ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಬ್ಬಲ್ ಸೆಂಚುರಿ ಗೆರೆ ದಾಟಿದ 'ನಾಯಕ' ಧೋನಿ

By Mahesh

ಮುಂಬೈ, ಮೇ.19: ಐಪಿಎಲ್ 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರಿಗೆ ಮುಖಭಂಗವಾಗಿದೆ. ಅದರೆ, ಸೋಲಿನ ನಡುವೆಯೂ ನಾಯಕ ಧೋನಿ 'ಡಬ್ಬಲ್ ಸೆಂಚುರಿ' 'ಗೋಲ್ಡನ್ ಡಕ್' ಹೀಗೆ ದಾಖಲೆಗಳನ್ನು ಮುರಿದಿದ್ದಾರೆ.

| ಐಪಿಎಲ್ ವಿಶೇಷ ಪುಟ | ಪಂದ್ಯದ ವರದಿ

ಟಿ20 ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ 200 ಪಂದ್ಯಗಳನ್ನು ಮುನ್ನಡೆಸಿದ ಪ್ರಪ್ರಥಮ ಕ್ಯಾಪ್ಟನ್ ಎಂಬ ಕ್ಯಾಪ್ ಧೋನಿ ತಲೆಗೇರಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಎಲ್ಲವನ್ನು ಲೆಕ್ಕ ಹಾಕಿದರೆ ಧೋನಿ ಅತ್ಯಧಿಕ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ.

Captain MS Dhoni claims another record in T20 cricket

ಇಂಡಿಯನ್ ಪ್ರಿಮಿಯರ್ ಲೀಗ್ 2015ರ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ 33 ವರ್ಷದ ನಾಯಕ ಧೋನಿ ಅವರು ಹೊಸ ಇತಿಹಾಸ ನಿರ್ಮಿಸಿದರು.

ಅದರೆ, ಸಾಧನೆಯ ಸಂಭ್ರಮವನ್ನು ಗೆಲುವಿನೊಂದಿಗೆ ಆಚರಿಸುವ ಅವಕಾಶ ಮುಂಬೈ ತಂಡ ನೀಡಲಿಲ್ಲ. ಚೆನ್ನೈ ತಂಡದಿಂದ ಗೆಲುವು ದೋಚಿಕೊಂಡರು.

ನಾಯಕರಾಗಿ 2007ರಲ್ಲಿ ಮೊದಲ ಟಿ20 ಪಂದ್ಯ ಆಡಿದ್ದ ಧೋನಿ, ದಕ್ಷಿಣ ಆಫ್ರಿಕಾದಲ್ಲಿ ಐಸಿಸಿ ವಿಶ್ವ ಟಿ20 ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ್ದಲ್ಲದೆ ಕಪ್ ಕೂಡಾ ಎತ್ತಿದ್ದರು.

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ಬಾರಿ ಐಪಿಎಲ್ ಹಾಗೂ ಸಿಎಲ್ಟಿ 20 ಪ್ರಶಸ್ತಿ ಗೆದ್ದಿದೆ (2010,2011) ಹಾಗೂ ಸಿಎಲ್ ಟಿ20 (2010,2014).2008ರಿಂದಲೂ ಸಿಎಸ್ ಕೆ ತಂಡದ ನಾಯಕರಾಗಿ ಧೋನಿ ಮುಂದುವರೆದಿದ್ದಾರೆ.

ಟಾಪ್ 5 ಟಿ 20 ನಾಯಕರು
* ಎಂಎಸ್ ಧೋನಿ -200* (118 ಗೆಲುವು, 77 ಸೋಲು)
* ಗೌತಮ್ ಗಂಭೀರ್: 119 (70 ಗೆಲುವು, 47 ಸೋಲು)
* ಜಾರ್ಜ್ ಬೈಲಿ: 93 (47 ಗೆಲುವು, 44 ಸೋಲು)
* ಡರೇನ್ ಸಾಮಿ :92 (46 ಗೆಲುವು, 42 ಸೋಲು)
* ಅಡಂ ಗಿಲ್ ಕ್ರಿಸ್ಟ್ : 83 (40 ಗೆಲುವು, 43 ಸೋಲು)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X