ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ವಿರುದ್ಧ ರಾಜಸ್ಥಾನಕ್ಕೆ ಸೇಡಿನ ಪಂದ್ಯ

By Mahesh

ಪುಣೆ, ಮೇ.20: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡ ಸಜ್ಜಾಗಿದೆ. ಐಪಿಎಲ್ 2015ರ ಎಲಿಮಿನೇಟರ್ ಪಂದ್ಯದಲ್ಲಿ 'ರಾಯಲ್ಸ್ ಕದನ' ದಲ್ಲಿ ಗೆದ್ದವರು ಕ್ವಾಲಿಫೈಯರ್ 2ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಲೀಗ್ ಹಂತದಲ್ಲಿ ಬಗ್ಗು ಬಡಿದಿರುವ ವಿಶ್ವಾಸದೊಂದಿಗೆ ವಿರಾಟ್ ಕೊಹ್ಲಿ ಪಡೆ ಕಣಕ್ಕಿಳಿಯಲಿದೆ. ಆದರೆ, ಎರಡು ತಂಡಕ್ಕೂ ಪುಣೆ ಪಿಚ್ ನಿರ್ಣಾಯಕವಾಗಲಿದೆ. ಎಂಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಜಸ್ಥಾನ ತಂಡ ಒಂದು ಪಂದ್ಯವಾಡಿದೆ. ಅದರೆ, ಆರ್ ಸಿಬಿ ಸರಿಯಾಗಿ ಪಿಚ್ ಬಗ್ಗೆ ವಿಶ್ಲೇಷಣೆ ನಡೆಸದಿದ್ದರೆ ಎಷ್ಟೇ ಬಲವಿದ್ದರೂ ತಿಣುಕಾಡಬೇಕಾಗುತ್ತದೆ.

ಕೊನೆ ಲೀಗ್ ಪಂದ್ಯದಲ್ಲಿ ಶೇನ್ ವಾಟ್ಸನ್ ಶತಕ ಸಿಡಿಸಿ ಲಯಕ್ಕೆ ಮರಳಿರುವುದರಿಂದ ಆರ್ ಆರ್ ತಂಡ ಇನ್ನಷ್ಟು ಬಲಿಷ್ಠಗೊಂಡಿದೆ. ಎರಡು ತಂಡಗಳು ರನ್ ಚೇಸಿಂಗ್ ನಲ್ಲೇ ಖುಷಿಯಾಗುತ್ತಿವೆ. ಪಿಚ್ ಮರ್ಮ ಅರಿತವನು ಚೆನ್ನೈ ಜೊತೆ ಕಾದಾಡಬಹುದು. ಇಲ್ಲದಿದ್ದರೆ ಮನೆಗೆ ನಡೆಯಬಹುದು.(ಗ್ಯಾಲರಿ)

IPL 2015 Daily Guide: Eliminator (Match 58) - Royal Challengers Bangalore Vs Rajasthan Royals

ಐಪಿಎಲ್ 2015 ಆರ್ ಸಿಬಿ vs ಆರ್ ಆರ್ ಮ್ಯಾಚ್ ಗೈಡ್:

ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
* ಎಂಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ, ಪುಣೆ
* ಮೇ.20, ಬುಧವಾರ, 8PM IST

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್ (ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]
* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್, ಚಾಹಲ್.
* ಆರ್ ಆರ್: ಅಜಿಂಕ್ಯ ರಹಾನೆ, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್, ಜೇಮ್ಸ್ ಫಾಲ್ಕ್ನರ್, ಕ್ರಿಸ್ ಮೊರಿಸ್.

ಮುಖಾಮುಖಿ
ರಾಜಸ್ಥಾನ-7; ಆರ್ ಸಿಬಿ-7

ಐಪಿಎಲ್ 2015ರ ಮುಖಾಮುಖಿ
ಆರ್ ಸಿಬಿ 7 : ಆರ್ ಆರ್ 7
* ಬೆಂಗಳೂರಿನಲ್ಲಿ ನಡೆದ ಪಂದ್ಯ ಮಳೆಗೆ ಆಹುತಿಯಾಗಿದೆ.

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ರಾಜಸ್ಥಾನ್ ರಾಯಲ್ಸ್: ಶೇನ್ ವಾಟ್ಸನ್(ನಾಯಕ), ಸ್ಟುವರ್ಟ್ ಬಿನ್ನಿ, ಜೇಮ್ಸ್ ಫಾಲ್ಕ್ನರ್, ಅಜಿಂಕ್ಯ ರಹಾನೆ, ಸಂಜು ಸಾಮ್ಸನ್(ವಿಕೆಟ್ ಕೀಪರ್), ಸ್ಟೀವ್ ಸ್ಮಿತ್, ರಜತ್ ಭಾಟಿಯಾ, ಟಿಮ್ ಸೌಥಿ, ಧವಳ್ ಕುಲಕರ್ಣಿ, ಅಭಿಷೇಕ್ ನಾಯಕ್ರ್, ಕೇನ್ ರಿಚರ್ಡ್ಸನ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ದೀಪಕ್ ಹೂಡಾ, ದಿಶಾಂತ್ ಯಾಗ್ನಿಕ್, ವಿಕ್ರಮ್ಜೀತ್ ಮಲೀಕ್, ಅಂಕಿತ್ ಶರ್ಮ, ರಾಹುಲ್ ತೆವಾಟಿಯಾ, ಪ್ರವೀಣ್ ತಾಂಬೆ, ಕ್ರಿಸ್ ಮಾರೀಸ್, ದಿನೇಶ್ ಸಾಲುಂಖೆ, ಜುವಾನ್ ಥೆರಾನ್, ಪ್ರದೀಪ್ ಸಾಹು, ಬರೀಂದರ್ ಸರಣ್, ಸಾಗರ್ ತ್ರಿವೇದಿ.

ಅಂಪೈರ್ಸ್: ಅನಿಲ್ ಚೌಧರಿ ಹಾಗೂ ಸಿ ಷಂಶುದ್ಧೀನ್ (ಇಬ್ಬರು ಭಾರತೀಯರು)
* ಟಿವಿ ಅಂಪೈರ್ : ಕ್ರಿಸ್ ಘಫಾನೆ (ನ್ಯೂಜಿಲೆಂಡ್)
* 4ನೇ ಅಂಪೈರ್: ಕೆ ಶ್ರೀನಾಥ್
* ಮ್ಯಾಚ್ ರೆಫ್ರಿ: ರೋಷನ್ ಮಹಾನಾಮ ( ಶ್ರೀಲಂಕಾ)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X