ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ!

Written by:
Subscribe to Oneindia Kannada

ಬೆಂಗಳೂರು, ನವೆಂಬರ್. 30 : ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 10 ರಿಂದ 4ನೇ ಸ್ಥಾನಕ್ಕೆ ಜಿಗಿದಿದ್ದ ಕೊಹ್ಲಿ, 3ನೇ ಟೆಸ್ಟ್ ಬಳಿಕ ಟಾಪ್ ನಂ 3 ಸ್ಥಾನಕ್ಕೆ ಜಿಗಿದಿದ್ದಾರೆ.

ಇತ್ತೀಚೆಗಷ್ಟೇ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 62 ಮತ್ತು 6* ರನ್ ಗಳಿಸ ಮೂಲಕ 833 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಏರಿದರು.

ಇಂಗ್ಲೆಂಡ್ ನ ಜೋ ರೂಟ್ 2ನೇ ಸ್ಥಾನ ಮತ್ತು ಆಸೀಸ್ ನ ಸ್ಟೀವನ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ ಟೆಸ್ಟ್ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

Indian captain Virat Kohli achieves another high in Test career

28 ವಯಸ್ಸಿನ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಏಕದಿನ ಶ್ರೇಯಾಂದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮಂಗಳವಾರ ಟೀಂ ಇಂಡಿಯಾ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ಸರಣಿಯಲ್ಲಿ 2-೦ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ನ ಬೈರ್ಸ್ಟೋವ್ 9ನೇ ಸ್ಥಾನ ಪಡೆದಿದ್ದಾರೆ.

ಐಸಿಸಿ ಟೆಸ್ಟ್ ಕ್ರಿಕೆಟ್ ಟಾಪ್ 10 ಶೇಯಾಂಕ ಪಟ್ಟಿ:
1. ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯ)- 897 ಅಂಕ
2. ಜೋ ರೂಟ್(ಇಂಗ್ಲೆಂಡ್)- 847
3. ವಿರಾಟ್ ಕೊಹ್ಲಿ(ಭಾರತ)- 833
4. ಕೇನ್ ವಿಲಿಯಮ್ಸನ್(ನ್ಯೂಜಿಲೆಂಡ್)- 817
5. ಹಾಶಿಮ್ ಆಮ್ಲಾ(ದ.ಆಫ್ರಿಕಾ)- 791
6. ಎಬಿಡಿ ವಿಲಿಯರ್ಸ್(ದ.ಆಫ್ರಿಕಾ)- 778
7. ಡೆವಿಡ್ ವಾರ್ನರ್(ಆಸ್ಟ್ರೇಲಿಯ)- 772
8. ಚೇತೇಶ್ವರ ಪೂಜಾರ(ಭಾರತ)- 760
9. ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)- 759
10. ಯೂನಿಸ್ ಖಾನ್(ಪಾಕಿಸ್ತಾನ)- 753

English summary
Indian captain Virat Kohli today (November 30) achieved another high in his career when he moved to the 3rd spot in the latest International Cricket Council (ICC) Rankings for Test batsmen.
Please Wait while comments are loading...