ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದಶಮಾನೋತ್ಸವ: ಈವರೆಗಿನ ಟಾಪ್ 10 ದುಬಾರಿ ಆಟಗಾರರಿವರು!

ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗ ದಶಮಾನೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ, ಟೂರ್ನಿಯ ಇತಿಹಾಸದಲ್ಲಿ ಈವರೆಗಿನ ವಿಶೇಷತೆಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಪ್ರಯತ್ನವಿದು.

2008ರಲ್ಲಿ ಈ ಟೂರ್ನಿಯನ್ನು ಮೊದಲ ಬಾರಿಗೆ ಆಯೋಜಿಸಿದಾಗಿನಿಂದಲೂ ಟೂರ್ನಿಯ ಫ್ರಾಂಚೈಸಿಗಳ ನಡುವೆ ದೊಡ್ಡ ಸ್ಪರ್ಧೆಯೇ ಏರ್ಪಟ್ಟಿದೆ. ಪ್ರತಿ ವರ್ಷ ಆಟಗಾರರ ಹರಾಜು ನಡೆಯುವಾಗಲೂ ತಮ್ಮ ನೆಚ್ಚಿನ ಆಟಗಾರರನ್ನು ತಮ್ಮ ಪಡೆಗೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸುತ್ತವೆ.[ಐಪಿಎಲ್ 1ರಿಂದ 10ರಲ್ಲಿ ಆರೇಂಜ್ ಕ್ಯಾಪ್ ಪಡೆದ ಆಟಗಾರರಿವರು]

ಈ ಪೈಪೋಟಿಯ ನೇರ ಲಾಭವಾಗುವುದು ಆಟಗಾರರಿಗೇ. ಏಕೆಂದರೆ, ಕೆಲವೊಮ್ಮೆ ಇಂಥ ಪೈಪೋಟಿಯಲ್ಲಿ ಕೆಲ ಆಟಗಾರರ ಬೇಸ್ ಪ್ರೈಸ್ (ಮೂಲ ಧನ) ಐದು ಪಟ್ಟು, ಹತ್ತು ಪಟ್ಟು ಹೆಚ್ಚಾಗಿ ಒಂದು ಬಂಪರ್ ಮೊತ್ತಕ್ಕೆ ಆಟಗಾರರು ಹರಾಜಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಹೀಗೆ, ಪೈಪೋಟಿ ನಡೆಯಬೇಕೆಂದರೆ, ಆಟಗಾರರ ಪ್ರೊಫೈಲ್ ಕೂಡ್ ಅಷ್ಟೇ ಚೆನ್ನಾಗಿರಬೇಕೆನ್ನುವುದೂ ಸತ್ಯವಾದ ವಿಚಾರ. ಅದೇನೇ ಇರಲಿ, ಹೀಗೆ, ತಮ್ಮ ಅದ್ಭುತ ಪ್ರೊಫೈಲ್, ಪರ್ಫಾಮನ್ಸ್ ನಿಂದಲೇ ಬೇಡಿಕೆ ಸೃಷ್ಟಿಸಿಕೊಂಡು, ಹರಾಜಿನ ವೇಳೆ ಬಂಪರ್ ಬೆಲೆ ಗಳಿಸಿ, ಫ್ರಾಂಚೈಸಿಗಳಿಗೆ ದುಬಾರಿ ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.[IPL 10: ಆರ್ ಸಿಬಿ ತಂಡಕ್ಕೆ ಸರ್ಫರಾಜ್ ಬದಲು ಹರ್ ಪ್ರೀತ್ ಸಿಂಗ್]

ದುಬಾರಿ ಮೊತ್ತ ಗಳಿಸಿದ ಮೊದಲ ಆಟಗಾರ

ದುಬಾರಿ ಮೊತ್ತ ಗಳಿಸಿದ ಮೊದಲ ಆಟಗಾರ

2015ರಲ್ಲಿ ಯುವರಾಜ್ ಸಿಂಗ್ ಅವರಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡವು 16 ಕೋಟಿ ರು. ಕೊಟ್ಟು ತನ್ನಲ್ಲಿ ಖರೀದಿಸಿತ್ತು. ಇದು ಈವರೆಗೆ ಐಪಿಎಲ್ ಇತಿಹಾಸದಲ್ಲಿ ದಾಖಲೆ. ಅಷ್ಟು ದೊಡ್ಡ ಮೊತ್ತವನ್ನು ಈವರೆಗೆ ಯಾರೂ ಖರೀದಿಸಿಲ್ಲ. ಅದಕ್ಕೂ ಮೊದಲು 2014ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಕೋಟಿ ರು. ಕೊಟ್ಟು ಅವರಿಗೆ ತನ್ನಲ್ಲಿ ಸ್ಥಾನ ನೀಡಿತ್ತು.

ದುಬಾರಿ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ

ದುಬಾರಿ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ

ದೆಹಲಿ ಮೂಲದ ಈ ಬ್ಯಾಟ್ಸ್ ಮನ್ ಗೆ 2011ರ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 15 ಕೋಟಿ ರು. ಕೊಟ್ಟು, ತನ್ನಲ್ಲಿ ಸ್ಥಾನ ನೀಡಿತ್ತು. ಹಾಗೆ, ಗಂಭೀರ್ ಅವರನ್ನು ತಮ್ಮಲ್ಲಿ ಸೇರ್ಪಡೆಗೊಳಿಸಿಕೊಂಡ ಕೋಲ್ಕತಾ ಅವರಿಗೇ ನಾಯಕನ ಪಟ್ಟ ನೀಡಿತು. ಅಲ್ಲಿಂದ ಆ ತಂಡ ಹಿಂದಿರುಗಿ ನೋಡಿಲ್ಲ. 2012 ಹಾಗೂ 2014ರಲ್ಲಿ ಗಂಭೀರ್ ನಾಯಕತ್ವದಲ್ಲೇ ಆ ತಂಡ ಕಪ್ ಗೆದ್ದಿದೆ. 2011ರ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಇವರು ಈವರೆಗಿನ ಐಪಿಎಲ್ ನ 2ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದುಬಾರಿಗರಲ್ಲಿ ಇವರು ಮೂರನೆಯವರು

ದುಬಾರಿಗರಲ್ಲಿ ಇವರು ಮೂರನೆಯವರು

2016ರಲ್ಲಿ, ಇಂಗ್ಲೆಂಡ್ ನ ಈ ಆಟಗಾರನಿಗೆ 14.5 ಕೋಟಿ ರು. ಕೊಟ್ಟು ಪುಣೆ ರೈಸಿಂಗ್ ಸೂಪರ್ ಜಿಯಾಂಟ್ಸ್ ಫ್ರಾಂಚೈಸಿಯು ತನ್ನಲ್ಲಿ ಅವಕಾಶ ಕಲ್ಪಿಸಿತ್ತು. ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 3ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ. ಪುಣೆಗೆ ಸೇರ್ಪಡೆಗೊಳ್ಳುವ ಮೊದಲು ಅವರು, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಲ್ಲಿ ಆಡಿದ್ದರು.

ನಾಲ್ಕನೇ ಅತಿ ದುಬಾರಿ ಆಟಗಾರ

ನಾಲ್ಕನೇ ಅತಿ ದುಬಾರಿ ಆಟಗಾರ

ಸ್ಫೋಟಕ ಬ್ಯಾಟ್ಸ್ ಮನ್ ಎಂದೇ ಖ್ಯಾತರಾಗಿರುವ ಇವರನ್ನು 2011ರಲ್ಲಿ ಕೋಲ್ಕತಾ ತಂಡ 13 ಕೋಟಿ ರು. ಕೊಟ್ಟು ಖರೀದಿಸಿತ್ತು.

ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 4ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.
ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ

ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವ, ಕನ್ನಡದ ಈ ಪ್ರತಿಭೆಗೆ 2011ರಲ್ಲಿ 13 ಕೋಟಿ ರು. ಕೊಡುವ ಮೂಲಕ ಕೋಲ್ಕತಾ ತಂಡ, ತನ್ನಲ್ಲಿ ಸ್ಥಾನ ನೀಡಿತ್ತು.
ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 5ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದಿನೇಶ್ ಕಾರ್ತೀಕ್

ದಿನೇಶ್ ಕಾರ್ತೀಕ್

ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ಆಗಿರುವ ತಮಿಳುನಾಡಿನ ದಿನೇಶ್ ಕಾರ್ತೀಕ್ ಗೆ 2014ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ, 13 ಕೋಟಿ ರು. ಕೊಟ್ಟಿತ್ತು.
ಆನಂತರ, ಅವರು ಆರ್ ಸಿಬಿ ತಂಡಕ್ಕೆ 11 ಕೋಟಿಗೆ ಸೇರ್ಪಡೆಗೊಂಡಿದ್ದರು. ಅದೇನೇ ಇರಲಿ, ಡೆಲ್ಲಿ ತಂಡ ಅವರಿಗೆ 13 ಕೋಟಿ ರು. ಕೊಟ್ಟಿದ್ದರಿಂದಾಗಿ, ಅವರು ಈವರೆಗಿನ ಐಪಿಎಲ್ ನ 6ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದುಬಾರಿ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನ

ದುಬಾರಿ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನ

ಮುಂಬೈನ ಈ ಪ್ರತಿಭಾನ್ವಿತ ಕ್ರಿಕೆಟಿಗನಿಗೆ 2011ರಲ್ಲಿ 12 ಕೋಟಿ ರು. ಕೊಟ್ಟು ಆಗ ಅಸ್ತಿತ್ವದಲ್ಲಿದ್ದ ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿಸಿತ್ತು. ಆನಂತರ ಅವರು, ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡರು.
ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 7ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದುಬಾರಿ ಪಟ್ಟಿಯಲ್ಲಿ ಸರ್ ಗೆ 8ನೇ ಸ್ಥಾನ

ದುಬಾರಿ ಪಟ್ಟಿಯಲ್ಲಿ ಸರ್ ಗೆ 8ನೇ ಸ್ಥಾನ

ಸೌರಾಷ್ಟ್ರದ ಈ ಎಡಗೈ ಬ್ಯಾಟ್ಸ್ ಮನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ, 2012ರಲ್ಲಿ 12 ಕೋಟಿ ರು. ಕೊಟ್ಟು ಖರೀದಿಸಿತ್ತು.

ಆಗ ಆ ತಂಡದ ನಾಯಕರಾಗಿದ್ದ ಎಂ.ಎಸ್. ಧೋನಿಯವರ ಅಗತ್ಯಕ್ಕೆ ತಕ್ಕಂತೆ ಆಡಿ ಅವರ ವಿಶ್ವಾಸ ಗಳಿಸಿದ್ದು ಇವರ ಹೆಗ್ಗಳಿಕೆ.

2011ರಲ್ಲಿ ಪಡೆದ ಮೊತ್ತದ ಲೆಕ್ಕಾಚಾರದಲ್ಲಿ ಹೇಳಬೇಕೆಂದರೆ, ಇವರು ಈವರೆಗಿನ ಐಪಿಎಲ್ ನ 8ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದುಬಾರಿ ಪಟ್ಟಿಯಲ್ಲಿ 9ನೇ ಸ್ಥಾನ ಇವರಿಗೆ

ದುಬಾರಿ ಪಟ್ಟಿಯಲ್ಲಿ 9ನೇ ಸ್ಥಾನ ಇವರಿಗೆ

ಡೆಲ್ಲಿ ಡೇರ್ ಡೆವಿಲ್ಸ್ ತಂಡ 2011ರಲ್ಲಿ ಇವರಿಗೆ 12 ಕೋಟಿ ರು. ಕೊಟ್ಟು ತನ್ನಲ್ಲಿ ಸ್ಥಾನ ನೀಡಿತ್ತು.

ಉತ್ತಮ ವೇಗದ ಬೌಲರ್ ಎಂದು ಹೆಸರು ಗಳಿಸಿರುವ ಇವರು, ಅಗತ್ಯ ಬಿದ್ದಾಗ ಬ್ಯಾಟಿಂಗ್ ನಲ್ಲಿ ಸ್ಫೋಟಕ ಹೊಡೆತಗಳನ್ನೂ ಹೊಡೆಯಬಲ್ಲರು.

ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 9ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

ದುಬಾರಿ ಪಟ್ಟಿಯಲ್ಲಿ ಇವರಿಗೆ 10ನೇ ಸ್ಥಾನ

ದುಬಾರಿ ಪಟ್ಟಿಯಲ್ಲಿ ಇವರಿಗೆ 10ನೇ ಸ್ಥಾನ

ಜಾರ್ಖಂಡ್ ನ ಈ ಎಡಗೈ ಬ್ಯಾಟ್ಸ್ ಮನ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2011ರಲ್ಲಿ 10 ಕೋಟಿ ರು. ಕೊಟ್ಟು ಖರೀದಿಸಿತ್ತು.
ಈ ಮೂಲಕ, ಇವರು ಈವರೆಗಿನ ಐಪಿಎಲ್ ನ 10ನೇ ಅತಿ ದುಬಾರಿ ಆಟಗಾರ ಎನಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X