ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಮುಂದೆ ಮತ್ತೆ ಮಂಡಿಯೂರಿದ ಕೊಹ್ಲಿ

By Mahesh

ಚೆನ್ನೈ, ಮೇ.5: ಈಗಾಗಲೇ ಫ್ಯಾನ್ಸ್ ಗಳಿಗೆ ವಿಷಯ ಗೊತ್ತಾಗಿದೆ. ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಸಿದರೆ ಅದೊಂದು ಪವಾಡ ಎಂದು ಆಡಿಕೊಂಡು ನಗುವವರ ಮುಂದೆ ಮತ್ತೊಮ್ಮೆ ಮುಗ್ಗರಿಸಿದೆ.

ಸೋಮವಾರ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2015ರ ಪಂದ್ಯದಲ್ಲೂ ಆರ್ ಸಿಬಿ 24ರನ್ ಗಳಿಂದ ಚೆನ್ನೈ ವಿರುದ್ಧ ಸೋಲು ಕಂಡಿದೆ. ಗೆಲ್ಲುವ ಪಂದ್ಯವನ್ನು ಕೈಚೆಲ್ಲುವುದು ಹೇಗೆ ಎಂಬುದನ್ನು ಆರ್ ಸಿಬಿ ನೋಡಿ ಕಲಿಯಬೇಕು ಎಂದು ಗೇಲಿ ಮಾಡುವುದು ನಡೆದೇ ಇದೆ.

| ಐಪಿಎಲ್ ವಿಶೇಷ ಪುಟ| ಅಂಕ ಪಟ್ಟಿ

20 ಓವರ್ಸ್ ಗಳಲ್ಲಿ 148 ಸ್ಕೋರಿಗೆ ಚೆನ್ನೈ ತಂಡವನ್ನು ನಿಯಂತ್ರಿಸಿದ ಆರ್ ಸಿಬಿ ತಂಡ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡು ಆರ್‌ಸಿಬಿ 19.4 ಓವರ್‌ಗಳಲ್ಲಿ 124 ರನ್‌ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿದೆ. ಸತತ ಗೆಲುವಿನಿಂದ ಬೀಗುತ್ತಿದ್ದ ಆರ್ ಸಿಬಿಗೆ ಧೋನಿ ತಂಡ ಸರಿಯಾದ ಪಾಠ ಕಲಿಸಿದೆ. ಪಂದ್ಯದ ಚಿತ್ರಗಳು ಇಲ್ಲಿವೆ...

ಪಂದ್ಯದ ಮುಖ್ಯಾಂಶಗಳು

ಪಂದ್ಯದ ಮುಖ್ಯಾಂಶಗಳು

ಕ್ರಿಸ್‌ ಗೇಲ್‌ ಅನುಪಸ್ಥಿತಿ, ವಿರಾಟ್ ಕೊಹ್ಲಿ ಹೋರಾಟ, ಮತ್ತೆ ಮಿಂಚಿದ ಆಶೀಶ್ ನೆಹ್ರಾ, ರೈನಾ ಅರ್ಧ ಶತಕ, ಸ್ಟಾರ್ಕ್ ಎಸೆತ ಎಲ್ಲವೂ ಪಂದ್ಯದ ಮುಖ್ಯಾಂಶವಾಗಿತ್ತು. ಆರ್ ಸಿಬಿ ವಿರುದ್ಧ ಗೆಲ್ಲಲು ಧೋನಿ ಹೆಚ್ಚಿನ ತಂತ್ರ ಮಾಡುವ ಗೋಜಿಗೆ ಹೋಗಲಿಲ್ಲ. ಕೊಹ್ಲಿ ಬಿಟ್ಟರೆ ಉಳಿದವರಿಗೆ ಮೈದಾನಕ್ಕಿಂತ ಪೆವಿಲಿಯನ್ ಹತ್ತಿರವಾಗಿತ್ತು.

ಆರ್ ಸಿಬಿ ರನ್ ಚೇಸ್ ಚೆನ್ನಾಗಿತ್ತು ಆದರೆ....

ಆರ್ ಸಿಬಿ ರನ್ ಚೇಸ್ ಚೆನ್ನಾಗಿತ್ತು ಆದರೆ....

ಗೇಲ್ ಅನುಪಸ್ಥಿತಿಯಲ್ಲಿ ಬಂದ ಮ್ಯಾಡಿಸನ್ 4 ರನ್ ಗಳಿಸಿದರೆ ಕೊಹ್ಲಿ ಇನ್ನಿಂಗ್ಸ್ ಕಟ್ಟಿ ಉತ್ತಮ ಆಟ ಪ್ರದರ್ಶಿಸಿದರು. 44 ಎಸೆತಗಳಲ್ಲಿ 48ರನ್ (2 ಬೌಂಡರಿ, 1 ಸಿಕ್ಸರ್), ಎಬಿ ಡಿ ವಿಲೆಯರ್ಸ್ 14 ಎಸೆತಗಳಲ್ಲಿ 21ರನ್, ದಿನೇಶ್ ಕಾರ್ತಿಕ್ 23ರನ್, ವೀಸೆ 17ರನ್ ಗಳಿಸಿ ಚೇಸಿಂಗ್ ಜಾರಿಯಲ್ಲಿಟ್ಟಿದ್ದರು. ಅದರೆ, ನಿಗದಿತವಾಗಿ ವಿಕೆಟ್ ಕಳೆದುಕೊಂಡು ಸೊಲೊಪ್ಪಿಕೊಂಡಿತು.

ಕುಸಿದ ಮಧ್ಯಮ ಕ್ರಮಾಂಕ

ಕುಸಿದ ಮಧ್ಯಮ ಕ್ರಮಾಂಕ

ಚೆನ್ನೈ ನೀಡಿದ್ದ ಗುರಿ ಸುಲಭವಾಗಿ ಚೇಸ್ ಮಾಡಬಹುದಾದರೂ ಉತ್ತಮ ಜೊತೆಯಾಟದ ಕೊರತೆ, ಮಧ್ಯಮ ಕ್ರಮಾಂಕದ ಕುಸಿತ ಪಂದ್ಯದ ಸೋಲಿಗೆ ಕಾರಣವಾಯಿತು. ಮನದೀಪ್ 0, ಸರ್ಫರಾಜ್ 7 ಗಳಿಸಿದರೆ ಹರ್ಷಲ್ ಪಟೇಲ್ 0 ಸುತ್ತಿದರು.

ಮತ್ತೆ ಕಾಡಿದ ಆಶೀಶ್ ನೆಹ್ರಾ

ಮತ್ತೆ ಕಾಡಿದ ಆಶೀಶ್ ನೆಹ್ರಾ

ಆರ್ ಸಿಬಿ ಗೆಲುವಿಗೆ ಮುಳುವಾದ ಆಶೀಶ್ ನೆಹ್ರಾ (19 ಕ್ಕೆ 3) ಹಾಗೂ ವೇಗಿ ಈಶ್ವರ್‌ ಪಾಂಡೆ ಮತ್ತು ಡ್ವೇನ್‌ ಬ್ರಾವೊ ತಲಾ 2 ವಿಕೆಟ್‌ ಪಡೆದು ಆರ್ ಸಿಬಿ ಆಸೆಗೆ ತಣ್ಣೀರೆರಚಿದರು.

ರೈನಾ ಭರ್ಜರಿ ಬ್ಯಾಟಿಂಗ್

ರೈನಾ ಭರ್ಜರಿ ಬ್ಯಾಟಿಂಗ್

ಸ್ಮಿತ್ ಶೂನ್ಯ ಸುತ್ತಿದರೆ ಬ್ರೆಂಡನ್‌ ಮೆಕಲಮ್‌ 20 ರನ್‌(15ಎ, 4x4) ಹಾಗೂ ಸುರೇಶ್‌ ರೈನಾ 52 ರನ್‌ (46e, 5x4,1x6) ಆಕರ್ಷಕ ಅರ್ಧಶತಕ ನೆರವಿನಿಂದ ಚೆನ್ನೈ ಉತ್ತಮ ಮೊತ್ತ ಕಲೆ ಹಾಕಿತು.

ಚೆನ್ನೈ ಕೈ ಹಿಡಿದ ಟಾಪ್ ಬ್ಯಾಟ್ಸ್ ಮನ್

ಚೆನ್ನೈ ಕೈ ಹಿಡಿದ ಟಾಪ್ ಬ್ಯಾಟ್ಸ್ ಮನ್

ಮಧ್ಯಮ ಕ್ರಮಾಂಕದಲ್ಲೂ ಉತ್ತಮ ಕೊಡುಗೆ ಸಿಕ್ಕಿದ್ದರಿಂದ ನಿಗದಿತವಾಗಿ ಚೆನ್ನೈ ವಿಕೆಟ್ ಕಳೆದುಕೊಂಡರೂ 20 ಓವರ್ಸ್ ಗಳಲ್ಲಿ 148ರನ್ ಗಳಿಸಿತು. ನೇಗಿ 13, ಧೋನಿ 29, ಡುಫ್ಲೆಸಿಸ್ 24ರನ್ ಗಳಿಸಿದರು. ಜಡೇಜ 3 ರನ್ ಗಳಿಸಿ ವಿಫಲರಾದರು.

ಮತ್ತೆ ಮಿಂಚಿದ ಮಿಚೆಲ್ ಸ್ಟಾರ್ಕ್

ಮತ್ತೆ ಮಿಂಚಿದ ಮಿಚೆಲ್ ಸ್ಟಾರ್ಕ್

24ರನ್ನಿತ್ತು 3 ವಿಕೆಟ್ ಕಿತ್ತ ಮಿಚೆಲ್ ಸ್ಟಾಕ್ ಮತ್ತೆ ಮಿಂಚಿದರು. ವರುಣ್ ಅರೋನ್ ಬದಲಿಗೆ ಬಂದಿದ್ದ ಇಕ್ಬಾಲ್ ಅಬ್ದುಲ್ಲಾ 3 ಓವರ್ ಗಳಲ್ಲಿ 34 ರನ್ ನೀಡಿ ದುಬಾರಿ ಎನಿಸಿದರು. ಹರ್ಷಲ್ ಪಟೇಲ್ 4-0-19-2 ಹಾಗೂ ಡೇವಿಡ್ ವೀಸೆ 29ಕ್ಕೆ 2 ಉತ್ತಮ ಪ್ರದರ್ಶನ ನೀಡಿದರು.

ಮತ್ತೊಮ್ಮೆ ಗೇಲ್ ಕೂರಿಸಿದ ತಪ್ಪು ಮಾಡಿದರೆ

ಮತ್ತೊಮ್ಮೆ ಗೇಲ್ ಕೂರಿಸಿದ ತಪ್ಪು ಮಾಡಿದರೆ

ಕ್ರಿಸ್ ಗೇಲ್ ಬದಲಿಗೆ ಆಡಿದ ಆಸ್ಟ್ರೇಲಿಯಾದ ಮ್ಯಾಡಿಸನ್ ಕೂಡಾ ಬಿರುಸಿನ ಹೊಡೆತಗಳಿಗೆ ಹೆಸರುವಾಸಿ. ಅದರೆ, ಮ್ಯಾಡಿಸನ್ ಆಟ ನಡೆಯಲಿಲ್ಲ. ವರುಣ್ ಬದಲಿಗೆ ಬಂದ ಅಬ್ದುಲ್ಲಾ ಅಥವಾ ಚಾಹಲ್ ಸ್ಪಿನ್ ಮೋಡಿ ಮಾಡಲಿಲ್ಲ. ಟೀಂ ಆಯ್ಕೆಯಲ್ಲೇ ಆರ್ ಸಿಬಿ ಸೋಲು ಕಾಣುತ್ತಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X