ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್ ರೈಸರ್ಸ್ ಮೇಲೆ ರಾಯಲ್ ಚಾಲೆಂಜರ್ಸ್ ಸವಾರಿ!

By Mahesh

ಬೆಂಗಳೂರು, ಏಪ್ರಿಲ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಡ್ಡಿದ್ದ ಬೃಹತ್ ಮೊತ್ತದ ಚಾಲೆಂಜ್ ಗೆಲ್ಲಲು ಆಗದೆ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋತು ಸುಣ್ಣವಾಗಿದೆ. ಮಂಗಳವಾರ ರಾತ್ರಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯಲ್ಲಿ ಪ್ರೇಕ್ಷಕರು ಮಿಂದೆದ್ದು ಕುಣಿದಾಡಿದರು.[ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಭರ್ಜರಿ 157 ರನ್ (87 ಎಸೆತಗಳು) ಗಳ ಜೊತೆಯಾಟ, ಸರ್ಫರಾಜ್ ಚಿನಕುರಳಿ ಆಟದ ಮೂಲಕ ಆರ್ ಸಿಬಿ ಬೃಹತ್ ಮೊತ್ತ (227/4) ಪೇರಿಸಿತು. ಕ್ರಿಸ್ ಗೇಲ್ 1 ರನ್ ಗಳಿಸಿ ಔಟಾಗಿದ್ದು ಮರೆಯುವಂತೆ ಎಬಿಡಿ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡಿದರು. []

IPL 2016: AB de Villiers, Virat Kohli dazzle as RCB thrash SRH

ಎಬಿಡಿ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ಅಂತಿಮವಾಗಿ 42 ಎಸೆತಗಳಲ್ಲಿ 82ರನ್ ಗಳಿಸಿ ಔಟಾದರು. ನಾಯಕ ಕೊಹ್ಲಿ 40 ಎಸೆತದಲ್ಲಿ 50 ರನ್ ಪೂರೈಸಿ ನಂತರ 51 ಎಸೆತಗಳಲ್ಲಿ 75ರನ್ ಗಳಿಸಿದರು.[ರಾಯಲ್ ಚಾಲೆಂಜರ್ಸ್ ಬೆಂಗಳೂರು #PlayBold ಜರ್ಸಿ]

ಎಬಿಡಿ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ಅಂತಿಮವಾಗಿ 42 ಎಸೆತಗಳಲ್ಲಿ 82ರನ್ (42 ಎಸೆತ, 7X4 , 6 X6) ಗಳಿಸಿ ಔಟಾದರು. ನಾಯಕ ಕೊಹ್ಲಿ 40 ಎಸೆತದಲ್ಲಿ 50 ರನ್ ಪೂರೈಸಿ ನಂತರ 51 ಎಸೆತಗಳಲ್ಲಿ 75ರನ್ (51 ಎಸೆತ, 7X4, 3X6) ಗಳಿಸಿದರು. ಸರ್ಫ್ರಾಜ್ ಖಾನ್ಅಜೇಯ 35ರನ್(10 ಎಸೆತ, 5‍X4, 2x6).[ಭೋಗ್ಲೆ ಹೊರಹಾಕಲು ಯಾರು ಕಾರಣ?]

ನಾಯಕ ಡೇವಿಡ್ ವಾರ್ನರ್ 25ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸಿಡಿಸಿ 58ರನ್ ಗಳಿಸಿ ಅಬ್ಬರಿಸಿದರು. ಉಳಿದಂತೆ ಕೊನೆಯಲ್ಲಿ ಆಶೀಶ್ ರೆಡ್ಡಿ 18 ಎಸೆತಗಳಲ್ಲಿ 32ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಉಳಿದಂತೆ, ಸನ್​ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್​ಗೆ 182 ರನ್ ಗಳಿಸಿ ಸೊಲೊಪ್ಪಿಕೊಂಡಿತು.[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

200ಕ್ಕಿಂತ ಅಧಿಕ ಮೊತ್ತ : ಆರ್​ಸಿಬಿ ತಂಡ ಐಪಿಎಲ್​ನಲ್ಲಿ 9ನೇ ಬಾರಿ ಈ ಸಾಧನೆ ಮಾಡಿದೆ. ಆದರೆ, ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಸಿಎಸ್ ಕೆ 12 ಬಾರಿ 200ರನ್ ಗಡಿ ದಾಟಿದೆ. ಉಳಿದಂತೆ, ಪಂಜಾಬ್ (10), ರಾಜಸ್ಥಾನ ರಾಯಲ್ಸ್, ಮುಂಬೈ (6), ಕೆಕೆಆರ್ (4) ಹಾಗೂ ಡೆಲ್ಲಿ, ಸನ್​ರೈಸರ್ಸ್ (2) ಹಾಗೂ ಡೆಕ್ಕನ್ ಚಾರ್ಜರ್ಸ್ ಒಮ್ಮೆ ಈ ಸಾಧನೆ ಮಾಡಿವೆ.[ವಿಶ್ವ ದಾಖಲೆ ಸ್ಥಾಪಿಸಿದ ವೇಗಿ ಡ್ವಾಯ್ನೆ ಬ್ರಾವೋ]

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X