ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಅತ್ಯಂತ ಕಳಪೆ ಮೊತ್ತಗಳಲ್ಲಿ ಆರ್ ಸಿಬಿಯೇ ಬೆಸ್ಟ್

ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು 132 ರನ್ ಚೇಸ್ ಮಾಡಲಾಗದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 49ಸ್ಕೋರಿಗೆ ಆಲೌಟ್ ಆಗಿದೆ. ಈ ಮೂಲಕ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ದಾಖಲೆ ಬರೆಯಿತು.

By Mahesh

ಕೋಲ್ಕತಾ, ಏಪ್ರಿಲ್ 24: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು 132 ರನ್ ಚೇಸ್ ಮಾಡಲಾಗದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 49ಸ್ಕೋರಿಗೆ ಆಲೌಟ್ ಆಗಿದೆ. ಈ ಮೂಲಕ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ದಾಖಲೆ ಬರೆಯಿತು.

ಕೆಕೆಆರ್ ಹಾಗೂ ಆರ್ ಸಿಬಿ ನಡುವಿನ ಅಲ್ಪ ಮೊತ್ತದ ಐಪಿಎಲ್ ಪಂದ್ಯದಲ್ಲಿ ಹಲವು ದಾಖಲೆಗಳು ಚೂರಾಯಿತು.ಆರ್ ಸಿಬಿ ಗಳಿಸಿದ 49ರನ್ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತದ ಸ್ಕೋರ್ ಆಗಿದೆ. ರಾಜಸ್ಥಾನ್ ರಾಯಲ್ಸ್ ತಂಡ 58ರನ್ನಿಗೆ ಆಲೌಟ್ ಆಗಿದ್ದು, ಇಲ್ಲಿ ತನಕದ ಕಳಪೆ ಸ್ಕೋರ್ ಆಗಿತ್ತು.[ಹೀನಾಯ ಸೋಲಿನಲ್ಲೂ ದಾಖಲೆ ಬರೆದ ಆರ್ ಸಿಬಿ]

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ವರ್ಷಾಚರಣೆ ಸಂದರ್ಭದಲ್ಲಿ ಐಪಿಎಲ್ ನಲ್ಲಿ ಇಲ್ಲಿ ತನಕ ಕಂಡಿರುವ ಅತ್ಯಂತ ಕಳಪೆ ಪ್ರದರ್ಶನಗಳ ಪಟ್ಟಿಯಲ್ಲಿ ಈಗ ಆರ್ ಸಿಬಿ ಅಗ್ರಸ್ಥಾನಕ್ಕೇರಿದೆ. ತಂಡವೊಂದು ಗಳಿಸಿದ ಅತಿ ಹೆಚ್ಚು ಮೊತ್ತ ಕೂಡಾ ಆರ್ ಸಿಬಿ ಹೆಸರಿನಲ್ಲೇ ಇದೆ.

#1 ಆರ್ ಸಿಬಿ

#1 ಆರ್ ಸಿಬಿ

132ರನ್ ಟಾರ್ಗೆಟ್ ಚೇಸ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ 9.4 ಓವರ್ ಗಳಲ್ಲಿ 49 ಸ್ಕೋರಿಗೆ ಆಲೌಟ್ ಆಯಿತು. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆರ್ ಸಿಬಿ ವಿರುದ್ಧ 82ರನ್ ಗಳ ಅಂತರದ ಜಯ.

#2 ರಾಜಸ್ಥಾನ್ ರಾಯಲ್ಸ್

#2 ರಾಜಸ್ಥಾನ್ ರಾಯಲ್ಸ್

15.1 ಓವರ್ ಗಳಲ್ಲಿ 58ರನ್ನಿಗೆ ಆಲೌಟ್ ಆಗಿದ್ದ ರಾಜಸ್ಥಾನ್ ರಾಯಲ್ಸ್ (2016-17ನೇ ಸಾಲಿನಿಂದ ಐಪಿಎಲ್ ನಲ್ಲಿ ನಿಷೇಧಕ್ಕೊಳಪಟ್ಟಿದೆ),ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ 2009ರಲ್ಲಿ ನಡೆದ ಈ ಪಂದ್ಯವನ್ನು ರಾಜಸ್ಥಾನ್ ತಂಡ 75ರನ್ ಗಳಿಂದ ಕಳೆದುಕೊಂಡಿತು.

#3 ಮುಂಬೈ ಇಂಡಿಯನ್ಸ್

#3 ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ತಂಡ 15.2 ಓವರ್ ಗಳಲ್ಲಿ 67 ಸ್ಕೋರಿಗೆ ಆಲೌಟ್. ಐಪಿಎ 2008ರ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ.

ಫಲಿತಾಂಶ : ಮುಂಬೈ ತಂಡಕ್ಕೆ 8 ವಿಕೆಟ್ ಗಳಿಂದ ಸೋಲು.

#4 ಆರ್ ಸಿಬಿ

#4 ಆರ್ ಸಿಬಿ

ಐಪಿಎಲ್ 2014ರ ಪಂದ್ಯದಲ್ಲಿ 15 ಓವರ್ ಗಳಲ್ಲಿ 70 ಸ್ಕೋರಿಗೆ ಆಲೌಟ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಫಲಿತಾಂಶ: ರಾಜಸ್ಥಾನ್ ರಾಯಲ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 8 ವಿಕೆಟ್ ಗಳ ಸೋಲು.

#5 ಕೊಚ್ಚಿ

#5 ಕೊಚ್ಚಿ

ಐಪಿಎಲ್ 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡ 16.3 ಓವರ್ ಗಳಲ್ಲಿ 74ಸ್ಕೋರಿಗೆ ಆಲೌಟ್ ಆಗಿತ್ತು. ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ 55 ರನ್ ಗಳ ಜಯ ಲಭಿಸಿತ್ತು. ಎರಡು ತಂಡಗಳು ಈಗ ಐಪಿಎಲ್ ನಲ್ಲಿಲ್ಲ.

#6 ಸಿಎಸ್ ಕೆ

#6 ಸಿಎಸ್ ಕೆ

2013ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 15.2 ಓವರ್ ಗಳಲ್ಲಿ 79ಸ್ಕೋರಿಗೆ ಆಲೌಟ್ ಆಗಿತ್ತು. ಮುಂಬೈ ಇಂಡಿಯನ್ಸ್ ತಂಡಕ್ಕೆ 60 ರನ್ ಗಳ ಜಯ ಲಭಿಸಿತ್ತು.

#7 ಡೆಲ್ಲಿ ಡೇರ್ ಡೆವಿಲ್ಸ್

#7 ಡೆಲ್ಲಿ ಡೇರ್ ಡೆವಿಲ್ಸ್

2013ರ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 19.1ಓವರ್ ಗಳಲ್ಲಿ 80 ಸ್ಕೋರಿಗೆ ಆಲೌಟ್ ಆಗಿತ್ತು. ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ 6 ವಿಕೆಟ್ ಗಳ ಜಯ ಲಭಿಸಿತ್ತು.

#8 ರಾಜಸ್ಥಾನ್ ರಾಯಲ್ಸ್

#8 ರಾಜಸ್ಥಾನ್ ರಾಯಲ್ಸ್

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 2011ರ ಐಪಿಎಲ್ ಪಂದ್ಯದಲ್ಲಿ 15.2 ಓವರ್ಸ್ ಗಳಲ್ಲಿ 81 ಸ್ಕೋರಿಗೆ ಆಲೌಟ್ ಆಗಿತ್ತು. ರಾಜಸ್ಥಾನ್ ರಾಯಲ್ಸ್ ತಂಡ 8ವಿಕೆಟ್ ಗಳಿಂದ ಸೋಲು ಕಂಡಿತು

#9 ಡೆಕ್ಕನ್ ಚಾರ್ಜರ್ಸ್

#9 ಡೆಕ್ಕನ್ ಚಾರ್ಜರ್ಸ್

ಐಪಿಎಲ್ 2010ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಕ್ಕನ್ ಚಾರ್ಜರ್ಸ್ ತಂಡ 18.3 ಓವರ್ ಗಳಲ್ಲಿ 82 ಸ್ಕೋರ್ ಗೆ ಆಲೌಟ್ ಆಗಿದೆ. ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ 9 ವಿಕೆಟ್ ಗಳಿಂದ ಸೋಲು.

#10 ಆರ್ ಸಿಬಿ

#10 ಆರ್ ಸಿಬಿ

ಐಪಿಎಲ್ 2008ರಲ್ಲಿ 15.1 ಓವರ್ ಗಳಲ್ಲಿ 82 ಸ್ಕೋರ್ ಗೆ ಆರ್ ಸಿಬಿ ಆಲೌಟ್ ಆಗಿತ್ತು. ಕೆಕೆಆರ್ ತಂಡಕ್ಕೆ 140 ರನ್ ಗಳ ಅಂತರದ ಜಯ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X