ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಕಿವೀಸ್ ವಿರುದ್ಧ ಭಾರತದ ವನಿತೆಯರಿಗೆ ಸರಣಿ ಜಯ

By Mahesh

ಬೆಂಗಳೂರು, ಜುಲೈ 08: ಪ್ರವಾಸಿ ನ್ಯೂಜಿಲೆಂಡ್ ಮಹಿಳೆಯರ ತಂಡದ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳೆಯರು ಬುಧವಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡು ಮಿಥಾಲಿ ರಾಜ್ ಪಡೆ ವಿಜಯೋತ್ಸವ ಆಚರಿಸಿದೆ.

ಗೆಲುವಿಗೆ ಬೇಕಿದ್ದ 118ರನ್ ಚೇಸ್ ಮಾಡಿದ ಭಾರತ ತಂಡ ಆರಂಭದಲ್ಲೇ ಮುಗ್ಗರಿಸಿತು. ಪಂದ್ಯದ ಮೂರನೇ ಓವರ್ ನಲ್ಲಿ 18 ರನ್ ಸ್ಕೋರ್ ಆಗಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅದರೆ, ಕಾಮಿನಿ ಹಾಗೂ ದೀಪ್ತಿ ಎರಡನೇ ವಿಕೆಟ್ ಗೆ 103 ಜೊತೆಯಾಟ ಸಾಧಿಸಿ ಗೆಲುವು ದಾಖಲಿಸಿದರು.

India Women Clinch ODI Series vs New Zealand

ಕಾಮಿನಿ 62 ರನ್ ಅಜೇಯ, 78 ಎಸೆತ, 13 ಬೌಂಡರಿ ಹಾಗೂ ದೀಪ್ತಿ ಅಜೇಯ 44ರನ್ 78 ಎಸೆತಗಳು, 8 ಬೌಂಡರಿ ಉತ್ತಮ ಆಟದ ನೆರವಿನಿಂದ ಭಾರತಕ್ಕೆ ಸರಣಿ ಜಯ ಸಿಕ್ಕಿದೆ.

ಇದಕ್ಕೂ ಮುನ್ನ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ 118 ರನ್ ಗೆ ಆಲೌಟ್ ಆಯಿತು. ಜೂಲಾನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್ ಹಾಗೂ ದೀಪ್ತಿ ತಲಾ 2 ವಿಕೆಟ್ ಕಿತ್ತು ಕಿವೀಸ್ ಬ್ಯಾಟಿಂಗ್ ಬೆನ್ನಲುಬು ಮುರಿದರು.

ಸುಲಭ ಮೊತ್ತ ಬೆನ್ನತ್ತಿದ ಭಾರತದ ವನಿತೆಯರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೀ 136 ಎಸೆತ ಬಾಕಿ ಇರುವಂತೆ ಗೆಲುವಿನ ಗುರಿ ಮುಟ್ಟಿ ಜಯದ ನಗೆ ಬೀರಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
Read in English: Indian women win ODI series
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X