ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಂಖೆಡೆ: ಶಾರುಖ್ ನಂತರ ಐಶೂಗೆ 'ನೋ ಎಂಟ್ರಿ'

By Mahesh

ಮುಂಬೈ, ಏ.14: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಮೇಲೆ ಇಲ್ಲಿನ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದು ನಿಮಗೆ ನೆನಪಿರಬಹುದು. ಈಗ ನಟಿ ಐಶ್ವರ್ಯಾ ರೈ ಅವರಿಗೂ ಇದೇ ರೀತಿ ಮರ್ಯಾದೆ ಸಿಕ್ಕಿದೆ. ಆದರೆ, ಶಾರುಖ್ ಅವರಂತೆ ಐಶೂ ಏನೂ ಕಿರಿಕ್ ಮಾಡಿಕೊಳ್ಳಲಿಲ್ಲದಿದ್ದರೂ ನೋ ಎಂಟ್ರಿ ಬೋರ್ಡ್ ತೋರಿಸಲಾಗಿದೆ.

ಸಂಜಯ್ ಗುಪ್ತಾ ಅವರ ನಿರ್ದೇಶನದ ಜಝ್ಬಾ ಚಿತ್ರದ ಮೂಲಕ ಬಾಲಿವುಡ್ ಗೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ರೀ ಎಂಟ್ರಿ ಪಡೆಯುತ್ತಿದ್ದಾರೆ. ಜಝ್ಬಾ ಚಿತ್ರದ ಚಿತ್ರೀಕರಣಕ್ಕಾಗಿ ವಾಂಖೆಡೆ ಮೈದಾನವನ್ನು ಚಿತ್ರತಂಡ ಬುಕ್ ಮಾಡಿಕೊಂಡಿತ್ತು. ಆದರೆ, ಇಂಡಿಯನ್ ಪ್ರಿಮಿಯರ್ ಲೀಗ್ ಹಬ್ಬದ ನಡುವೆ ಸಿನಿಮಾ ಶೂಟಿಂಗ್ ಗೆ ಅವಕಾಶ ನೀಡುವ ಮಾತೇ ಇಲ್ಲ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಖಡಾಖಂಡಿತವಾಗಿ ಹೇಳಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಸೇರಿದಂತೆ ಇಡೀ ಚಿತ್ರತಂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರತಂಡದ ಪ್ರಕಾರ ವಾಂಖೆಡೆ ಸ್ಟೇಡಿಯಂನಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿತ್ತು.

IPL 2015: After Shahrukh Khan, now Aishwarya Rai not allowed in Wankhede Stadium in Mumbai

ಅದರೆ, ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಯಿತು. ಐಪಿಎಲ್ 8 ಟೂರ್ನಿಯ ಪಂದ್ಯಗಳು ಆರಂಭವಾಗಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ನಡುವೆ ಪಂದ್ಯ ನಿಗದಿಯಾಗಿದೆ. ಹೀಗಾಗಿ ಟೂರ್ನಿ ಮುಗಿಯುವ ತನಕ ಬಾಲಿವುಡ್ ಸ್ಟಾರ್ ಗಳು ಪಂದ್ಯ ನೋಡಲು ಬರಬಹುದೇ ಹೊರತು ಸಿನಿಮಾ ಶೂಟಿಂಗ್ ಮಾಡುವಂತಿಲ್ಲ ಎಂದು ಎಂಸಿಎ ಹೇಳಿದೆ. [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ]

ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೇಡೆ ಸ್ಟೇಡಿಯಂ ಪ್ರವೇಶಿಸದಂತೆ ಶಾರುಖ್‌ಖಾನ್‌ಗೆ ನಿಷೇಧ ಹೇರಲಾಗಿತ್ತು. ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಎಂಸಿಎಗೆ ಮನವಿ ಮಾಡಿತ್ತು. ಅದರೆ, ಶಾರುಖ್ ಮೇಲಿನ ನಿರ್ಬಂಧ ತೆರವುಗೊಳಿಸಿರಲಿಲ್ಲ.

ಮಕ್ಕಳ ಮುಂದೆ ಅವಾಚ್ಯ ಶಬ್ದ ಬಳಸಿದ ಕಾರಣಕ್ಕೆ ಶಾರುಖ್ ಅವರ ಮೇಲೆ ಮತ್ತೊಂದು ಎಫ್ ಐಆರ್ ದಾಖಲಾಗಿತ್ತು. ಐಪಿಎಲ್ ಆಯೋಜಿಸಿರುವ ಬಿಸಿಸಿಐ ಮನವಿಗೂ ಎಂಸಿಎ ಸೊಪ್ಪು ಹಾಕಿರಲಿಲ್ಲ. ಈಗಲೂ ಕೂಡಾ ಬಾಲಿವುಡ್ ತಾರೆಗಳ ಮನವಿ ಬಂದರೂ ಎಂಸಿಎ ಬಗ್ಗುತ್ತಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಮೊದಲ ಆದ್ಯತೆ ಎಂದು ಪ್ರತಿಕ್ರಿಯಿಸಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X