ಕೋಲ್ಕತ್ತಾ ಶುಭಾರಂಭ, ಡೆಲ್ಲಿ ವಿರುದ್ಧ ಸುಲಭ ಜಯ

By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 11: ಹೊಸ ಮ್ಯಾನೇಜ್ಮೆಂಟ್, ರಾಹುಲ್ ದ್ರಾವಿಡ್ ರಂಥ ದಿಗ್ಗಜರ ಮಾರ್ಗದರ್ಶನ ಇದ್ದರೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯಾವುದೇ ವಿಭಾಗದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್ 9ನೇ ಆವೃತ್ತಿನ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡ ಉತ್ತಮ ಪ್ರದರ್ಶನ ನೀಡಿ ಭಾನುವಾರ ರಾತ್ರಿ ಡೆಲ್ಲಿ ವಿರುದ್ಧ ಸುಲಭ ಜಯ ದಾಖಲಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೋಲ್ಕತ್ತಾ ನೈಟ್​ರೈಡರ್ಸ್ ಪರ ಆಂಡ್ರೆ ರಸೆಲ್ (24ಕ್ಕೆ 3) ಹಾಗೂ ಹಿರಿಯ ಸ್ಪಿನ್ನರ್ ಬ್ರಾಡ್ ಹಾಗ್ (19ಕ್ಕೆ 3) ಬೌಲಿಂಗ್​ ದಾಳಿಗೆ ಸಿಲುಕಿದ ಡೆಲ್ಲಿ ಆಟಗಾರರು 17.4 ಓವರ್​ಗಳಲ್ಲಿ ಕೇವಲ 98 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.

IPL 2016: Clinical Kolkata overwhelm Delhi by 9 wickets

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾಗೆ ನಾಯಕ ಗೌತಮ್ ಗಂಭೀರ್ ಅಜೇಯ 38 ರನ್( 41 ಎಸೆತ, 5‍X4) ಹಾಗೂ ರಾಬಿನ್ ಉತ್ತಪ್ಪ 35 ರನ್(33 ಎಸೆತ, 7X4) ಉತ್ತಮ ಆರಂಭ ನೆರವಿನಿಂದ 14.1ಓವರ್​ಗಳಲ್ಲಿ 1 ವಿಕೆಟ್​ಗೆ 99 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ರಾಹುಲ್ ದ್ರಾವಿಡ್​ ಅವರು ಡೆಲ್ಲಿ ತಂಡದ ಮೆಂಟರ್ ಆಗಿದ್ದು, ಜಹೀರ್ ಖಾನ್ ತಂಡದ ನಾಯಕರಾದ ಮೇಲೆ ಉತ್ತಮ ಪ್ರದರ್ಶನದ ನಿರೀಕ್ಷೆಯಿತ್ತು. ಆದರೆ, ಮೊದಲ ವಿಕೆಟ್​ಗೆ ಕ್ವಿಂಟನ್ ಡಿ ಕಾಕ್ (17) ಹಾಗೂ ಕರ್ನಾಟಕದ ಮಯಾಂಕ್ ಅಗರ್ವಾಲ್ (9) 14 ಎಸೆತದಲ್ಲಿ 24 ರನ್ ಸೇರಿಸಿದ್ದು ಬಿಟ್ಟರೆ ನಂತರ ಜೊತೆಯಾಟದ ಕೊರತೆ ಎದುರಿಸಿತು.

ಕೋಲ್ಕತ್ತಾ ಶುಭಾರಂಭ, ಡೆಲ್ಲಿ ವಿರುದ್ಧ ಸುಲಭ ಜಯ

ಮತ್ತೊಬ್ಬ ಕರ್ನಾಟಕದ ಮೂಲದ ಆಟಗಾರ ಕರುಣ್ ನಾಯರ್ 3 ಎಸೆತ ಎದುರಿಸಿ ನಿರ್ಗಮಿಸಿದರು., ಪವನ್ ನೇಗಿ (15) ಹಾಗೂ ಸಂಜು ಸ್ಯಾಮ್ಸನ್ (11) ಎರಡಂಕಿ ದಾಟಿದರು. ನೇಗಿ ವಿಕೆಟ್ ಬಿದ್ದ ಬಳಿಕ ಕ್ರೀಸ್​ಗಿಳಿದ ಕಾಲೋಸ್ ಬ್ರಾಥ್​ವೇಟ್ ಒಂದು ಸಿಕ್ಸ್ ಬಾರಿಸಿ ಸ್ಪಿನ್ನರ್ ಪಿಯೂಷ್ ಎಲ್ ಬಿ ಬಲೆಗೆ ಬಿದ್ದರು.

ಲಯ ಕಳೆದುಕೊಂಡ ಜಹೀರ್ : ರಾಬಿನ್ ಹಾಗೂ ಗೌತಮ್ ಮೊದಲ ವಿಕೆಟ್​ಗೆ ಈ ಜೋಡಿ 9.4 ಓವರ್​ಗಳಲ್ಲಿ 69 ರನ್ ಸೇರಿಸಿ ಭದ್ರ ಬುನಾದಿ ಹಾಕಲು ಜಹೀರ್ ಕೆಟ್ಟ ಬೌಲಿಂಗ್ ಕೂಡಾ ಕಾರಣವಾಯಿತು. ಅಮಿತ್ ಮಿಶ್ರಾ ಓವರ್​ನಲ್ಲಿ ಉತ್ತಪ್ಪ ಕ್ಯಾಚಿತ್ತು ನಿರ್ಗಮಿಸಿದ ಮೇಲೆ ಕರ್ನಾಟಕದ ಮನೀಶ್ ಪಾಂಡೆ ಬೌಂಡರಿಗಳನ್ನು ಬಾರಿಸುತ್ತಾ ಅಜೇಯ 15ರನ್ ಗಳಿಸಿ ನಾಯಕ ಗೌತಮ್ ಜೊತೆಗೆ ಗೆಲುವಿನ ಗುರಿ ಮುಟ್ಟಿಸಿದರು.

English summary
A stupendous bowling effort backed up by steady batting helped two-time champions Kolkata Knight Riders (KKR) overwhelm Delhi Daredevils by 9 wickets in their Indian Premier League (IPL) opener at the Eden Gardens here on Sunday.
Please Wait while comments are loading...