸೇರಿದಂತೆ ಅನೇಕ ಭಾಷೆ ಬರುತ್ತದೆ ಎಂದು ಮಾಜಿನಾಯಕ ಸಹ ಕಾಮೆಂಟೆಟರ್ ಸುನಿಲ್ ಗವಾಸ್ಕರ್ ಹೊಗಳುತ್ತಾರೆ.

ಈ ಪಂದ್ಯದಲ್ಲಿ 183ರನ್ ಗುರಿ ಪಡೆದ ಕೆಕೆಆರ್ ಪಂದ್ಯವನ್ನು 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ರಾಬಿನ್ ಉತ್ತಪ್ಪ 47 ಎಸೆತಗಳಲ್ಲಿ 87ರನ್ ಚೆಚ್ಚಿ ಪಂದ್ಯಶ್ರೇಷ್ಠ ಎನಿಸಿಕೊಂಡರು. ಮನೀಶ್ ಅವರ ಕನ್ನಡ ಮಾತಿನ ಸಂಭಾಷಣೆ ಪೂರ್ತಿ ವಿಡಿಯೋ ನೋಡಲು ಕ್ಲಿಕ್ ಮಾಡಿ

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X