ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2017 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಒಂದು ರನ್ ನಿಂದ ಸೋಲಿಸಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದೆ. ಐಪಿಎಲ್ 2017ಲ್ಲಿ ಪ್ರಶಸ್ತಿ ವಿಜೇತರು ಹಾಗೂ ಇತರೆ ಅಂಕಿ ಅಂಶಗಳು ಇಲ್ಲಿವೆ

By Mahesh

ಹೈದರಾಬಾದ್, ಮೇ 22: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಅತ್ಯಂತ ರೋಚಕ ಅಂತಿಮ ಹಣಾಹಣಿಗೆ ಸಾಕ್ಷಿಯಾಯಿತು. ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಒಂದು ರನ್ ನಿಂದ ಸೋಲಿಸಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿತು.

ಮೂರನೇ ಬಾರಿಗೆ ಕಪ್ ಎತ್ತಿದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟ್ ಮಾಡಿ 129 ಮಾತ್ರ ಸ್ಕೋರ್ ಮಾಡಿತ್ತು. ಪುಣೆ ತಂಡ 128ರನ್ ಗಳಿಸಿ ಸೊಲೊಪ್ಪಿಕೊಂಡಿತು. [ಮೊದಲ ಫೈನಲಿನಲ್ಲೇ ದಾಖಲೆ ಬರೆದ ವಾಷಿಂಗ್ಟನ್ ಸುಂದರ್!]

ಲೀಗ್ ಹಂತದಲ್ಲಿ 20 ಅಂಕ ಗಳಿಸಿ ಪ್ಲೇ ಆಫ್ ಹಂತಕ್ಕೇರಿದ್ದ ಮುಂಬೈ ಇಂಡಿಯನ್ಸ್ ತಂಡ, ಕೊನೆಗೆ ಕಪ್ ಕೂಡಾ ಗೆದ್ದುಕೊಂಡಿದೆ. ಲೀಗ್ ಹಾಗೂ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ತಂಡವನ್ನು ಸೋಲಿಸಿದ ಸಾಧನೆಯೊಂದಿಗೆ ಸ್ಟೀವ್ ಸ್ಮಿತ್ ತಂಡ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. [ಐಪಿಎಲ್ 2018ರಲ್ಲಿ ಗೇಲ್ ಸೇರಿದಂತೆ ಯಾರೆಲ್ಲ ಇರಲ್ಲ!]

David Warner


ಐಪಿಎಲ್ 2017ಲ್ಲಿ ಪ್ರಶಸ್ತಿ ವಿಜೇತರು ಹಾಗೂ ಇತರೆ ಅಂಕಿ ಅಂಶಗಳು
:

* ಚಾಂಪಿಯನ್ಸ್ : ಮುಂಬೈ ಇಂಡಿಯನ್ಸ್(ಮೂರನೇ ಬಾರಿ), ಪ್ರಶಸ್ತಿ ಮೊತ್ತ 15 ಕೋಟಿ ರು.

* ರನ್ನರ್ ಅಪ್ : ರೈಸಿಂಗ್ ಪುಣೆ ಸೂಪರ್ ಜೈಂಟ್, ಪ್ರಶಸ್ತಿ ಮೊತ್ತ 10 ಕೋಟಿ ರು
* ಕಿತ್ತಳೆ ಟೋಪಿ (ಅತಿ ಹೆಚ್ಚು ರನ್) - 641 ರನ್(14 ಪಂದ್ಯಗಳು, 50- 4, 100- 1 (126 ರನ್)) -ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್) 141 ಸ್ಟ್ರೈಕ್ ರೇಟ್

* ನೇರಳೆ ಟೋಪಿ (ಅತಿ ಹೆಚ್ಚು ವಿಕೆಟ್) : 26 ವಿಕೆಟ್ಸ್ 14 ಪಂದ್ಯಗಳು- 5/19 ಉತ್ತಮ ಬೌಲಿಂಗ್-ಭುವನೇಶ್ವರ್ ಕುಮಾರ್ (ಸನ್ ರೈಸರ್ಸ್ ಹೈದರಾಬಾದ್)

* ಉದಯೋನ್ಮುಖ ಆಟಗಾರ : ಬಸಿಲ್ ಥಂಪಿ 12 ಪಂದ್ಯಗಳಲ್ಲಿ 11 ವಿಕೆಟ್ (ಗುಜರಾತ್ ಲಯನ್ಸ್) [ಪುಣೆಯನ್ನು ಸೋಲಿಸಿದ ಮುಂಬೈ- ಐಪಿಎಲ್ 10 ಚಾಂಪಿಯನ್]
* ಫೈನಲ್ ಪಂದ್ಯದ ಪಂದ್ಯಶ್ರೇಷ್ಠ : ಕೃನಾಲ್ ಪಾಂಡ್ಯ (ಮುಂಬೈ ಇಂಡಿಯನ್ಸ್)

* ಅತಿ ಹೆಚ್ಚು ಸಿಕ್ಸರ್ (ಫೈನಲ್) - 2-ಕೃನಾಲ್ ಪಾಂಡ್ಯ (ಮುಂಬೈ ಇಂಡಿಯನ್ಸ್)

* ಅತ್ಯಂತ ಮೌಲ್ಯಯುತ ಆಟಗಾರ : ಬೆನ್ ಸ್ಟೋಕ್ಸ್ 11 ಇನ್ನಿಂಗ್ಸ್ ಗಳಲ್ಲಿ 316ರನ್ ಹಾಗೂ 12 ವಿಕೆಟ್ (ರೈಸಿಂಗ್ ಪುಣೆ ಸೂಪರ್ ಜೈಂಟ್) 3 ಬಾರಿ ಪಂದ್ಯ ಶ್ರೇಷ್ಠ

IPL 2017: Full list of award winners and major statistics.

* ಫೇರ್ ಪ್ಲೇ ಪ್ರಶಸ್ತಿ : ಗುಜರಾತ್ ಲಯನ್ಸ್
* ಎಫ್ ಬಿ ಬಿ ಸ್ಟೈಲಿಶ್ ಆಟಗಾರ: ಗೌತಮ್ ಗಂಭೀರ್
* ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್ :13 ಇನ್ನಿಂಗ್ಸ್ ನಲ್ಲಿ 26 ಸಿಕ್ಸರ್ - ಡೇವಿಡ್ ವಾರ್ನರ್ ಕೂಡಾ 26 ಸಿಕ್ಸರ್ ಬಾರಿಸಿದರೂ ಮ್ಯಾಕ್ಸ್ ವೆಲ್ ಹೆಚ್ಚು ದೂರಕ್ಕೆ ಸಿಕ್ಸ್ ಬಾರಿಸಿ ಪ್ರಶಸ್ತಿ ಗೆದ್ದರು.

* ತ್ವರಿತಗತಿಯಲ್ಲಿ ಅರ್ಧಶತಕ: 15 ಎಸೆತಗಳಲ್ಲಿ -ಸುನಿಲ್ ನಾರಾಯಣ್(ಕೆಕೆಆರ್ vs ಆರ್ ಸಿಬಿ)

* ಅತ್ಯುತ್ತಮ ಕ್ಯಾಚ್ : ಸುರೇಶ್ ರೈನಾ (ಗುಜರಾತ್ ಲಯನ್ಸ್)

* ವಿಟಾರಾ ಬ್ರೆಜಾ ಗ್ಲಾಮ್ ಶಾಟ್ ಪ್ರಶಸ್ತಿ : ಯುವರಾಜ್ ಸಿಂಗ್
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X