ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಮಣಿಸಿದರೆ ಆರ್ ಸಿಬಿಗೆ ಪ್ಲೇ ಆಫ್ ಎಂಟ್ರಿ ಗ್ಯಾರಂಟಿ!

By Mahesh

ಮೊಹಾಲಿ, ಮೇ.13: ಐಪಿಎಲ್ 2015ರಲ್ಲಿ ಸತತ ಗೆಲುವಿನೊಂದಿಗೆ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಪಡೆ ಬುಧವಾರ ಕಿಂಗ್ಸ್ XI ಪಂಜಾಬ್ ತಂಡವನ್ನು ಮಣಿಸಿದರೆ ಪ್ಲೇ ಆಫ್ ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಲಿದೆ. ಅಂಕಪಟ್ಟಿಯಲ್ಲಿ ಆರ್ ಸಿಬಿ ತುಸು ಕೆಳಗಿದ್ದರೂ ತಂಡದ ರನ್ ಸರಾಸರಿ ಉತ್ತಮವಾಗಿರುವುದು ಪ್ಲಸ್ ಪಾಯಿಂಟ್ ಆಗಲಿದೆ.

ಇನ್ನೊಂದೆಡೆ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲಿರುವ ಕಿಂಗ್ಸ್ ‍XI ಪಂಜಾಬ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್ ಸಿಬಿ ಆಸೆಗೆ ತಣ್ಣೀರೆರಚಬಹುದು.

ಮ್ಯಾಕ್ಸ್ ವೆಲ್, ಡೇವಿಡ್ ಮಿಲ್ಲರ್ ರಂಥ ಮ್ಯಾಚ್ ವಿನ್ನರ್ ಗಳಿದ್ದರೂ ಸರಿಯಾದ ಕಾಂಬಿನೇಷನ್ ಸಿಗದೆ ಪಂಜಾಬ್ ತಂಡ ಈ ಬಾರಿ ಐಪಿಎಲ್ ನಲ್ಲಿ ಕಳಪೆ ಆಟ ಮುಂದುವರೆಸಿದೆ. ಚೆನ್ನೈ ವಿರುದ್ಧ ಮಿಲ್ಲರ್ ಆರ್ಭಟಿಸಿದಂತೆ ಉಳಿದವರು ಬ್ಯಾಟ್ ಬೀಸಿದರೆ ಆರ್ ಸಿಬಿಗೆ ಅಪಾಯ ಕಾದಿದೆ. ಮಿಚೆಲ್ ಜಾನ್ಸನ್ ಕೂಡಾ ಕ್ಲಿಕ್ ಆಗಿಲ್ಲದಿರುವುದು ಪಂಜಾಬ್ ಗೆ ತಲೆ ನೋವು ತಂದಿದೆ.

ಆರ್ ಸಿಬಿ ತಂಡ ಎಂದಿನಂತೆ ಗೇಲ್, ಎಬಿಡಿ ಹಾಗೂ ಕೊಹ್ಲಿ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿದೆ. ಸ್ಟಾರ್ಕ್ ಹಾಗೂ ಹರ್ಷಲ್ ಪಟೇಲ್ ಜೊತೆಗೆ ಎಸ್ ಅರವಿಂದ್ ಹೊಸ ಅಸ್ತ್ರವಾಗಿ ಸೇರ್ಪಡೆಗೊಂಡಿರುವುದರಿಂದ ತಂಡ ಸದ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ.

Kings XI Punjab Vs Royal Challengers Bangalore

ಐಪಿಎಲ್ 2015: ಆರ್ ಸಿಬಿ vs ಕಿಂಗ್ಸ್ XI ಪಂಜಾಬ್ ಮ್ಯಾಚ್ ಗೈಡ್:

ಯಾವಾಗ, ಎಲ್ಲಿ ಪಂದ್ಯ?:

* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕಿಂಗ್ಸ್ XI ಪಂಜಾಬ್
* ಪಿಸಿಎ ಸ್ಟೇಡಿಯಂ, ಮೊಹಾಲಿ
* ಮೇ.13, ಬುಧವಾರ, 8 PM

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]

* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಕಿಂಗ್ಸ್ XI ಪಂಜಾಬ್: ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್ ವೆಲ್, ಸಂದೀಪ್ ಶರ್ಮ

ಮುಖಾಮುಖಿ
ಪಂಜಾಬ್ -9; ಆರ್ ಸಿಬಿ-6

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಪಂಜಾಬ್ -8 (2 ಗೆಲುವು, 10 ಸೋಲು)
* ಆರ್ ಸಿಬಿ- 5 (6 ಗೆಲುವು, 4 ಸೋಲು, 1 ಫಲಿತಾಂಶವಿಲ್ಲ)

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X