ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಮಣಿಸಿದ ಮುಂಬೈ ಐಪಿಎಲ್ 8 ಚಾಂಪಿಯನ್

By Mahesh

ಕೋಲ್ಕತ್ತಾ, ಮೇ. 24 : ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮ, ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 41ರನ್ ಗಳಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ಐಪಿಎಲ್ 2015 ಚಾಂಪಿಯನ್ ಆಗಿ ಕುಣಿದಾಡಿದೆ.

ನಾಯಕ ರೋಹಿತ್ ಶರ್ಮ ಅರ್ಧಶತಕ, ಐಪಿಎಲ್ ನಲ್ಲಿ ಭರ್ಜರಿ ಲಯದಲ್ಲಿರುವ ಸಿಮನ್ಸ್, ಪೊಲ್ಲಾರ್ಡ್-ರಾಯುಡು ಜೊತೆಯಾಟ ಮೂಲಕ ಮುಂಬೈ ತಂಡ 20 ಓವರ್ಸ್ ನಲ್ಲಿ 202/5 ಸ್ಕೋರ್ ಮಾಡಿತು. [ಐಪಿಎಲ್ 2015: ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ?]

ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 140/8 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ಐಪಿಎಲ್ 2015 ರ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಉತ್ತರ ಗೊತ್ತಿಲ್ಲ.

ಐಪಿಎಲ್ ವಿಶೇಷ ಪುಟ |

Rohith Sharma

ಚೆನ್ನೈ ರನ್ ಚೇಸ್:

* ಮುಂಬೈ ಇಂಡಿಯನ್ಸ್ ಐಪಿಎಲ್ 2015 ಚಾಂಪಿಯನ್
* ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 140/8 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು.
* ಕೊನೆ 4 ಓವರ್ ಗಳಲ್ಲಿ 78 ರನ್ ಗಳಿಸಬೇಕಾದ ಅವಸ್ಥೆಗೆ ಚೆನ್ನೈ ಬಂದು ಬಿಟ್ಟಿತು.
* ಡೂ ಫ್ಲೆಸಿಸ್ ಬದಲು ಆಡಲು ಬಂದ ನಾಯಕ ಧೋನಿ ಸಿಕ್ಸ್ ಎತ್ತುವಷ್ಟರಲ್ಲಿ ಪಂದ್ಯ ಕೈ ತಪ್ಪಿತ್ತು.
* ಸುರೇಶ್ ರೈನಾ 19 ಎಸೆತಗಳಲ್ಲಿ 28 ರನ್ ಗಳಿಸಿ ಹರ್ಭಜನ್ ಗೆ ವಿಕೆಟ್ ಒಪ್ಪಿಸಿದರು.
* ಸ್ಮಿತ್ 57 (48 ಎಸೆತ, 9x4, 1x6) ರನ್ ಗಳಿಸಿ ಹರ್ಭಜನ್ ಗೆ ಎಲ್ ಬಿ ಆಗಿ ಔಟ್.

* 11 ಓವರ್ ಗಳಲ್ಲಿ 81/1 ಸ್ಕೋರ್ ಮಾಡಿದ ಚೆನ್ನೈ ಗೆಲುವಿನ ಹಾದಿ ಹಿಡಿಯುವ ಬದಲು ಹಳ್ಳ ಹಿಡಿಯಿತು.
* ಡ್ವಾಯ್ನೆ ಸ್ಮಿತ್ 42 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಹೋರಾಟ ತೋರಿದರು.
* 10 ಓವರ್ಸ್ ನಲ್ಲಿ ಚೆನ್ನೈ 67/1 ಸ್ಕೋರ್ ಮಾಡಿತು.
* 50 ರನ್ ಸ್ಕೋರ್ ಮಾಡಲು 8 ಓವರ್ ತೆಗೆದುಕೊಂಡಿತು.
IPL 2015 Final

* ಚೆನ್ನೈ ಹಣೆಬರಹ ಮೊದಲ 6 ಓವರ್ ಗಳಲ್ಲೇ ತಿಳಿದು ಬಿಟ್ಟಿತು. 31/1 ಸ್ಕೋರ್ ಮಾಡಿ ತಿಣುಕಾಡಿತು.
* ಮಿ.ಕ್ರಿಕೆಟ್ ಮೈಕ್ ಹಸ್ಸಿ ತಿಣುಕಾಟ ಚೆನ್ನೈ ಇತರೆ ಆಟಗಾರರಿಗೂ ಆವರಿಸಿತು. ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಹಸ್ಸಿಗೆ ಔಟಾದರು.

ಐಪಿಎಲ್ 2015ರಲ್ಲಿ ಲೀಗ್ ಹಂತದಲ್ಲಿ ಆರಂಭದಲ್ಲಿ ಐದು ಬಾರಿ ಮುಗ್ಗರಿಸಿದ್ದ ಮುಂಬೈ ತಂಡ ನಂತರ ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಲ್ಲದೆ ಪ್ಲೇ ಆಫ್‌ ನಲ್ಲಿ ಮೊದಲ ಕ್ವಾಲಿಫೈಯರ್ ನಲ್ಲೇ ಗೆದ್ದು ಫೈನಲ್ ಪ್ರವೇಶಿಸಿದೆ. ಮುಂಬೈ ತಂಡಕ್ಕೆ ಕೋಲ್ಕತಾ ನೆಚ್ಚಿನ ತಾಣವಾಗಿದೆ. [ಐಪಿಎಲ್ ಏಳು ಫೈನಲ್ಸ್ ಮೆಲುಕು]

ಈಡನ್ ಗಾರ್ಡನ್ಸ್‌ನಲ್ಲಿ 2013ರಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈ ವಿರುದ್ಧ 23 ರನ್‌ಗಳ ಜಯ ಗಳಿಸಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿತ್ತು.

ಮುಂಬೈ ಇನ್ನಿಂಗ್ಸ್ : [ಲಕ್ಕಿ ನಂಬರ್ ಚಾರ್ಮ್ ; ಮುಂಬೈಗೆ ಕಪ್ ?]
* ಮುಂಬೈ ತಂಡ 20 ಓವರ್ಸ್ ನಲ್ಲಿ 202/5 ಸ್ಕೋರ್ ಮಾಡಿದೆ.
* 18 ಎಸೆತಗಳಲ್ಲಿ 36 ರನ್ ಗಳಿಸದ ಪೊಲ್ಲಾರ್ಡ್.
* 17 ಓವರ್ಸ್ ನಂತರ ಮುಂಬೈ 173/3. ನೆಹ್ರಾ ಬೌಲಿಂಗ್ ನಲ್ಲಿ 23 ರನ್ ದೋಚಿದ ಪೊಲ್ಲಾರ್ಡ್.
* 16 ಓವರ್ ಗಳ ನಂತರ ಮುಂಬೈ ಸ್ಕೋರ್ 150/3.
* 15 ಓವರ್ಸ್ ನಂತರ ಮುಂಬೈ ಸ್ಕೋರ್ 146/3. [ಮಳೆ ನಿಯಮಗಳು]
* 14 ಓವರ್ಸ್ ನಂತರ 134/3 ಪೊಲ್ಲಾರ್ಡ್ ಹಾಗೂ ರಾಯುಡು ಕ್ರೀಸ್ ನಲ್ಲಿದ್ದಾರೆ.

Simmons

* ಸಿಮನ್ಸ್ 68 (45 ಎಸೆತ, 8X4, 3X6)
* ರೋಹಿತ್ ಶರ್ಮ : 54 (26 ಎಸೆತ, 6x4, 2x6)
* ರೋಹಿತ್ ಔಟಾದ ಮರ ಎಸೆತದಲ್ಲೇ ಸ್ಮಿತ್ ಬೌಲಿಂಗ್ ನಲ್ಲಿ ಸಿಮನ್ಸ್ ಕ್ಲನ್ ಬೋಲ್ಡ್.
* 12 ಓವರ್ಸ್ ನಂತರ ಮುಂಬೈ 120/2.
* 25 ಎಸೆತಗಳಲ್ಲಿ 50 ರನ್ ಪೂರೈಸಿದ ನಾಯಕ ರೋಹಿತ್ ಶರ್ಮ ಮರು ಎಸೆತದಲ್ಲೇ ಕ್ಯಾಚಿತ್ತು ಔಟ್.
* ರೋಹಿತ್ ಹಾಗೂ ಸಿಮನ್ಸ್ ನಡುವೆ 57 ಎಸೆತಗಳಲ್ಲಿ 100 ರನ್ ಜೊತೆಯಾಟ.
* 10.1 ಓವರ್ಸ್ ನಲ್ಲಿ ಮುಂಬೈ ಇನ್ನಿಂಗ್ಸ್ ನ 100 ರನ್ ದಾಖಲು.
* ಮೊದಲ ಪವರ್ ಪ್ಲೇ ನಲ್ಲಿ 61 ರನ್ ಕಲೆ ಹಾಕಿದ ಮುಂಬೈ.
* ಡುಫ್ಲೆಸಿಸ್ ಎಸೆತಕ್ಕೆ ರನೌಟ್ ಆದ ಪಟೇಲ್ ನಿರಾಶೆ ಮೂಡಿಸಿದರೆ, ಸಿಮನ್ಸ್ ಎಂದಿನ ಹೊಡಿ ಬಡಿ ಆಟ ಮುಂದುವರೆಸಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X