ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ಸೋಲಿಗೆ ಬೌಲಿಂಗ್ ಕಾರಣವಲ್ಲ: ಕೆಎಲ್ ರಾಹುಲ್

By Mahesh

ಬೆಂಗಳೂರು, ಮೇ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಹೇಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ, ಎದುರಾಳಿ ತಂಡ ವಿಕೆಟ್ ಗಳನ್ನು ಉದುರಿಸುವುದು, ರನ್ ನಿಯಂತ್ರಿಸುವುದರಲ್ಲಿ ಎಡವುದು ಸಾಮಾನ್ಯ ಸಂಗತಿ., ಆದರೆ, ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿಗೆ ಬೌಲಿಂಗ್ ಕಾರಣವಲ್ಲ ಎಂದು ಆರ್ ಸಿಬಿ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೇಳಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-9 ನಲ್ಲ್ ಮೊದಲ ಬಾರಿಗೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಆದರೆ, ಬೌಲಿಂಗ್ ತೀರಾ ಕಳಪೆಯಾಗಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕೆ ರನ್ ಚೇಸ್ ಮಾಡಲು ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಂಪೂರ್ಣ ಸಹಕಾರಿಯಾಗಿದ್ದೇ ಆರ್ ಸಿಬಿ ಸೋಲಿಗೆ ಕಾರಣ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.[]

IPL 2016: Mumbai benefited from an easy pitch in run-chase, says KL Rahul

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್​ಗಳ ಸೋಲು ಕಂಡಿರುವ ಆರ್ ಸಿಬಿಗೆ ಪ್ಲೇ ಆಫ್ ಹಾದಿ ಕಷ್ಟಕರ. ಇನ್ನೊಂದೆಡೆ ರೋಹಿತ್ ಪಡೆ 11ನೇ ಪಂದ್ಯದಲ್ಲಿ ಕಂಡ 6ನೇ ಜಯದಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. [ಅಂಕಪಟ್ಟಿ]

ಆರ್​ಸಿಬಿ ತಂಡ ತನ್ನ ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗುಜರಾತ್ ಲಯನ್ಸ್ (ಮೇ 14), ಕೆಕೆಆರ್ (ಮೇ 16), ಪಂಜಾಬ್ (18) ಮತ್ತು ಡೆಲ್ಲಿ ಡೇರ್ ಡೆವಿಲ್ಸ್ (ಮೇ 22) ವಿರುದ್ಧ ಆಡಬೇಕಿದೆ.



ಆರ್ ಸಿಬಿ ಸ್ಟಾರ್ ಬ್ಯಾಟ್ಸ್​ಮನ್​ಗಳ ವೈಫಲ್ಯ ಕಂಡರೂ ಕನ್ನಡಿಗ ಕೆಎಲ್ ರಾಹುಲ್ ಅಜೇಯ 68ರನ್( 53 ಎಸೆತ, 3‍X4, 4X6) ನೆರವಿನಿಂದ 4 ವಿಕೆಟ್​ಗೆ 151 ರನ್ ಗಳಿಸಿತು. ಮುಂಬೈ ತಂಡ 18.4 ಓವರ್​ಗಳಲ್ಲಿ 4 ವಿಕೆಟ್​ಗೆ 153 ರನ್ ಗಳಿಸಿ ಜಯ ಗಳಿಸಿತು.

ಮುಂಬೈ ಪರ ಪೊಲ್ಲಾರ್ಡ್ ಅಜೇಯ 35ರನ್(19 ಎಸೆತ, 3‍X4, 2X6) ಮತ್ತು ಜೋಸ್ ಬಟ್ಲರ್ ಅಜೇಯ 29ರನ್(11 ಎಸೆತ, 1‍X4, 3X6) 21 ಎಸೆತಗಳಲ್ಲೇ 55 ರನ್ ಕಲೆ ಹಾಕಿ ಜಯದ ಗಡಿ ದಾಟಿಸಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X