ಐಪಿಎಲ್ : ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2017ರಲ್ಲಿ ಯಾವ ತಂಡ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂಬ ಕುತೂಹಲಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಉತ್ತರ ನೀಡಿದೆ.

 • Updated:
 • By:

ಬೆಂಗಳೂರು, ಡಿಸೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2017ರಲ್ಲಿ ಯಾವ ತಂಡ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂಬ ಕುತೂಹಲಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಉತ್ತರ ನೀಡಿದೆ. ಧೋನಿ ಅವರನ್ನು ಪುಣೆ ನಾಯಕರಾಗಿ ಉಳಿಸಿಕೊಳ್ಳಲಾಗಿದೆ

8 ತಂಡಗಳಲ್ಲಿ ತಂಡ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ? ಯಾರನ್ನು ಹೊರಕ್ಕೆ ಕಳಿಸಲಾಗಿದೆ ಎಂಬ ಪಟ್ಟಿಯನ್ನು ಬಿಸಿಸಿಐ ನೀಡಿದೆ.[ಐಪಿಎಲ್ 2017: ತಂಡದಿಂದ ಹೊರಕ್ಕೆ ಹೋದ ಆಟಗಾರರು]

ವಿವೋ ಐಪಿಎಲ್ ಫ್ರಾಂಚೈಸಿಗಳಿಂದ 44 ವಿದೇಶಿ ಆಟಗಾರರು ಸೇರಿದಂತೆ 140 ಕ್ರಿಕೆಟರ್ಸ್ ಗಳನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹೊರಕ್ಕೆ ಹೋಗಿರುವ ಆಟಗಾರರ ಬಿಡ್ಡಿಂಗ್ ಮೊತ್ತ ಕೂಡಾ ನೀಡಲಾಗಿದೆ. ಧೋನಿ ಪುಣೆ ನಾಯಕರಾಗಿದ್ದರೆ, ಸುರೇಶ್ ರೈನಾ ಅವರು ಗುಜರಾತ್ ಲಯನ್ಸ್ ನಾಯಕರಾಗಿ ಮುಂದುವರೆಯಲಿದ್ದಾರೆ.

ಎಂಟು ತಂಡಗಳ ಪೈಕಿ ಪಂಜಾಬ್ ತಂಡ ಅತಿ ಹೆಚ್ಚು ಮೊತ್ತವನ್ನು ತನ್ನಲ್ಲಿ ಹೊಂದಿದ್ದು, 23.35ಕೋಟಿ ರುಗಳನ್ನು ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಬಳಸಬಹುದಾಗಿದೆ. ಪಂಜಾಬ್ ನಲ್ಲಿ ಸದ್ಯ 18 ಆಟಗಾರರಿದ್ದಾರೆ.

 • ಯಾವ ತಂಡದಲ್ಲಿ ಯಾವ ಆಟಗಾರರು ಉಳಿದಿದ್ದಾರೆ?

  ಪುಣೆ ಹಾಗೂ ಗುಜರಾತ್

  ಪುಣೆ ತಂಡ ನಾಯಕ ಎಂಎಸ್ ಧೋನಿ ಸೇರಿದಂತೆ 16 ಕ್ರಿಕೆಟರ್ಸ್ ಗಳನ್ನು ಉಳಿಸಿಕೊಂಡಿದ್ದು, ಗುಜರಾತ್ ಕೂಡಾ ಅಷ್ಟೇ ಮಂದಿ ಆಟಗಾರರನ್ನು ಉಳಿಸಿಕೊಂಡಿದೆ.

 • ಯಾವ ತಂಡದಲ್ಲಿ ಯಾವ ಆಟಗಾರರು ಉಳಿದಿದ್ದಾರೆ?

  ಮುಂಬೈ ಹಾಗೂ ಡೆಲ್ಲಿ ಡೆರ್ ಡೇವಿಲ್ಸ್

  ಮುಂಬೈ ಹಾಗೂ ಡೆಲ್ಲಿ ಡೆರ್ ಡೇವಿಲ್ಸ್ ತಂಡದಲ್ಲಿ ಯಾವೆಲ್ಲ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.

 • ಯಾವ ತಂಡದಲ್ಲಿ ಯಾವ ಆಟಗಾರರು ಉಳಿದಿದ್ದಾರೆ?

  ಬೆಂಗಳೂರು ಹಾಗೂ ಹೈದರಾಬಾದ್

  ಸನ್ ರೈಸರ್ಸ್ ಹೈದರಾಬಾದ್ 17 ಆಟಗಾರರನ್ನು ಉಳಿಸಿಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಆಟಗಾರರನ್ನು ಉಳಿಸಿಕೊಂಡಿದೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಆರ್ ಸಿಬಿ ಯಲ್ಲೇ ಉಳಿದಿದ್ದಾರೆ.

 • ಯಾವ ತಂಡದಲ್ಲಿ ಯಾವ ಆಟಗಾರರು ಉಳಿದಿದ್ದಾರೆ?

  ಪಂಜಾಬ್ ಹಾಗೂ ಕೋಲ್ಕತ್ತಾ

  ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಆಟಗಾರರನ್ನು ಉಳಿಸಿಕೊಂಡಿದ್ದು, 14ಜನರನ್ನು ಮತ್ತೆ ಆಡಿಸುತ್ತಿದೆ. ಪಂಜಾಬ್ ತಂಡದಲ್ಲಿ 19 ಕ್ರಿಕೆಟರ್ಸ್ ಮತ್ತೆ ಆಡುತ್ತಿದ್ದಾರೆ.

 • ಯಾವ ತಂಡದಲ್ಲಿ ಯಾವ ಆಟಗಾರರು ಉಳಿದಿದ್ದಾರೆ?

  ಯಾವ ತಂಡದಲ್ಲಿ ಎಷ್ಟು ಮೊತ್ತವಿದೆ

  ಮುಂಬೈ ತಂಡ 11.555 ಕೋಟಿ ರು ಹೊಂದಿದ್ದು ಪಂಜಾಬ್ ತಂಡ 23 ಕೋಟಿ ರುಗೂ ಅಧಿಕ ಮೊತ್ತ ತನ್ನಲ್ಲಿ ಉಳಿಸಿಕೊಂಡಿದೆ.

ತಾಜಾ ಸುದ್ದಿಗಳಿಗೆ Oneindia News App ಡೌನ್‌ಲೋಡ್ ಮಾಡಿ Android IOS

Read In English

Kings XI Punjab (KXIP) will enter the Indian Premier League (IPL) 2017 Players' Auction with maximum funds among teams after all franchises announced their list of cricketers retained for next year's tournament.
Please Wait while comments are loading...

ಬ್ರೇಕಿಂಗ್ ನ್ಯೂಸ್