ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ VS ಮುಂಬೈ: ಎರಡು ತಂಡಗಳ ಬಲಾಬಲವೇನು?

ಕೋಲ್ಕತ್ತಾ, ಮೇ 23: ತಿಂಗಳ ಕಾಲ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ ಐಪಿಎಲ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ.

ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳಿಸಿದ್ದ ತಂಡಗಳೇ ಫೈನಲ್ ಗೆ ಜಿಗಿದಿವೆ. ಇದೇ ತಂಡಗಳು 2010 ಮತ್ತು 2013 ರ ಐಪಿಎಲ್ ಫೈನಲ್ ನಲ್ಲೂ ಮುಖಾಮುಖಿಯಾಗಿದ್ದವು. ಚೆನ್ನೈ 2010ರಲ್ಲಿ ಪ್ರಶಸ್ತಿ ಜಯಿಸಿದ್ದರೆ, ಮುಂಬೈ 2013 ರಲ್ಲಿ ವಿಜಯಿಯಾಗಿತ್ತು.[ಐಪಿಎಲ್ ಫೈನಲ್ ಗೆ ಮಳೆ ಬಂದರೆ ಏನು ಕತೆ?]

ipl

ಇಲ್ಲಿಯವರೆಗೆ ಒಟ್ಟು 8 ಐಪಿಎಲ್ ಆವೃತ್ತಿ ನಡೆದಂಥಾಗಿದ್ದು ಚೆನ್ನೈ ತಂಡ 6 ನೇ ಬಾರಿ ಫೈನಲ್ ಪ್ರವೇಶ ಮಾಡಿದೆ. 2010, 2011 ರಲ್ಲಿ ಪ್ರಶಸ್ತಿ ಜಯಿಸಿರುವ ತಂಡ ಮೂರನೇ ಬಾರಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ.

ಮುಂಬೈಗೆ ಇದು ಮೂರನೇ ಫೈನಲ್ ಆಗಿದ್ದು ಎರಡನೇ ಪ್ರಶಸ್ತಿ ಗೆದ್ದು ಕೋಲ್ಕತ್ತಾ ಮತ್ತು ಚೆನ್ನೈ ಸಾಲಿಗೆ ಸೇರುವ ತವಕದಲ್ಲಿದೆ.[ಲಯ ತಪ್ಪಿದ ವಿರಾಟ್ ತಂತ್ರ, ಧೋನಿ ಹುಡುಗರು ಫೈನಲ್ ಗೆ]

ಐದು ಫೈನಲ್ ಆಡಿರುವ ಚೆನ್ನೈಗೆ ಸಮರ್ಥ ನಾಯಕತ್ವವಿದೆ. ಬ್ರಾವೋ ಮಾರಕ ಬೌಲಿಂಗ್, ನೆಹ್ರಾ ಫಾರ್ಮ್, ಅಪತ್ ಕಾಲದಲ್ಲಿ ಮಿಂಚುವ ಸುರೇಶ್ ರೈನಾ, ಮರಳಿ ಲಯ ಕಂಡುಕೊಂಡಿರುವ ಮೈಕಲ್ ಹಸ್ಸೆ, ಅದ್ಭುತ ಕ್ಷೇತ್ರರಕ್ಷಣೆ ಚೆನ್ನೈ ಶಕ್ತಿ.

ipl 1

ಆರಂಭದಲ್ಲಿ ಎಡವಿದ್ದರೂ ನಂತರ ಗೆಲುವಿನ ಅಭಿಯಾನದಲ್ಲೇ ಮುಂದುವರಿದಿರುವ ಮುಂಬೈ ಗೆ ಮಾಲಿಂಗ ಬೌಲಿಂಗ್ ಶಕ್ತಿಯಿದೆ. ಸಂಘಟಿತ ಹೋರಾಟ ನಡೆಸಿಕೊಂಡು ಬಂದಿರುವ ಮುಂಬೈ ಪಂದ್ಯದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಹುದು.[ನಂ.2 ಪವರ್: ಮುಂಬೈಗೆ ಐಪಿಎಲ್ 2015 ಕಪ್?]

* ಪಂದ್ಯ ಎಲ್ಲಿ: ಈಡನ್ ಗಾರ್ಡನ್, ಕೋಲ್ಕತ್ತಾ, 24 ಮೇ. ರಾತ್ರಿ 8 ಗಂಟೆಗೆ ಆರಂಭ
* ನೇರಪ್ರಸಾರ: ಸೋನಿಮ್ಯಾಕ್ಸ್, ಸಿಕ್ಸ್, ಕಿಕ್ಸ್, ಅಥ್ಥಾ

* ಹೆಡ್ ಟು ಹೆಡ್
ಮುಂಬೈ 11
ಚೆನ್ನೈ 10
* 2015 ರಲ್ಲಿ
ಮುಂಬೈ 2
ಚೆನ್ನೈ 1(ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X