ಐಪಿಎಲ್ : ಪ್ರೇಕ್ಷಕರೇ ಥರ್ಡ್ ಅಂಪೈರ್ ಆಗುವ ಚಾನ್ಸ್

Written by: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 06: ಈ ಬಾರಿಯ 9ನೇ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನ ಔಟ್ ನಾಟೌಟ್ ತೀರ್ಮಾನವನ್ನು ಮೂರನೇ ಅಂಪೈರ್ ಪ್ರಕಟಿಸುವ ವೇಳೆ ಮೈದಾನದಲ್ಲಿರುವ ಪ್ರೇಕ್ಷಕರು ಸಹ ತಮ್ಮ ತೀರ್ಮಾನವನ್ನು ನೀಡಬಹುದು ಎಂದು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಏನಪ್ಪಾ ಇದು ಅಂಪೈರ್ ಗಳು ನೀಡುವ ನಿರ್ಣಾಯವನ್ನು ಪ್ರೇಕ್ಷಕರು ನಿರ್ಣಯ ನೀಡಬಹುದು ಎಂದು ಕೊಳ್ಳುತ್ತೀರಾ. ಹೌದು ಅಂಥ ವಿನೂತನ ವಿಶೇಷತೆಯೊಂದನ್ನು ಈ ಬಾರಿಯ ಐಪಿಎಲ್ ನಲ್ಲಿ ಜಾರಿಗೆ ತಂದಿದೆ. [ಬಿಸಿಸಿಐಗೆ ಸುಪ್ರೀಂನಿಂದ ತಪರಾಕಿ!]

IPL 2016: Chance for spectators to turn third umpires

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಪ್ಲೇ ಕಾರ್ಡ್ ನ್ನು ವಿತರಿಸಲಾಗುವುದು. ಆಟಗಾರನ ಔಟೋ ಅಥವಾ ನಾಟೌಟೋ ಎಂದು ಪ್ರೇಕ್ಷಕರು ಪ್ರಕಟಿಸುವ ತೀರ್ಪನ್ನು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. [ವಿರಾಟ್ ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!]

ಅಂತಿಮವಾಗಿ ಪ್ರೇಕ್ಷಕರ ತೀರ್ಪನ್ನೇ ಫೈನಲ್ ಮಾಡಲಾಗದು, ಮೂರನೇ ಅಂಪೈರ್ ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಶುಕ್ಲಾ ತಿಳಿಸಿದ್ದಾರೆ. ಪ್ರೇಕ್ಷಕರು ನೀಡುವ ತೀರ್ಪನ್ನು ಅಂಪೈರ್ ಪರಿಗಣಿಸಬೇಕೆನ್ನುವ ನಿಯಮವಿಲ್ಲ. ಟಿ.ವಿ ಸ್ಕ್ರೀನ್ ನೋಡಿಯೇ ಮೂರನೇ ಅಂಪೈರ್ ತೀರ್ಮನ್ನು ಪ್ರಕಟಿಸುತ್ತಾರೆ.[ಕ್ರಿಕೆಟ್‌ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈ ಕೋರ್ಟ್]

ಸ್ಟೇಡಿಯಂಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಶುಕ್ಲಾ ಹೇಳಿದ್ದಾರೆ. ಬಾಲಿವುಡ್ ತಾರೆಗಳಾದ ರಣವೀರ್ ಸಿಂಗ್, ಕತ್ರೀನಾ ಕೈಫ್, ಖ್ಯಾತ ಹಾಡುಗಾರ ಹನಿ ಸಿಂಗ್ 9ನೇ ಐಪಿಲ್ ಆವೃತ್ತಿಗೆ ಗ್ರಾಂಡ್ ಸ್ಟಾರ್ಟ್ ನೀಡಲಿದ್ದಾರೆ ಎಂದು ಅಧ್ಯಕ್ಷ ರಾಜೀವ್ ತಿಳಿಸಿದ್ದಾರೆ.

English summary
Indian Premier League (IPL) chairman Rajiv Shukla today (April 5) said that in this season of the popular T20 tournament, the viewers too would get a chance to air their views on decisions referred to the third umpire.
Please Wait while comments are loading...