ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ: ಆರ್‌ಸಿಬಿ ಕತೆ ಏನು?

By Madhusoodhan

ಬೆಂಗಳೂರು, ಮೇ 21: ಹೈದರಾಬಾದ್ ಎದುರು ಡೆಲ್ಲಿ ಗೆಲ್ಲುವುದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕುತೂಹಲ ಘಟಕ್ಕೆ ಬಂದು ತಲುಪಿದೆ. ಎಲ್ಲ ತಂಡಗಳಿಗೂ ಉಳಿದಿರುವ ಒಂದೊಂದು ಪಂದ್ಯಗಳು ಮಹತ್ವದ್ದಾಗಿ ಪರಿಣಮಿಸಿದೆ.

ಪುಣೆ ಮತ್ತು ಪಂಜಾಬ್ ನಡುವಿನ ಪಂದ್ಯ ಆಟಕ್ಕುಂಟು ಲೆಕ್ಕಕಿಲ್ಲ. ಆದರೆ ಗುಜರಾತ್ -ಮುಂಬೈ, ಬೆಂಗಳೂರು-ಡೆಲ್ಲಿ, ಕೋಲ್ಕತಾ-ಹೈದರಾಬಾದ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸುವುದು ಪಕ್ಕಾ.[ವಿರಾಟ್,,, ಈ ರೀತಿಯ ಬ್ಯಾಟಿಂಗ್ ನಿಲ್ಲಿಸಿದರೆ ಒಳ್ಳೆಯದು!]

ಅಂಕಪಟ್ಟಿ ನೋಡಿ

ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಪೈಪೋಟಿ, ಮೊದಲ ಎರಡು ಸ್ಥಾನ ಗಳಿಸಿಕೊಳ್ಳಲು ಸ್ಪರ್ಧೆ ಶುರುವಾಗಿದೆ. ಲೆಕ್ಕಾಚಾರಗಳು ತಿಳಿದುಕೊಂಡಂತೆ ಯಾರಿಗೂ ಸುಲಭವಾಗಿಲ್ಲ. ಗುಜರಾತ್ ಮತ್ತು ಹೈದಾರಾಬಾದ್ ತಂಡಗಳು ಪ್ಲೇ ಆಫ್ ಪ್ರವೇಶಮಾಡಿದ್ದರೂ ಮೊದಲೆರಡು ಸ್ಥಾನಕ್ಕಾಗಿ ಜಿದ್ದಿಗೆ ಬೀಳಲಿವೆ. ಬೆಂಗಳೂರು, ಮುಂಬೈ, ಕೋಲ್ಕತಾ ಮತ್ತು ಡೆಲ್ಲಿ ಅಗ್ರ ನಾಲ್ಕರೊಳಗೆ ಸ್ಥಾನ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿವೆ.[ವಿರಾಟ್-ಅನುಷ್ಕಾ ಬೆಸುಗೆಗೆ ಬೆಂಗಳೂರು ಸಾಕ್ಷಿ!]

ಬೆಂಗಳೂರು, ಮುಂಬೈ, ಕೋಲ್ಕತಾ ಮತ್ತು ಡೆಲ್ಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದರೆ ಪ್ಲೇ ಆಫ್, ಸೋತರೆ ಮನೆಗೆ. ಈ ಬಾರಿಯ ಐಪಿಎಲ್ ನ ರೋಚಕತೆಗೆ ಮುಂಬರುವ ಪಂದ್ಯಗಳು ಮತ್ತಷ್ಟು ಮೆರಗು ತಂದುಕೊಡಲಿವೆ.

ರಾಯಲ್ ಚಾಲೆಂಜರ್ಸ್ ಕತೆ

ರಾಯಲ್ ಚಾಲೆಂಜರ್ಸ್ ಕತೆ

ದ್ರಾವಿಡ್ ಮಾರ್ಗದರ್ಶನದ ಡೆಲ್ಲಿಯನ್ನು ಅದ್ಭುತ ಪ್ರದರ್ಶನ ನೀಡುತ್ತಿರುವ ಕೊಹ್ಲಿ ನೇತೃತ್ವದ ಆರ್ ಸಿಬಿ ರಾಯ್ಪುರದಲ್ಲಿ ಮೇ 22 ಭಾನುವಾರ ಎದುರಿಸಲಿದೆ. ರಾಯ್ಪುರದಲ್ಲಿ ಡೆಲ್ಲಿ ಗೆಲುವಿನ ದಾಖಲೆ ಉತ್ತಮವಾಗಿರುವುದು ಬೆಂಗಳೂರಿಗೆ ಚಿಂತಿಸಬೇಕಾದ ಸಂಗತಿ.

ದ್ರಾವಿಡ್ VS ಬೆಂಗಳೂರು

ದ್ರಾವಿಡ್ VS ಬೆಂಗಳೂರು

ಡೆಲ್ಲಿ ತಂಡದಲ್ಲಿ ಕನ್ನಡಿಗರಿದ್ದಾರೆ, ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗಾಗಿ ಪಂದ್ಯ ದ್ರಾವಿಡ್ VS ಬೆಂಗಳೂರು ಆಗಿ ಬದಲಾದರೂ ಆಶ್ಚರ್ಯವಿಲ್ಲ.

ವಿರಾಟ್ ಅಬ್ಬರ

ವಿರಾಟ್ ಅಬ್ಬರ

ರನ್ ಸರದಾರ ವಿರಾಟ್, ಲಯಕ್ಕೆ ಮರಳಿರುವ ಗೇಲ್, ಎಬಿ ಡಿವಿಲಿಯರ್ಸ್ ಒಳಗೊಂಡ ಬೆಂಗಳೂರಿಗೆ ಬ್ಯಾಟಿಂಗ್ ಬಲವೇ ಶಕ್ತಿ. ಜಹೀರ್ ಖಾನ್ ಮಾರ್ಗದರ್ಶನದ ಡೆಲ್ಲಿಯಲ್ಲಿ ದೇಶಿಯ ಆಟಗಾರರು ಮಿಂಚುತ್ತಿದ್ದಾರೆ. ಡಿ ಕಾಕ್ ಕಾಡಿದರೂ ಆಶ್ಚರ್ಯವಿಲ್ಲ.

ಇನ್ನೊಂದು ಲೆಕ್ಕಾಚಾರ

ಇನ್ನೊಂದು ಲೆಕ್ಕಾಚಾರ

ಆರ್ ಸಿಬಿಯ ರನ್ ರೇಟ್ ಎಲ್ಲರಿಗಿಂತ ಉತ್ತಮವಾಗಿದೆ. ಒಂದು ವೇಳೆ ಡೆಲ್ಲಿ ವಿರುದ್ಧ ಸೋತರು ಅಗ್ರ ನಾಲ್ಕೊರಳಗೆ ಸ್ಥಾನ ಸಿಗಬಹುದು. ಹಾಗಾಗಬೇಕು ಅಂದರೆ ಗುಜರಾತ್ -ಮುಂಬೈ ನಡುವಿನ ಪಂದ್ಯದಲ್ಲಿ ಗುಜರಾತ್ ಗೆಲ್ಲಬೇಕು. ಕೋಲ್ಕತಾ-ಹೈದರಾಬಾದ್ ಪಂದ್ಯದಲ್ಲಿ ಹೈದರಾಬಾದ್ ಗೆಲ್ಲಬೇಕು. ಹೀಗಾದರೆ ಕೋಲ್ಕತಾ ಮತ್ತು ಮುಂಬೈ ಪ್ರಯಾಣ ಮುಗಿಯಲಿದೆ.

ಮೊದಲೆರಡು ಸ್ಥಾನಕ್ಕೆ ಪೈಪೋಟಿ

ಮೊದಲೆರಡು ಸ್ಥಾನಕ್ಕೆ ಪೈಪೋಟಿ

ಮೊದಲೆರಡು ಸ್ಥಾನ ಪಡೆದುಕೊಂಡರೆ ಮತ್ತೊಂದು ಪಂದ್ಯ ಆಡಲು ಅವಕಾಶ ಸಿಗಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ತಂಡಗಳು ಸೆಣೆಸವೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X