ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 10 : ಶ್ರೇಷ್ಠ ಪ್ರದರ್ಶನ ನೀಡಿದ ಟಾಪ್ 10 ಕ್ರಿಕೆಟರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್ ಮನ್, ಬೌಲರ್ ಹಾಗೂ ಆಲ್ ರೌಂಡರ್ ಗಳ ಟಾಪ್ 10 ಪಟ್ಟಿ ಇಲ್ಲಿದೆ

By Mahesh

ಬೆಂಗಳೂರು, ಮೇ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್ ಮನ್, ಬೌಲರ್ ಹಾಗೂ ಆಲ್ ರೌಂಡರ್ ಗಳ ಟಾಪ್ 10 ಪಟ್ಟಿ ಇಲ್ಲಿದೆ.

ಬ್ಯಾಟ್ಸ್ ಮನ್ ಗಳ ಪೈಕಿ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದರೆ, ಬೌಲರ್ ಗಳ ಪೈಕಿ ಭುವನೇಶ್ವರ್ ಕುಮಾರ್ ಹಾಗೂ ಆಲ್ ರೌಂಡರ್ ಗಳ ಪೈಕಿ ಬೆನ್ ಸ್ಟೋಕ್ಸ್ ಮಿಕ್ಕವರಿಗಿಂತ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.[ಒನ್ಇಂಡಿಯಾ ಆಯ್ಕೆಯ ಐಪಿಎಲ್ 10ರ ಶ್ರೇಷ್ಠ ತಂಡ]

ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮ, ರವೀಂದ್ರ ಜಡೇಜ ಅವರು ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. [ಐಪಿಎಲ್ 2018ರಲ್ಲಿ ಗೇಲ್ ಸೇರಿದಂತೆ ಯಾರೆಲ್ಲ ಇರಲ್ಲ!]

ಆದರೆ, ನಾಯಕ ರೋಹಿತ್ ಶರ್ಮ ಅವರು ಮುಂಬೈ ಪರ ಮೂರು ಕಪ್ ಸೇರಿದಂತೆ ಒಟ್ಟಾರೆ ಏಳು ಟಿ20 ಟ್ರೋಫಿ ಗೆದ್ದು ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಮೂರನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ.[ಐಪಿಎಲ್ 2017 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ]

ಯುವ ಪ್ರತಿಭೆಗಳಾದ ರಿಷಬ್ ಪಂತ್, ನಿತೀಶ್ ರಾಣಾ, ವಾಷಿಂಗ್ಟನ್ ಸುಂದರ್ ಅಲ್ಲದೆ, ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಎಲ್ಲರ ಗಮನ ಸೆಳೆದರು.

#1 ಡೇವಿಡ್ ವಾರ್ನರ್

#1 ಡೇವಿಡ್ ವಾರ್ನರ್

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಈ ಬಾರಿಯ ಆರೇಂಜ್ ಕ್ಯಾಪ್ ವಿಜೇತರಾಗಿದ್ದಾರೆ. ಎಡಗೈ ಆರಂಭಿಕ ಬ್ಯಾಟ್ಸ್ ಮನ್ 14 ಪಂದ್ಯಗಳಿಂದ 643ರನ್ ಗಳನ್ನು ಕಲೆ ಹಾಕಿದ್ದು, 4 ಅರ್ಧಶತಕ ಹಾಗೂ ಒಂದು ಶತಕ(126ರನ್ 86 ಎಸೆತಗಳಲ್ಲಿ ಕೆಕೆಆರ್ ವಿರುದ್ಧ)ವನ್ನು ಐಪಿಎಲ್ 10ರಲ್ಲಿ ಬಾರಿಸಿದ್ದಾರೆ.

#2 ಗೌತಮ್ ಗಂಭೀರ್

#2 ಗೌತಮ್ ಗಂಭೀರ್

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರು 16 ಪಂದ್ಯಗಳಿಂದ 498ರನ್ ಗಳನ್ನು ಕಲೆ ಹಾಕಿದ್ದು, ಆರಂಭಿಕ ಆಟಗಾರರಾಗಿ ವಾರ್ನರ್ ಜತೆ ಆಡಲು ಸೂಕ್ತ ಎಂದು ಪರಿಗಣಿಸಲಾಗಿದೆ. ಗಂಭೀರ್ ಅವರು ಐಪಿಎಲ್ 10ರಲ್ಲಿ 4 ಅರ್ಧ ಶತಕ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ನ ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಇನ್ನಿಂಗ್ಸ್ ಆರಂಭಿಸಲು ಹೇಳಿ, ಯಶಸ್ಸು ಕಂಡರು.

#3 ಶಿಖರ್ ಧವನ್

#3 ಶಿಖರ್ ಧವನ್

ಟೀಕಾಕಾರರಿಗೆ ಬ್ಯಾಟಿಂಗ್ ಮೂಲಕವೇ ಉತ್ತರಿಸಿದ ಶಿಖರ್ ಧವನ್ ಅವರು ಸನ್ ರೈಸರ್ಸ್ ಹೈದರಾಬಾದ್ ಪರ ಉತ್ತಮ ಆರಂಭ ಒದಗಿಸಿದರು. ಹೆಚ್ಚಾಗಿ ನಾಯಕ, ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಗೆ ಸಾಥ್ ನೀಡಿದರು. 479ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ 3ನೇ ಸ್ಥಾನ ಗಳಿಸಿದರು.

#4 ಹಶೀಂ ಆಮ್ಲಾ

#4 ಹಶೀಂ ಆಮ್ಲಾ

ತ್ವರಿತ ಗತಿ ಆಟಕ್ಕೆ ಹಶೀಂ ಆಮ್ಲಾ ಸೂಕ್ತವಲ್ಲ ಎನ್ನುವವರ ಬಾಯಿ ಮುಚ್ಚಿಸಿದರು. ಕಿಂಗ್ಸ್ ಎಲೆವನ್ ಪರ ಆಡುತ್ತಾ 10 ಪಂದ್ಯಗಳಿಂದ 420ರನ್ ಗಳಿಸಿದರು. 60ರನ್ ಸರಾಸರಿ ಹೊಂದಿದರು. ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಲಯನ್ಸ್ ವಿರುದ್ಧ ಶತಕ ಬಾರಿಸಿದರು. 34ವರ್ಷ ವಯಸ್ಸಿನ ಹಶೀಂ ಆಮ್ಲಾ ಎಲ್ಲರ ಗಮನ ಸೆಳೆದರು.

#5 ಭುವನೇಶ್ವರ್ ಕುಮಾರ್

#5 ಭುವನೇಶ್ವರ್ ಕುಮಾರ್

ಸತತವಾಗಿ ಎರಡನೇ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಅವರು ಸಹಜವಾಗಿ ಶ್ರೇಷ್ಠ ತಂಡಕ್ಕೆ ಆಯ್ಕೆಯಾಗಿದ್ದಾರೆ. 14 ಪಂದ್ಯಗಳಿಂದ 26ವಿಕೆಟ್ ಗಳಿಸಿದ್ದರು.

#6 ಜಯದೇವ್ ಉನದ್ಕತ್

#6 ಜಯದೇವ್ ಉನದ್ಕತ್

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಪ್ರಮುಖ ವೇಗಿ ಜಯದೇವ್ ಉನದ್ಕತ್ ಅವರು ಐಪಿಎಲ್ 10ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಿಂದ 24 ವಿಕೆಟ್ ಗಳಿಸಿದ್ದಾರೆ.

#7 ಜಸ್ಪ್ರೀತ್ ಬೂಮ್ರಾ

#7 ಜಸ್ಪ್ರೀತ್ ಬೂಮ್ರಾ

ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಗಮನ ಸೆಳೆದಿರುವ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು 16 ಪಂದ್ಯಗಳಿಂದ 20 ವಿಕೆಟ್ ಕಿತ್ತಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧದ ಸೂಪರ್ ಓವರ್ ನಲ್ಲಿ ಕೇವಲ 4 ರನ್ ನೀಡಿ, ಮುಂಬೈಗೆ ಜಯ ತಂದಿತ್ತಿದ್ದನ್ನು ಮರೆಯುವಂತಿಲ್ಲ.

#8 ರಶೀದ್ ಖಾನ್

#8 ರಶೀದ್ ಖಾನ್

ಚೊಚ್ಚಲ ಬಾರಿಗೆ ಐಪಿಎಲ್ ನಲ್ಲಿ ಆಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ 18 ವರ್ಷ ವಯಸ್ಸಿನ ರಶೀದ್ ಖಾನ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.
14 ಪಂದ್ಯಗಳಿಂದ 17 ವಿಕೆಟ್ ಗಳಿಸಿ 6.62 ರನ್ ಎಕಾನಮಿಯಂತೆ ಬೌಲ್ ಮಾಡಿದ ಹೈದರಾಬಾದ್ ಪರ ಆಟಗಾರ ರಶೀದ್ ಖಾನ್ ಅವರು ಗೂಗ್ಲಿ ಮೂಲಕ ಅನೇಕ ಘಟನಾಘಟಿ ಬ್ಯಾಟ್ಸ್ ಮನ್ ಗಳನ್ನು ಕಾಡಿದರು.

#9 ಬೆನ್ ಸ್ಟೋಕ್ಸ್

#9 ಬೆನ್ ಸ್ಟೋಕ್ಸ್

ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು 11 ಇನ್ನಿಂಗ್ಸ್ ನಲ್ಲಿ 316ರನ್ ಸ್ಕೋರ್ ಮಾಡಿದ್ದಲ್ಲದೆ 12 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಲೀಗ್ ಹಂತದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದನ್ನು ಮರೆಯುವಂತಿಲ್ಲ.

#10 ರಾಬಿನ್ ಉತ್ತಪ್ಪ

#10 ರಾಬಿನ್ ಉತ್ತಪ್ಪ

ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ 13 ಇನ್ನಿಂಗ್ಸ್ ಗಳಲ್ಲಿ 388ರನ್ ಗಳಿಸಿದ್ದಾರೆ. ಕೆಕೆಆರ್ ಪರ ಈ ಬಾರಿ ಮೂರನೆ ಅತ್ಯಧಿಕ ರನ್ ಗಳಿಕೆ ಆಟಗಾರ ಎನಿಸಿಕೊಂಡಿದ್ದು, ಕರ್ನಾಟಕದ ರಾಬಿನ್ ಅವರು ವಿಕೆಟ್ ಕೀಪರ್ ಆಗಿ ಕೂಡಾ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X