ಜೆಟ್ ಏರ್ ವೇಸ್ ಗೇಲಿ ಮಾಡಿದ ದುಬಾರಿ ಆಟಗಾರ!

By:
Subscribe to Oneindia Kannada

ಪುಣೆ, ಮೇ 17: ಪ್ಲೇ ಆಫ್ ಗೂ ಮುನ್ನವೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ತೊರೆದು ಸ್ವದೇಶಕ್ಕೆ ಮರಳುತ್ತಿರುವ ಇಂಗ್ಲೆಂಡಿನ ದುಬಾರಿ ಆಟಗಾರ, ಜೆಟ್ ಏರ್ ವೇಸ್ ಸಂಸ್ಥೆಯನ್ನು ಗೇಲಿ ಮಾಡಿದ್ದಾರೆ. ಬೋರ್ಡಿಂಗ್ ಪಾಸ್ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಬೋರ್ಡಿಂಗ್ ಪಾಸ್ ನಲ್ಲಿ ಅಂಥ ಲೋಪದೋಷ ಏನಿದೆ ತಿಳಿಯಲು ಮುಂದೆ ಓದಿ...

ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡುವ ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಈ ಸಣ್ಣದಾಗಿ ಜೆಟ್ ಏರ್ ವೇಸ್ ಕಾಲೆಳೆದಿದ್ದಾರೆ.

IPl 2017: Ben Stokes trolls Jet Airways

ಜೆಟ್ ಏರ್ ವೇಸ್ ಬೋರ್ಡಿಂಗ್ ಪಾಸ್ ನಲ್ಲಿ ಬೆನ್ ಸ್ಟೋಕ್ಸ್ ಹೆಸರನ್ನು ಸ್ಟ್ರೋಕ್ಸ್ (strokes) ಎಂದು ಮುದ್ರಿಸಲಾಗಿದೆ. ಇದನ್ನು ಇನ್ಸ್ಟ್ರಾ ಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.

ಸ್ಟೀವ್ ಸ್ಮಿತ್ ತಂಡದ ಯಶಸ್ಸಿನಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರ ಅನುಭವದ ಸಲಹೆಗಳು ಭಾರಿ ಪರಿಣಾಮ ಬೀರಿವೆ ಎಂದು ಸ್ಟೋಕ್ಸ್ ಹೇಳಿದ್ದಾರೆ. ಸ್ಟೋಕ್ಸ್ ಅವರನ್ನು ಮುಂಚಿತವಾಗಿ ಸ್ವದೇಶಕ್ಕೆ ಕರೆಸಿಕೊಳ್ಳುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ಕ್ರಮವನ್ನು ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

Typo

A post shared by Ben Stokes (@stokesy) on

ಜೂನ್ 1 ರಿಂದ ಚಾಂಪಿಯನ್ ಟ್ರೋಫಿ ಪಂದ್ಯಗಳು ಇಂಗ್ಲೆಂಡ್ ನಲ್ಲಿ ಆರಂಭವಾಗಲಿವೆ.

English summary
Indian domestic airline Jet Airways misspelt England international and Rising Pune Supergiant (RPS) allrounder Ben Stokes' name on a boarding pass.
Please Wait while comments are loading...