ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2015: ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ?

By Mahesh

ಕೋಲ್ಕತ್ತಾ, ಮೇ.25: ಎರಡು ಬಾರಿ ಐಪಿಎಲ್ ಕಿರೀಟ ಧರಿಸಿದ್ದ ಚೆನ್ನೈ ತಂಡ ಐಪಿಎಲ್ 2015ರಲ್ಲಿ ರನ್ನರ್ ಅಪ್ ಆಗಿ 10ಕೋಟಿ ನಗದು ಪಡೆದು ಸಮಾಧಾನಪಟ್ಟುಕೊಂಡಿದೆ. ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಎರಡನೇ ಬಾರಿ ಫೈನಲ್ ನಲ್ಲಿ ಗೆಲುವು ಸಾಧಿಸಿ ಕಪ್ ಗೆದ್ದು 15 ಕೋಟಿ ರು ಬಾಚಿದೆ. ಯಾರು ಯಾರಿಗೆ ಯಾವ ಪ್ರಶಸ್ತಿ ಬಂದಿದೆ. ಸಮಗ್ರ ಪಟ್ಟಿ ಇಲ್ಲಿದೆ

ಐಪಿಎಲ್ ವಿಶೇಷ ಪುಟ| | ಪಂದ್ಯದ ವರದಿ |

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಧೋನಿ ನೇತೃತ್ವದ ಪಡೆಯನ್ನು 41 ರನ್ ಗಳ ಅಂತರದಿಂದ ರೋಹಿತ್ ಶರ್ಮ ಅವರ ಪಡೆ ಸೋಲಿಸಿದೆ. ಮುಂಬೈ 20ಓವರ್ಸ್ ನಲ್ಲಿ 202/5 ಸ್ಕೋರ್ ಮಾಡಿದರೆ, ಸಿ ಎಸ್ ಕೆ 161/8 ಗಳಿಸಿ ಸೋಲೊಪ್ಪಿಕೊಂಡಿತು. [ಐಪಿಎಲ್ ಏಳು ಫೈನಲ್ಸ್ ಮೆಲುಕು]

ಮತ್ತೊಮ್ಮೆ ಆರೇಂಜ್ ಕ್ಯಾಪ್ ಗಳಿಸಿದ ಆಟಗಾರ ಇರುವ ತಂಡ ಕಪ್ ಗೆಲ್ಲಲ್ಲ ಎಂಬ ಮಾತು ನಿಜವಾಯಿತು. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರಿಗೆ ಆರೇಂಜ್ ಕಪ್ ಸಿಕ್ಕಿದೆ. ಅತಿ ಹೆಚ್ಚು ವಿಕೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನ ಡ್ವಾಯ್ನೆ ಬ್ರಾವೋಗೆ ಪರ್ಪಲ್ ಕ್ಯಾಪ್ ಸಿಕ್ಕಿದೆ.[ಲಕ್ಕಿ ನಂಬರ್ ಚಾರ್ಮ್ : ಮುಂಬೈಗೆ ಕಪ್]

Full list of award winners

ಐಪಿಎಲ್ 2015 ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸ್ (38) ಸಿಡಿಸಿದ್ದಕ್ಕೆ ಕ್ರಿಸ್ ಗೇಲ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಮಿಕ್ಕಂತೆ ಯಾರಿಗೆ ಯಾವ ಪ್ರಶಸ್ತಿ ಲಭಿಸಿದೆ? ಪಟ್ಟಿ ಇಲ್ಲಿದೆ.

* ಚಾಂಪಿಯನ್ಸ್ : ಮುಂಬೈ ಇಂಡಿಯನ್ಸ್ ( 15 ಕೋಟಿ ರು ಬಹುಮಾನ ಮೊತ್ತ)
* ರನ್ನರ್ ಅಪ್ :ಚೆನ್ನೈ ಸೂಪರ್ ಕಿಂಗ್ಸ್ (1೦ ಕೋಟಿ ರು ಬಹುಮಾನ ಮೊತ್ತ)


ಆರೇಂಜ್ ಕ್ಯಾಪ್ ( ಅತಿ ಹೆಚ್ಚು ರನ್ ಗಳಿಕೆ)
* ಡೇವಿಡ್ ವಾರ್ನರ್ 14ಇನ್ನಿಂಗ್ಸ್ ನಲ್ಲಿ 562 ರನ್ (ಸನ್ ರೈಸರ್ಸ್ ಹೈದರಾಬಾದ್)


ಪರ್ಪಲ್ ಕ್ಯಾಪ್ ( ಅತಿ ಹೆಚ್ಚು ವಿಕೆಟ್ ಗಳಿಕೆ)
* ಡ್ವಾಯ್ನೆ ಬ್ರಾವೋ 16 ಇನ್ನಿಂಗ್ಸ್ ನಲ್ಲಿ 26 ವಿಕೆಟ್ (ಚೆನ್ನೈ ಸೂಪರ್ ಕಿಂಗ್ಸ್)


ಉದಯೋನ್ಮುಖ ಆಟಗಾರ
* ಶ್ರೇಯಸ್ ಐಯರ್, 14 ಇನ್ನಿಂಗ್ಸ್ ನಲ್ಲಿ 439 ರನ್ (ಡೆಲ್ಲಿ ಡೇರ್ ಡೆವಿಲ್ಸ್)


ಪಂದ್ಯ ಶ್ರೇಷ್ಠ ಅಂತಿಮ ಹಣಾಹಣಿ
* ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್)

ಅತಿ ಹೆಚ್ಚು ಸಿಕ್ಸರ್ ಗಳಿಕೆ (ಫೈನಲ್ )
* ಕೀರನ್ ಪೊಲ್ಲಾರ್ಡ್ -3

David Warner

* ಫ್ಲೇರ್ ಪ್ಲೇ ಪ್ರಶಸ್ತಿ: ಚೆನ್ನೈ ಸೂಪರ್ ಕಿಂಗ್ಸ್

* ಅತ್ಯುತ್ತಮ ಕ್ಯಾಚ್ : ಡ್ವಾಯ್ನೆ ಬ್ರಾವೋ ಚೆನ್ನೈ ಪರ ಆರ್ ಆರ್ ವಿರುದ್ಧ

* ಟೂರ್ನಿಯ ಶ್ರೇಷ್ಠ ಆಟಗಾರ: ಆಂಡ್ರೆ ರಸಲ್ (ಕೆಕೆಆರ್)


ಇತರೆ ಪ್ರಮುಖ ಅಂಶಗಳು:
ಒಟ್ಟು ಶತಕಗಳು
* 4 (ಎಬಿ ಡಿ ವಿಲೆಯರ್ಸ್, ಕ್ರಿಸ್ ಗೇಲ್, ಬ್ರೆಂಡನ್ ಮೆಕಲಂ, ಶೇನ್ ವಾಟ್ಸನ್)

* ಅತಿ ಹೆಚ್ಚು ವೈಯಕ್ತಿಕ ಸ್ಕೋರ್ : 133 ನಾಟೌಟ್ ಆರ್ ಸಿಬಿ ಪರ ಡಿ ವಿಲೆಯರ್ಸ್ ಮುಂಬೈ ವಿರುದ್ಧ.

* ಅತಿ ವೇಗದ ಶತಕ: ಕ್ರಿಸ್ ಗೇಲ್ 48 ಎಸೆತಗಳಲ್ಲಿ vs ಕಿಂಗ್ಸ್ XI ಪಂಜಾಬ್

* ಅತಿ ವೇಗದ ಅರ್ಧಶತಕ: 19 ಎಸೆತಗಳಲ್ಲಿ ಆಂಡ್ರೆ ರಸೆಲ್ ಕೆಕೆಆರ್ vs ಕಿಂಗ್ಸ್ XI ಪಂಜಾಬ್) ಉತ್ತಮ ಸ್ಟ್ರೈಕ್ ರೇಟ್
ಹರ್ಭಜನ್ ಸಿಂಗ್ (ಮುಂಬೈ vs ಪಂಜಾಬ್).


* ಟೂರ್ನಿಯ ಅತಿ ಹೆಚ್ಚು ಸಿಕ್ಸರ್ : 38 ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

* ಅತಿ ಹೆಚ್ಚು ಬೌಂಡರಿ: 65 ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್)

* ಟೂರ್ನಿಯ ಸಿಕ್ಸರ್: 692
* ಟೂರ್ನಿಯ ವಿಕೆಟ್ : 686
* ಅತಿ ಹೆಚ್ಚು ಟೀಂ ಸ್ಕೋರ್ : 235/1- ಆರ್ ಸಿಬಿ vs ಮುಂಬೈ


* ಶ್ರೇಷ್ಠ ಬೌಲಿಂಗ್ : 4/10 ಚೆನ್ನೈ ಪರ ಆಶೀಶ್ ನೆಹ್ರಾ vs ಆರ್ ಸಿಬಿ

* ಅತಿ ವೇಗದ ಎಸೆತ : 151.11 ಕಿ.ಮೀ ಪ್ರತಿ ಗಂಟೆ- ಮಿಚೆಲ್ ಜಾನ್ಸನ್ (ಕಿಂಗ್ಸ್ XI ಪಂಜಾಬ್)

* ಅತಿ ಹೆಚ್ಚು ಡಾಟ್ ಬಾಲ್ಸ್ ಒಂದೇ ಇನ್ನಿಂಗ್ಸ್ : 18 ಜಹೀರ್ ಖಾನ್ ಡೆಲ್ಲಿ ಪರ vs ಸಿಎಸ್ ಕೆ (4-1-9-2)

* ಟೂರ್ನಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್ಸ್ ಎಸೆತ : 170 ಆಶೀಶ್ ನೆಹ್ರಾ ಚೆನ್ನೈ ಪರ 16 ಇನ್ನಿಂಗ್ಸ್ 22 ವಿಕೆಟ್ 62 ಓವರ್ಸ್, 449 ರನ್

ಅತಿ ಹೆಚ್ಚು ಮೇಡನ್ ಓವರ್ಸ್ : 4 ಸಂದೀಪ್ ಶರ್ಮ (ಕಿಂಗ್ಸ್ XI ಪಂಜಾಬ್)

( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X