ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೂಲ್ ಕ್ಯಾಪ್ಟನ್ ಧೋನಿಗೆ ಸಿಟ್ಟು ತರಿಸಿದ ಸರ್ ಜಡೇಜ!

By Mahesh

ಚೆನ್ನೈ, ಮೇ.11: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಎಂದರೆ ಥಂಡ ಥಂಡಾ ಕೂಲ್ ಎಂದೇ ಎಲ್ಲರೂ ತಿಳಿದಿದ್ದಾರೆ. ಅದರೆ, ಧೋನಿಗೂ ಸಿಟ್ಟು ಬಂದ ದೃಶ್ಯಕ್ಕೆ ಎಂ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಯಿತು. ಸರ್ ಜಡೇಜ ಧೋನಿ ಪಿತ್ತ ನೆತ್ತಿಗೇರಿಸಿದರೂ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದಿತ್ತರು.

| ಐಪಿಎಲ್ ವಿಶೇಷ ಪುಟ

ರಾಜಸ್ಥಾನ್ ರಾಯಲ್ಸ್ ತಂಡ ಕೊನೆ ಹಂತದಲ್ಲಿ ಇನ್ನಿಲ್ಲದ ಪ್ರಯತ್ನ ಮಾಡಿದರೂ ಗೆಲುವು ಕಾಣಲಾಗಲಿಲ್ಲ. 157ರನ್ ಸ್ಕೋರ್ ಮಾಡಿ ರಾಯಲ್ಸ್ ತಂಡವನ್ನು ನಿಯಂತ್ರಿಸಿದ್ದಲ್ಲದೆ 12 ರನ್ ಗಳ ಜಯ ದಾಖಲಿಸಿದ ಚೆನ್ನೈ ಈಗ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಮಿಂಚಿ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಎನಿಸಿ ತಂಡವನ್ನು ಮುಂದಿನ ಹಂತಕ್ಕೆ ಅರ್ಹರಾಗುವಂತೆ ಮಾಡಿದರು. [ಎಬಿ ಡಿ ಬಂದ ದಾರಿಬಿಡಿ, ಹೊಡಿ ಬಡಿ ಆಟ ನೋಡಿ]

ಅದರೆ, ಧೋನಿಗೆ ಸಿಟ್ಟಿಗೆ ಕಾರಣವಾಗಿದ್ದು ಜಡೇಜ ಅವರ ಫೀಲ್ಡಿಂಗ್. ಐಪಿಎಲ್ 2015ರಲ್ಲಿ ಆಲ್ ರೌಂಡರ್ ಜಡೇಜ ಸತತ ವೈಫಲ್ಯದ ನಡುವೆಯೂ ಧೋನಿ ಕೃಪೆಯಿಂದ ಪ್ರತಿ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡ ಅದೃಷ್ಟವಂತ ಕ್ರಿಕೆಟರ್ ಆಗಿದ್ದರು. ಆದರೆ, ಧೋನಿ ಇರಿಸಿದ್ದ ನಂಬಿಕೆಗೆ ತಕ್ಕಂತೆ ಜಡೇಜ ಆಡಿದ್ದು ಮಾತ್ರ ರಾಜಸ್ಥಾನ್ ರಾಯಲ್ಸ್ ವಿರುದ್ಧ

ಮಾತ್ರ. ಧೋನಿ ಸಿಟ್ಟಿಗೇರಿದ್ದು ಏಕೆ? ಧೋನಿ ಸಿಟ್ಟು, ಜಡೇಜ ಆಟದ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದ ಚಿತ್ರ ವಿಚಿತ್ರ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ಓದಿ ಆನಂದಿಸಿ...

ಮಿಸ್ ಫೀಲ್ಡ್ ಮಾಡಿದ ಜಡೇಜ

ಮಿಸ್ ಫೀಲ್ಡ್ ಮಾಡಿದ ಜಡೇಜ

ಕೊನೆ ಓವರ್ ನಲ್ಲಿ ಆರ್ ಆರ್ ಗೆಲ್ಲಲು 27ರನ್ ಬೇಕಿತ್ತು. ಚೆನ್ನೈ ಬೌಲರ್ ಬ್ರಾವೋ ಮೊದಲ ಎಸೆತವನ್ನು ಆರ್ ಆರ್ ಬ್ಯಾಟ್ಸಮನ್ ಮಾರೀಸ್ ಸಿಕ್ಸ್ ಎತ್ತಿದ್ದರು. ನಂತರ ಒಂದು ನೋ ಬಾಲ್ ಆಗಿ 7 ರನ್ ಬಂದಿತ್ತು. 2ನೇ ಎಸೆತವನ್ನು ಮಿಡ್ ವಿಕೆಟ್ ಗೆ ತಳ್ಳಿದ ಮಾರೀಸ್ ಒಂದು ರನ್ ಬದಲಿಗೆ 2 ರನ್ ಪಡೆದರು ಇದಕ್ಕೆ ಜಡೇಜ ಮಿಸ್ ಫೀಲ್ಡಿಂಗ್ ಕಾರಣವಾಗಿತ್ತು. ಇದು ಧೋನಿ ಸಿಟ್ಟಿಗೆ ಕಾರಣವಾಯಿತು.

ಸರ್ ಜಡೇಜ ಕೈಯಿಂದ ಮಾತ್ರ ಸಾಧ್ಯ

ಕೂಲ್ ಕ್ಯಾಪ್ಟನ್ ಗೆ ಸಿಟ್ಟು ತರಿಸಲು ಸರ್ ಜಡೇಜ ಕೈಯಿಂದ ಮಾತ್ರ ಸಾಧ್ಯ

ಅಪರೂಪದ ಚಿತ್ರ ನೋಡಿದೆವು

ಧೋನಿ ಕೋಪಗೊಂಡ ಅಪರೂಪದ ದೃಶ್ಯ ನೋಡಿದೆವು

ಗಂಭೀರ್ ನಗುವುದು ಯಾವಾಗ?

ಧೋನಿ ಕೂಡಾ ಸಿಟ್ಟು ಮಾಡಿಕೊಂಡಿದ್ದಾಯಿತು. ಗಂಭೀರ್ ಮುಖಗಂಟಿಕ್ಕಿಕೊಳ್ಳುವುದನ್ನು ಬಿಟ್ಟು ನಗುವುದು ಯಾವಾಗ?

ಜಡೇಜ 4 ವಿಕೆಟ್ ಸಾಧನೆ ಗಮನಿಸಿ

ಫೀಲ್ಡಿಂಗ್ ಮಿಸ್ಟೇಕ್ ಆಗುತ್ತೆ. ಅದರೆ, ಜಡೇಜ 4 ವಿಕೆಟ್ ಸಾಧನೆ ಗಮನಿಸಿ

ಧೋನಿ ಕೋಪದಿಂದ ಯಾರಿಗೆ ಲಾಭ?

ಧೋನಿ ಕೋಪದಿಂದ ಯಾರಿಗೆ ಲಾಭ? ಬಹುಶಃ ಜಡೇಜ ಮುಂದಿನ ವಿಶ್ವಕಪ್ ಆಡಲಿದ್ದಾರೆ.

ಸಿಕ್ಸ್ ಹೊಡೆಸಿಕೊಂಡಾಗ ಸುಮ್ಮನ್ನಿದ್ದ ಧೋನಿ

ಬ್ರಾವೋ ಸಿಕ್ಸ್ ಹೊಡೆಸಿಕೊಂಡಾಗ ಸುಮ್ಮನ್ನಿದ್ದ ಧೋನಿ, 2 ರನ್ ಬಿಟ್ಟಿದ್ದಕ್ಕೆ ಜಡೇಜ ಮೇಲೆ ಸಿಟ್ಟಾಗುವುದೇ?

ಕಳೆದ ವರ್ಷ ರಾಹುಲ್ ದ್ರಾವಿಡ್ ಈಗ ಧೋನಿ

ಕಳೆದ ವರ್ಷ ರಾಹುಲ್ ದ್ರಾವಿಡ್ ಸಿಟ್ಟಾಗಿದ್ದರು ಈಗ ಧೋನಿ ಸರದಿ.

Story first published: Monday, February 19, 2018, 17:04 [IST]
Other articles published on Feb 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X