ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಹೈದರಾಬಾದ್ ನಾಯಕ ವಾರ್ನರ್ ರಿಂದ ವಂಚನೆ?

ಐಪಿಎಲ್ 10ರಲ್ಲಿ ಭರ್ಜರಿ ಆರಂಭ ಪಡೆದು ಸತತ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಹೈದರಾಬಾದ್ ತಂಡಕ್ಕೆ ಮುಂಬೈ ಸೋಲುಣಿಸಿದೆ. ಈ ಪಂದ್ಯದಲ್ಲಿ ಹೈದರಾಬಾದ್ ನಾಯಕ ವಾರ್ನರ್ ಮಾಡಿದ ಪ್ರಮಾದದ ಬಗ್ಗೆ ವರದಿ ಇಲ್ಲಿದೆ

By Mahesh

ಮುಂಬೈ, ಏಪ್ರಿಲ್ 13: ಐಪಿಎಲ್ 10ರಲ್ಲಿ ಭರ್ಜರಿ ಆರಂಭ ಪಡೆದು ಸತತ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಹೈದರಾಬಾದ್ ತಂಡಕ್ಕೆ ಮುಂಬೈ ಸೋಲುಣಿಸಿದೆ. ಈ ಪಂದ್ಯದಲ್ಲಿ ಹೈದರಾಬಾದ್ ನಾಯಕ ವಾರ್ನರ್ ಮಾಡಿದ ಪ್ರಮಾದದ ಬಗ್ಗೆ ವರದಿ ಇಲ್ಲಿದೆ..

ಟಿ20 ಪಂದ್ಯವೆಂದರೆ ಹಾಗೆ ಎಲ್ಲವೂ ಕ್ಷಣಾರ್ಧದಲ್ಲಿ ಆಗಿಬಿಡುತ್ತದೆ. ಇಂಥ ಪಂದ್ಯಗಳಿಗೆ ಅಂಪೈರಿಂಗ್ ಮಾಡುವವರು ಎಷ್ಟು ಅಲರ್ಟ್ ಇದ್ದರೂ ಕಡಿಮೆಯೆ, ಏನು ಟೆಕ್ನಾಲಜಿ ಬಳಸಿದರೂ ಸಾಲುವುದಿಲ್ಲ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆಗಾಗ ಪಂದ್ಯಗಳಲ್ಲಿ ಸಣ್ಣ ಪುಟ್ಟ ಪ್ರಮಾದಗಳು ನಡೆದು ಬಿಡುವುದು ಮಾಮೂಲಿ ಆದರೆ, ಕ್ರಿಕೆಟ್ ನಿಯಮವನ್ನೇ ತಂಡದ ನಾಯಕನೊಬ್ಬ ಬದಿಗೊತ್ತಿದ್ದರೆ ಅದನ್ನು ಹೇಗೆ ಸಹಿಸುವುದು?.[ಅಂಕಪಟ್ಟಿ]

ಮುಂಬ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಇಂಥದ್ದೊಂದು ಘಟನೆ ನಡೆಯಿತು.ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದು ಅಸಲಿಗೆ ಅಂಪೈರ್ ಗಳದ್ದೇ ತಪ್ಪು ಎನ್ನಲಾಗದು, ವಾರ್ನರ್ ಮಾಡಿದ್ದು ಸರಿ ಎಂದು ಸಮರ್ಥಿಸಲು ಸಾಧ್ಯವಂತೂ ಇಲ್ಲ.[ಸ್ಕೋರ್ ಕಾರ್ಡ್]

IPL 2017: Did SRH captain David Warner cheat against MI?

ವಾರ್ನರ್ ಮಾಡಿದ್ದೇನು? : ಪಂದ್ಯದ ವೇಳೆ ನಾನ್ ಸ್ಟ್ರೈಕ್ ನಲ್ಲಿರಬೇಕಿದ್ದ ಹೈದರಾಬಾದ್ ನಾಯಕ, ಸ್ಟ್ರೈಕ್ ಗೆ ಬಂದರೂ ಅಂಪೈರ್ ಗಳು ವಿರೋಧಿಸಲಿಲ್ಲ. ಅಥವಾ ಅವರಿಗೆ ಅದು ಗೊತ್ತೇ ಆಗಲಿಲ್ಲ.[ಮುಖ್ಯಾಂಶಗಳು: ಹೈದರಾಬಾದ್ ವಿರುದ್ಧ ಮುಂಬೈಗೆ ಅರ್ಹ ಜಯ]

ಫೀಲ್ಡ್ ನಲ್ಲಿ ನಿತಿನ್ ಮೆನನ್ ಹಾಗೂ ಸಿಕೆ ನಂದನ್ ಇಬ್ಬರು ಭಾರತೀಯ ಅಂಪೈರ್ ಗಳಿದ್ದರು. ಇಬ್ಬರು ವಾರ್ನರ್ ನಡೆಯನ್ನು ಗಮನಿಸದೇ ಇದ್ದದ್ದು ಪ್ರಮಾದ.

ಪಂದ್ಯದ ಆರನೇ ಓವರ್ ನಲ್ಲಿ ಜಸ್ಪ್ರೀತ್ ಬೂಮ್ರಾ ಅವರ ಕೊನೆ ಎಸೆತವನ್ನು ಬೌಂಡರಿ ಅಟ್ಟಿದ ವಾರ್ನೆರ್ ಮುಂದಿನ ಓವರ್ ನಲ್ಲಿ ನಾನ್ ಸ್ಟ್ರೈಕ್ ನಲ್ಲಿರಬೇಕಿತ್ತು. ಆದರೆ, ಶಿಖರ್ ಧವನ್ ಬದಲಿಗೆ ಮಿಚೆಲ್ ಮೆಗ್ಲೆನೆಗನ್ ಅವರನ್ನು ವಾರ್ನರ್ ಅವರೇ ಎದುರಿಸಿ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು.

ವಾರ್ನರ್ ಅವರ ನಡೆ ಪ್ರಶಾರ್ಹವಾಗಿದ್ದು, ಫೇರ್ ಪ್ಲೆ ಅವಾರ್ಡ್ ನಲ್ಲಿ ಅಂಕ ಕಡಿತವಾಗಬಹುದು. ಆದರೆ, ಗೊತ್ತಿದ್ದು ಗೊತ್ತಿದ್ದು ವಾರ್ನರ್ ಈ ರೀತಿ ತಪ್ಪು ಎಸಗಿದ್ದು ಏಕೆ? ಭಾರತೀಯ ಅಂಪೈರ್ ಗಳ ಮೇಲೆ ಗೂಬೆ ಕೂರಿಸುವ ಆಸೀಸ್ ಮಾಧ್ಯಮಗಳು ಈಗ ಈ ಘಟನೆಯನ್ನು ಯಾವ ರೀತಿ ಅರ್ಥೈಸಬಹುದು?

ಟಿವಿ ಕಾಮೆಂಟೆಟರ್, ಮಾಜಿ ಆಟಗಾರ ಆಕಾಶ್ ಛೋಪ್ರಾ ಅವರು ಈ ಘಟನೆಯನ್ನು ಮೊದಲಿಗೆ ಗುರುತಿಸಿದರು. ಒಟ್ಟಾರೆ, ಈ ಘಟನೆ ಚರ್ಚೆಯಾಗುತ್ತಿದೆ.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X