ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿಗೆ ಕಿಕ್ ನೀಡಲು ಬಂದ ವಿಶ್ವಕಪ್ ಹೀರೋ

By Mahesh

ಬೆಂಗಳೂರು, ಏ.21: ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಬಗ್ಗೆ ಎಲ್ಲರೂ ಎರಡಲ್ಲ ನಾಲ್ಕು ಮಾತನಾಡುತ್ತಾರೆ. ವೇಗಿಗಳಿಲ್ಲ, ಸ್ಪಿನ್ನರ್ ಗಳಿಲ್ಲ ಡಬ್ಬಾ ಬೌಲಿಂಗ್ ಪಡೆ ಇದು ಆರ್ ಸಿಬಿ ಹಣೆ ಬರಹ. ಮಲ್ಯ ಆಯ್ಕೆಯೇ ಹಾಗೆ. ಆದರೆ, ಈಗ ಆರ್ ಸಿಬಿ ತಂಡಕ್ಕೆ ವಿಶ್ವಕಪ್ ಹೀರೋ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಸೇರಿಕೊಂಡಿದ್ದಾರೆ.

ಐಪಿಎಲ್ 2015ರ ಮೊದಲ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಸಾಧನೆ ಅಷ್ಟರಲ್ಲೇ ಇದೆ. ಬ್ಯಾಟಿಂಗ್ ಶಕ್ತಿಯೇ ಮೇಲುಗೈ ಸಾಧಿಸಿದೆ. ಎಡ ಮೊಣಕಾಲು ಗಾಯದಿಂದ ಬಳಲುತ್ತಿದ ಸ್ಟಾರ್ಕ್ ಈಗ ಸಂಪೂರ್ಣ ಗುಣಮುಖರಾಗಿ ಬೆಂಗಳೂರಿಗೆ ಬಂದಿದ್ದಾರೆ. Hello Bangalore! ಎಂದು ಟ್ವೀಟ್ ಮಾಡಿ ಗಾರ್ಡನ್ ಸಿಟಿಗೆ ಕಾಲಿಟ್ಟ ಸ್ಟಾರ್ಕ್ ಗೆ ವಿಶಿಷ್ಟ ಸ್ವಾಗತ ಕೂಡಾ ಸಿಕ್ಕಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

25 ವರ್ಷ ವಯಸ್ಸಿನ ಸ್ಟಾರ್ಕ್ ಅವರು ವಿಶ್ವಕಪ್ 2015ರಲ್ಲಿ 22 ವಿಕೆಟ್ ಕಿತ್ತು ಆಸ್ಟ್ರೇಲಿಯಾ ಕಪ್ ಎತ್ತುವಲ್ಲಿ ತಮ್ಮ ಕೊಡುಗೆ ನೀಡಿದ್ದರು. ಐಸಿಸಿ ವಿಶ್ವಕಪ್ 2015ರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಮಿಚೆಲ್ ಸ್ಟಾರ್ಕ್ ಸೇರ್ಪಡೆಯಿಂದ ಮಲ್ಯ ಪಡೆ ಬಲ ಹೆಚ್ಚುವುದರಲ್ಲಿ ಸಂಶಯವಿಲ್ಲ. (ಐಪಿಎಲ್ ಕ್ರಿಕೆಟ್ ಹಬ್ಬದ ಚಿತ್ರಗಳು)

'Hello Bangalore', says Mitchell Starc after joining RCB


ಸ್ಟಾರ್ಕ್ ಗೆ ಸಾಥ್ ನೀಡಲು ನ್ಯೂಜಿಲೆಂಡ್ ನ ಯುವ ವೇಗಿ ಆಡಂ ಮಿಲ್ನೆ, ಆಸ್ಟ್ರೇಲಿಯಾದ ಸೀನ್ ಅಬಾಟ್ (ಫಿಲ್ ಹ್ಯೂಸ್ ಗೆ ಬೌನ್ಸರ್ ಹಾಕಿದ ಖ್ಯಾತಿಯ) ಹಾಗೂ ಭಾರತದ ವೇಗಿ ವರುಣ್ ಅರೋನ್ ಇದ್ದಾರೆ. [ಆರ್ ಸಿಬಿಗೆ ಬೆಸ್ಟ್ ಬೌಲಿಂಗ್ ಕೋಚ್ ಪಡೆದ ಮಲ್ಯ]

ಆರ್ ಸಿಬಿ ಉತ್ತಮ ಕೋಚ್ ಹೊಂದಿದೆ. ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ವಿಶ್ವಕಪ್ 2015ರಲ್ಲಿ ಕಾರ್ಯ ನಿರ್ವಹಿಸಿದ ಭರತ್ ಅರುಣ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.



ಡೇನಿಯಲ್ ವೆಟ್ಟೋರಿ ಅವರು ಮುಖ್ಯ ಕೋಚ್ ಆಗಿದ್ದರೆ, ಟ್ರೆಂಟ್ ವುಡ್ ಹಿಲ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಭರತ್ ಅರುಣ್ ಅವರ ತರಬೇತಿ ಪಡೆದ ಅಂಡರ್ 19 ಭಾರತ ತಂಡ 2012ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಇಲ್ಲಿ ಮರೆಯುವಂತಿಲ್ಲ.

ಈಗ ಬದ್ಧವೈರಿಗಳೆನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ(ಏ.22) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಡಲಿದೆ. ಆರ್ ಸಿಬಿ ಬೌಲಿಂಗ್ ಬಲಗೊಂಡರೆ ಯಾವ ತಂಡವನ್ನು ಬೇಕಾದರೂ ಮಣಿಸುವ ಹುಮ್ಮಸಿನಲ್ಲಿದೆ.


(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X