ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯ ನುಂಗಿದ ಮಳೆ, ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ

By Mahesh

ಬೆಂಗಳೂರು, ಮೇ.17: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಕೊನೆ ಲೀಗ್ ಪಂದ್ಯವನ್ನು ಮಳೆ ನುಂಗಿ ಹಾಕಿದೆ. ಡೆಲ್ಲಿ ತಂಡ ನೀಡಿದ್ದ 188 ರನ್ ಗುರಿ ಬೆನ್ನು ಹತ್ತಿದ ಆರ್ ಸಿಬಿ 1.1 ಓವರ್ ಆಡುವಷ್ಟರಲ್ಲಿ ಧೋ ಎಂದು ಸುರಿಯತೊಡಗಿದ ಮಳೆ ಪಂದ್ಯವನ್ನು ರದ್ದುಮಾಡಿತು.

ಐಪಿಎಲ್ 8ರ 55ನೇ ಪಂದ್ಯದಲ್ಲಿ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 187ರನ್ ಕಲೆಹಾಕಿತ್ತು. ಆರ್ ಸಿಬಿ 1.1 ಓವರ್ ಗಳಲ್ಲಿ 2/0. ಈ ಪಂದ್ಯದ ನಂತರ 16 ಅಂಕಗಳೊಂದಿಗೆ ಆರ್ ಸಿಬಿ ಸದ್ಯಕ್ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಐಪಿಎಲ್ ವಿಶೇಷ ಪುಟ | | ಅಂಕಪಟ್ಟಿ

ಆದರೆ, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಕಟ್ಟಕಡೆಯ ಲೀಗ್ ಪಂದ್ಯದ ಫಲಿತಾಂಶದ ನಂತರ ಆರ್ ಸಿಬಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಈ ಪಂದ್ಯದ ವಿಜೇತ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಪ್ಲೇ ಆಫ್ ಗೆ ಅರ್ಹತೆ ಪಡೆದು, ಚೆನ್ನೈ, ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಜೊತೆ ಮುಂದಿನ ಹಂತಕ್ಕೇರಲಿದೆ.

RCB enter IPL 2015 playoffs after washout in Bengaluru


ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ್ದರೆ 17 ಅಂಕಗಳೊಂದಿಗೆ ಆರ್ ಸಿಬಿ ಎರಡನೇ ಸ್ಥಾನಕ್ಕೇರಬಹುದಿತ್ತು. ಮೇ.19ರಂದು ಟಾಪ್ 1 ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕ್ವಾಲಿಫೈಯರ್1ರಲ್ಲಿ ಎದುರಿಸಬಹುದಾಗಿತ್ತು. [ ಆರ್ ಸಿಬಿ vs ಡಿಡಿ ಪಂದ್ಯ ಗೈಡ್ ಇಲ್ಲಿದೆ]


ಡಿಡಿ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ತಂಡ ಉತ್ತಮ ಆರಂಭ ಪಡೆಯಿತು. ಶ್ರೇಯಸ್ ಐಯರ್ 20 ರನ್ ಗಳಿಸಿ ಔಟಾದರೆ, ಇನ್ನೊಂದೆಡೆ ಕ್ವಾಂಟನ್ ಡಿ ಕಾಕ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಡಿ ಕಾಕ್ 39 ಎಸೆತಗಳಲ್ಲಿ 69 ರನ್ (9x4, 3x6) ಗಳಿಸಿದರೆ ನಾಯಕ ಜೆಪಿ ಡುಮಿನಿ 67ರನ್ (43ಎಸೆತ, 4x4,3x6) ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ಸ್ಕೋರ್ ಮಾಡಿತು. ಅರ್ ಸಿಬಿ ಪರ ಹರ್ಷಲ್ ಪಟೇಲ್ ಹಾಗೂ ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ಡೆಲ್ಲಿ ಡೇರ್ ಡೆವಿಲ್ಸ್: ಜೆಪಿ ಡುಮಿನಿ (ನಾಯಕ), ಮಹಮ್ಮದ್ ಶಮಿ, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಮನೋಜ್ ತಿವಾರಿ, ಕೇದಾರ್ ಜಾಧವ್, ಮಾಯಂಕ್ ಅಗರವಾಲ್, ಶಹಬಾಜ್ ನದೀಂ, ಸೌರಭ್ ತಿವಾರಿ, ಜಯಂತ್ ಯಾದವ್, ಇಮ್ರಾನ್ ತಾಹೀರ್, ನಾಥನ್ ಕೌಲ್ಟರ್ ನೈಲ್, ಏಂಜಲೋ ಮ್ಯಾಥ್ಯೂಸ್, ಯುವರಾಜ್ ಸಿಂಗ್, ಅಮಿತ್ ಮಿಶ್ರಾ, ಜಯದೇವ್ ಉನದ್ಕಟ್, ಜಿ ಸಂಧು, ಶ್ರೇಯಸ್ ಐಯರ್, ಸಿಎಂ ಗೌತಮ್, ಟ್ರಾವಿಸ್ ಹೆಡ್, ಶ್ರೀಕರ್ ಭರತ್, ಅಲ್ಬೊ ಮಾರ್ಕೆಲ್, ನಾರ್ಜ ಸ್ಟೋನಿಸ್, ಜಹೀರ್ ಖಾನ್, ಕೆಕೆ ಜಿಯಾಸ್, ಡೊಮಿನಿಕ್ ಜೋಸೆಪ್ಜ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X