ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತಾ ಮಣಿಸಿದ ಗುಜರಾತ್ ಗೆಲುವಿಗೆ ಕಾರಣವಾದ 5 ಅಂಶಗಳು

ಬ್ಯಾಟ್ಸ್ ಮನ್ ಗಳ ಈ ಅಬ್ಬರದಲ್ಲಿ ಕೊನೆಗೂ ಜಯದ ಮಾಲೆ ಸಂದಿದ್ದು ಗುಜರಾತ್ ಲಯನ್ಸ್ ಗೇ. ಅದೂ ಸುರೇಶ್ ರೈನಾ ಅವರ ಭರ್ಜರಿ ಬ್ಯಾಟಿಂಗ್ ಗೆ ಸಂದ ಗೌರವ.

ಕೋಲ್ಕತಾ, ಏಪ್ರಿಲ್ 22: ಶುಕ್ರವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳದ್ದೇ ಕಾರುಬಾರು. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಲಯನ್ಸ್ ನಡುವಿನ ಆ ಪಂದ್ಯದಲ್ಲಿ ಕೋಲ್ಕತಾದ ಪರವಾಗಿ ಸುನಿಲ್ ನರೇನ್, ರಾಬಿನ್ ಉತ್ತಪ್ಪ ಮಿಂಚಿದರೆ, ಗುಜರಾತ್ ಲಯನ್ಸ್ ಪರವಾಗಿ ಸುರೇಶ್ ರೈನಾ, ಆರೋನ್ ಫಿಂಚ್ ಮಿಂಚಿದರು.

ನಾಯಕ ಸುರೇಶ್ ರೈನಾ (84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್ ನ ನೆರವಿನಿಂದಾಗಿ ಗುಜರಾತ್ ಲಯನ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳ ಜಯ ಕಂಡಿತು.[ಗುಜರಾತ್ ಗೆ ಜಯ ತಂದ ಸುರೇಶ್ ರೈನಾ]

ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಆನಂತರ ತನ್ನ ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ, 18.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಜಯದ ನಗೆ ಬೀರಿತು.[ಐಪಿಎಲ್ 1ರಿಂದ 10ರಲ್ಲಿ ಆರೇಂಜ್ ಕ್ಯಾಪ್ ಪಡೆದ ಆಟಗಾರರಿವರು]

ಬ್ಯಾಟ್ಸ್ ಮನ್ ಗಳ ಈ ಅಬ್ಬರದಲ್ಲಿ ಕೊನೆಗೂ ಜಯದ ಮಾಲೆ ಸಂದಿದ್ದು ಗುಜರಾತ್ ಲಯನ್ಸ್ ಗೇ. ಅದೂ ಸುರೇಶ್ ರೈನಾ ಅವರ ಭರ್ಜರಿ ಬ್ಯಾಟಿಂಗ್ ಗೆ ಸಂದ ಗೌರವ. ಈ ಜಯಕ್ಕೆ ಕಾರಣವಾದ 5 ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.[ಚಿತ್ರ ಕೃಪೆ: ಪಿಟಿಐ ಹಾಗೂ www.iplt20.com]

ಬ್ಯಾಟಿಂಗ್ ನಲ್ಲಿ ಚಿಗುರಿಕೊಂಡಿತು

ಬ್ಯಾಟಿಂಗ್ ನಲ್ಲಿ ಚಿಗುರಿಕೊಂಡಿತು

ಬೌಲಿಂಗ್ ನಲ್ಲಿ ಎಡವಿ, ಕೋಲ್ಕತಾ ತಂಡಕ್ಕ 187 ರನ್ ಗಳ ಬೃಹತ್ ಸ್ಕೋರ್ ಮಾಡಲು ಅನುವು ಮಾಡಿಕೊಟ್ಟಿದ್ದು ಗುಜರಾತ್ ತಂಡದ ವೈಫಲವ್ಯವೇ ಸರಿ. ಆದರೆ, ಆ ವೈಫಲ್ಯವನ್ನು ಮೆಟ್ಟಿ ನಿಂತಿದ್ದು ಬ್ಯಾಟಿಂಗ್ ಲೈನ್ ಅಪ್.

ಮಧ್ಯಮ ಕ್ರಮಾಂಕ ಕೊಂಚ ನಿರಾಳ

ಮಧ್ಯಮ ಕ್ರಮಾಂಕ ಕೊಂಚ ನಿರಾಳ

ಕ್ರಿಕೆಟ್ ಪಂದ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಟಿ20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳ ಮೇಲೆ ಬಹು ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಉತ್ತಮವಾಗಿ ಆಡಿದರೆ, ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಇರುವುದಿಲ್ಲ. ಇಲ್ಲಿಯೂ ಹಾಗೇ ಆಗಿದ್ದು. ಗುಜರಾತ್ ತಂಡದ ಆರಂಭಿಕ ಆಟಗಾರರಾದ ಆರೋನ್ ಫಿಂಚ್, ಬ್ರೆಂಡನ್ ಮೆಕಲಂ ಅವರು ಉತ್ತಮ ಅಡಿಪಾಯ ಹಾಕಿದ್ದು, ಮಧ್ಯಮ ಕ್ರಮಾಂಕವು ಕೊಂಚ ಒತ್ತಡ ರಹಿತವಾಗಿ ಆಡಲು ಸಾಧ್ಯವಾಯಿತು.

ಜಯಕ್ಕೆ ಉತ್ತಮ ಅಡಿಪಾಯ

ಜಯಕ್ಕೆ ಉತ್ತಮ ಅಡಿಪಾಯ

ಆರೋನ್ ಫಿಂಚ್ ಹಾಗೂ ಬ್ರೆಂಡನ್ ಮೆಕಲಂ ಜೋಡಿ, ಗುಜರಾತ್ ಇನಿಂಗ್ಸ್ ಮೊದಮೊದಲು ಸಾಧಾರಣವಾಗಿಯೇ ಆಗಿತ್ತು. ಅದರಲ್ಲೂ ಮಿಂಚಿನ ಆರೋನ್ ಫಿಂಚ್, ಬೌಂಡರಿ, ಸಿಕ್ಸರ್ ಗಳ ಮಳೆ ಸುರಿದರು. 2ನೇ ಓವರ್ ನಲ್ಲಿ 2 ಬೌಂಡರಿ, 1 ಸಿಕ್ಸರ್, 3ನೇ ಓವರ್ ನಲ್ಲೂ 2 ಬೌಂಡರಿ, 1 ಸಿಕ್ಸರ್ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.

ಸುರೇಶ್ ಸ್ಫೋಟಕ ಬ್ಯಾಟಿಂಗ್

ಸುರೇಶ್ ಸ್ಫೋಟಕ ಬ್ಯಾಟಿಂಗ್

ಕೆಲವೊಮ್ಮೆ ತಂಡದ ಆರಂಭಿಕರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಧ್ಯಮ ಕ್ರಮಾಂಕದವರು ಗೆಲುವಿನ ಸೌಧ ಕಟ್ಟುವಲ್ಲಿ ಎಡವುತ್ತಾರೆ. ಆದರೆ, ಇಲ್ಲಿ ಹಾಗಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಸುರೇಶ್ ರೈನಾ, ತಮ್ಮ ಜವಾಬ್ದಾರಿಯರಿತು ತೂಕಬದ್ಧವಾದ ಆಟವಾಡಿದರು. ಅವರ ಸ್ಫೋಟಕ ಬ್ಯಾಟಿಂಗ್ (84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್) ತಂಡವನ್ನು ಅಕ್ಷರಶಃ ಗೆಲುವಿನ ಕಡೆಗೆ ಹೊರಳಿಸಿತು.

ಅಪಾರ ಅನುಭವವೇ ಕಾರಣ

ಅಪಾರ ಅನುಭವವೇ ಕಾರಣ

ಅದರಲ್ಲೂ ರೈನಾ ಆಟ ವೀರೋಚಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಸಲಿಗೆ ಅವರು ಕ್ರೀಸ್ ನಲ್ಲಿ ಆರ್ಭಟಿಸುತ್ತಿದ್ದಾಗ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ದಿನೇಶ್ ಕಾರ್ತೀಕ್, ಈಶನ್ ಕಿಶನ್ ಅವರು ಬೇಗನೇ ಔಟಾದರು. ಹೀಗೆ, ಕಣ್ಣ ಮುಂದೆಯೇ ವಿಕೆಟ್ ಗಳು ಉರುಳುತ್ತಿದ್ದಾಗ ಅದು, ಕ್ರೀಸ್ ನ ಮತ್ತೊಂದು ತುದಿಯಲ್ಲಿ ನಿಂತಿರುವ ಬ್ಯಾಟ್ಸ್ ಮನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಅವರೂ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ, ಇಲ್ಲಿ ಹಾಗಾಗಲಿಲ್ಲ. ರೈನಾ ಹಿಂದಿರುವ ಅವರ ಅಪಾರ ಅನುಭವ ಇಂಥ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಛಾತಿಯನ್ನು ಅವರಿಗೆ ತಂದುಕೊಟ್ಟಿತು.

ಗೆಲುವಿನ ದಡ ಸೇರಿಸಿದ ರವೀಂದ್ರ ಜಡೇಜಾ

ಗೆಲುವಿನ ದಡ ಸೇರಿಸಿದ ರವೀಂದ್ರ ಜಡೇಜಾ

ರೈನಾ ಅವರಂತೆಯೇ, ಇಲ್ಲಿ ಖಂಡಿತವಾಗಿಯೂ ನೆನೆಪಿಸಿಕೊಳ್ಳಬೇಕಾದ ಮತ್ತೊಬ್ಬ ಬ್ಯಾಟ್ಸ್ ಮನ್ ಎಂದರೆ, ಅದು ರವೀಂದ್ರ ಜಡೇಜಾ. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ತಂಡವನ್ನು ಗೆಲುವಿನ ಗೆರೆಯ ಬಳಿ ತಂದು ನಿಲ್ಲಿಸಿದಾಗ, ಅದನ್ನು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸ್ವಲ್ಪ ಪುಷ್ ಮಾಡಿದರೂ ಸಾಕು ತಂಡ ಆ ಗೆಲುವಿನ ಗೆರಯನ್ನು ದಾಟಿಬಿಡುತ್ತದೆ. ಗುಜರಾತ್ ತಂಡದ ವಿಚಾರದಲ್ಲಿ ರೈನಾ ಅವರು ತಂಡವನ್ನು ಹೀಗೆ ಗೆಲುವಿನ ಗೆರೆಯ ಬಳಿ ತಂದರೂ, ಅದನ್ನು ಯಶಸ್ವಿಯಾಗಿ ಗುರಿ ಮುಟ್ಟಿಸಿದ್ದು ರವೀಂದ್ರ ಜಡೇಜಾ. 13 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸೇರಿದಂತೆ 19 ರನ್ ಗಳಿಸಿದ ಅವರು, ತಂಡಕ್ಕೆ ಅರ್ಹ ಜಯ ತಂದುಕೊಟ್ಟರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X