ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ಹುಡ್ಗರಿಗೆ ಚಳಿ ಬಿಡಿಸಿದ ಸನ್ ರೈಸರ್ಸ್

By Mahesh

ಬೆಂಗಳೂರು, ಏ.14 : ಚಿನ್ನಸ್ವಾಮಿ ಕ್ರೀಡಾಂಗಣದ ರೂಫ್ ಟಾಪ್ ಸೌರಶಕ್ತಿ ಫಲಕಗಳು ಹೊಳೆಯುವಂತೆ ಹೈದರಾಬಾದಿನ 'ಸನ್ ರೈಸರ್ಸ್' ಸರಿಯಾದ ಸಮಯಕ್ಕೆ ಮಿಂಚಿ ಆರ್ ಸಿಬಿ ಹುಡುಗರಿಗೆ ಚಳಿ ಬಿಡಿಸಿದರು. ಕರ್ನಾಟಕದ ಕಲಿ ಕೆಎಲ್ ರಾಹುಲ್ ಸಿಕ್ಸ್ ಎತ್ತಿ ಹೈದರಾಬಾದಿಗೆ ಜಯ ತಂದ ಸಂದರ್ಭದಲ್ಲಿ ಅಭಿಮಾನಿಗಳ ಸಿಟ್ಟು ಮಲ್ಯ ಕಡೆಗೆ ತಿರುಗಿದ್ದು ಸುಳ್ಳಲ್ಲ.

ಗೇಲ್ ಅಬ್ಬರದಿಂದ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಕೊಹ್ಲಿ ಪಡೆಯ ಬೌಲಿಂಗ್ ಹುಳುಕನ್ನು ಡೇವಿಡ್ ವಾರ್ನರ್ ಪಡೆ ಬಿಚ್ಚಿಟ್ಟಿತು. ಆರ್ ಸಿಬಿ ತಿಣುಕಾಡಿಕೊಂಡು ಗಳಿಸಿದ್ದ 166ರನ್ ಮೊತ್ತವನ್ನು ಹೈದರಾಬಾದ್ ತಂಡ ಸುಲಭವಾಗಿ ಚೇಸ್ ಮಾಡಿ ವಿಜಯೋತ್ಸವ ಆಚರಿಸಿತು.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಸನ್ ರೈಸರ್ಸ್ ಪರ ಆರಂಭಿಕ ಆಟಗಾರರಾದ ಡೇವಿಡ್‌ ವಾರ್ನರ್‌ ಮತ್ತು ಶಿಖರ್‌ ಧವನ್‌ ಅವರ ಆಕರ್ಷಕ ಅರ್ಧಶತಕ ಹಾಗೂ ಕೆಎಲ್ ರಾಹುಲ್ ಅವರ ಆಕರ್ಷಕ 44ರನ್ ನೆರವಿನಿಂದ 17.2 ಓವರ್ಸ್ ಗಳಲ್ಲಿ 172/2 ಸ್ಕೋರ್ ಗಳಿಸಿ ಜಯ ಸಾಧಿಸಿತು.

ಬಾಲಿವುಡ್ ನಟಿ ಅನುಷ್ಕಾ ಶರ್ಮ ಉಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮಿಂಚಿದ್ದು ಆರ್ ಸಿಬಿಗೆ ಶುಭ ಸೂಚನೆ. ಪಂದ್ಯದ ಕೆಲ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ನೋಡಿ....

ಲಯಕ್ಕೆ ಮರಳಿದ ನಾಯಕ ವಿರಾಟ್ ಕೊಹ್ಲಿ

ಲಯಕ್ಕೆ ಮರಳಿದ ನಾಯಕ ವಿರಾಟ್ ಕೊಹ್ಲಿ

ಗೇಲ್ ವೈಫಲ್ಯದ ನಂತರ ನಾಯಕ ವಿರಾಟ್ ಕೊಹ್ಲಿ ಮತ್ತೆ ಲಯಕ್ಕೆ ಮರಳಿದ್ದು ಅಭಿಮಾನಿಗಳಿಗೆ ಫುಲ್ ಖುಷಿ ತಂದಿದೆ. 41ರನ್(37 ಎಸೆತ, 4‍‌‍X4, 2‍‍‍‍‍X6)

 ಎಬಿ ಡಿವಿಲಿಯರ್ಸ್ ಬಿರುಸಿನ 46 ರನ್

ಎಬಿ ಡಿವಿಲಿಯರ್ಸ್ ಬಿರುಸಿನ 46 ರನ್

ಎಬಿ ಡಿವಿಲಿಯರ್ಸ್ ಬಿರುಸಿನ 46 ರನ್(28 ಎಸೆತ, 5X4, 2X6) ಗಳಿಸಿದರೂ ತಂಡದ ಮೊತ್ತ ಇನ್ನಷ್ಟು ಹೆಚ್ಚಿಸಲು ಸಾಧ್ಯವಾಗಲಿಲ್ಲ

ಡೇವಿಡ್ ವಾರ್ನರ್ ಅದ್ಭುತ ಕ್ಯಾಚ್

ಡೇವಿಡ್ ವಾರ್ನರ್ ಅದ್ಭುತ ಕ್ಯಾಚ್

ಡೇವಿಡ್ ವಾರ್ನರ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ತಂಡದ ಫೀಲ್ಡಿಂಗ್ ಬಲ ಹೆಚ್ಚಿಸಿದರು.

ಎಲ್ಲರ ಕಣ್ಣು ಅನುಷ್ಕಾ ಮೇಲಿತ್ತು

ಎಲ್ಲರ ಕಣ್ಣು ಅನುಷ್ಕಾ ಮೇಲಿತ್ತು

ಎಲ್ಲರ ಕಣ್ಣು ಅನುಷ್ಕಾ ಮೇಲಿತ್ತು.. ಅದಕ್ಕೆ ತಕ್ಕಂತೆ ಕೊಹ್ಲಿ ಕೂಡಾ ಉತ್ತಮ ಆಟ ಪ್ರದರ್ಶಿಸಿದರು. ಅದರೆ, ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ.

ಆರ್ ಸಿಬಿ ಹುಡುಗರು ಕ್ಲೀನ್ ಬೋಲ್ಡ್

ಆರ್ ಸಿಬಿ ಹುಡುಗರು ಕ್ಲೀನ್ ಬೋಲ್ಡ್

ಆರ್ ಸಿಬಿ ಹುಡುಗರು ಒಬ್ಬರ ನಂತರ ಮತ್ತೊಬ್ಬರು ಕ್ಲೀನ್ ಬೋಲ್ಡ್ ಆಗುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ವಿಫಲರಾದರು.

ವಾರ್ನರ್-ಧವನ್ ಪವರ್ ಫುಲ್ ಆಟ

ವಾರ್ನರ್-ಧವನ್ ಪವರ್ ಫುಲ್ ಆಟ

166 ರನ್ ಟಾರ್ಗೆಟ್ ಬೆನ್ನಟ್ಟಿದ ಸನ್​ರೈಸರ್ಸ್ ತಂಡ ಆರಂಭದಿಂದಲೇ ಹೊಡಿ ಬಡಿ ತಂತ್ರ ಪ್ರಯೋಗಿಸಿ ಯಶಸ್ವಿಯಾಯಿತು. ಪವರ್ ಪ್ಲೇನಲ್ಲಿ ಧವನ್ ಹಾಗೂ ವಾರ್ನರ್ ಪವರ್ ಫುಲ್ ಆಟವಾಡಿದರು.

ಉತ್ತಮ ಆರಂಭ, ಜೊತೆಯಾಟ

ಉತ್ತಮ ಆರಂಭ, ಜೊತೆಯಾಟ

ವಾರ್ನರ್‌ ಮತ್ತು ಧವನ್‌ ಮೊದಲ ವಿಕೆಟಿಗೆ ಕೇವಲ 7.5 ಓವರ್‌ಗಳಲ್ಲಿ 82 ರನ್‌ ಪೇರಿಸಿದರು. ವಾರ್ನರ್ ಹಾಗೂ ಧವನ್ ಇಬ್ಬರು ಅರ್ಧಶತಕ ಗಳಿಸಿದರು.

ಧವನ್ ಹಾಗೂ ರಾಹುಲ್ ಜೋಡಿ ಮೋಡಿ

ಧವನ್ ಹಾಗೂ ರಾಹುಲ್ ಜೋಡಿ ಮೋಡಿ

ಧವನ್‌ 42 ಎಸೆತ ಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದ 50 ರನ್‌ ಗಳಿಸಿದರು. ಕೆಎಲ್ ರಾಹುಲ್‌ 28 ಎಸೆತಗಳಿಂದ 4 ಬೌಂಡರಿ ಮತ್ತು 1 ಸಿಕ್ಸರ್‌ ಇದ್ದ 44 ರನ್‌ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದಿತ್ತರು.

ಚಾಹಲ್ ಗೆ ವಿಕೆಟ್ ಒಪ್ಪಿಸಿದ ವಾರ್ನರ್

ಚಾಹಲ್ ಗೆ ವಿಕೆಟ್ ಒಪ್ಪಿಸಿದ ವಾರ್ನರ್

ಯಜುವೇಂದ್ರ ಚಾಹಲ್ ಎಸೆತದಲ್ಲಿ ಎಲ್​ಬಿಡಬ್ಲ್ಯು ಆಗಿ ಔಟಾದ ವಾರ್ನರ್

ಅರ್ಧಶತಕದ ಸಂಭ್ರಮದಲ್ಲಿ ಧವನ್

ಅರ್ಧಶತಕದ ಸಂಭ್ರಮದಲ್ಲಿ ಧವನ್

ಅರ್ಧಶತಕದ ಸಂಭ್ರಮದಲ್ಲಿ ಧವನ್ ತಮ್ಮ ತಂಡ ಹಾಗೂ ಅಭಿಮಾನಿಗಳತ್ತ ಮುತ್ತು ಎಸೆದಿದ್ದು ಹೀಗೆ

ಸನ್ ರೈಸರ್ಸ್ ಜಯ ದಾಖಲು

ಸನ್ ರೈಸರ್ಸ್ ಜಯ ದಾಖಲು

166ರನ್ ಗುರಿ ಬೆನ್ನತ್ತಿದ ಸನ್ ರೈಸರ್ಸ್ ತಂಡ 17.2 ಓವರ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 172 ಸ್ಕೋರ್ ಮಾಡಿ ಐಪಿಎಲ್ ಮೊದಲ ಜಯ ದಾಖಲಿಸಿತು. ಕೊಹ್ಲಿ ಮುಖದಲ್ಲಿ ಸೋಲು. ಧವನ್ ಹಾಗೂ ರಾಹುಲ್ ಮುಖದಲ್ಲಿ ಗೆಲುವಿನ ನಗೆ ಕಾಣಬಹುದು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X