ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಏಕದಿನ: ವಿಂಡೀಸ್ ವಿರುದ್ಧ ಭಾರತಕ್ಕೆ 105 ರನ್ ಜಯ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು. 105 ರನ್ ಗಳ ಭರ್ಜರಿ ಜಯ ದಾಖಲಿಸಿದ ಭಾರತ. ಭಾರತದ ಪರವಾಗಿ ಶತಕ ಸಿಡಿಸಿದ ಅಜಿಂಕ್ಯ ರಹಾನೆಗೆ ಪಂದ್ಯ ಶ್ರೇಷ್ಠ ಗೌರವ.

ಪೋರ್ಟ್ ಆಫ್ ಸ್ಪೇನ್, ಜನ್ 26: ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರ ಆಕರ್ಷಕ ಶತಕದ ನೆರವಿನಿಂದಾಗಿ, ಭಾರತೀಯ ಕ್ರಿಕೆಟ್ ತಂಡ, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 105 ರನ್ ಗಳ ದೊಡ್ಡ ಗೆಲುವು ದಾಖಲಿಸಿದೆ.

ಈ ಪಂದ್ಯದ ಗೆಲುವಿನೊಂದಿಗೆ ಭಾರತ, ಐದು ಪಂದ್ಯಗಳ ಈ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೇ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

300 ಪ್ಲಸ್ ರನ್ ಮೊತ್ತ: ಭಾರತದ ಹೊಸ ವಿಶ್ವ ದಾಖಲೆ300 ಪ್ಲಸ್ ರನ್ ಮೊತ್ತ: ಭಾರತದ ಹೊಸ ವಿಶ್ವ ದಾಖಲೆ

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು.

ಈ ಮೊತ್ತವನ್ನು ಹಿಂದಿಕ್ಕಲು ಕ್ರೀಸ್ ಗೆ ಇಳಿದ ವೆಸ್ಟ್ ಇಂಡೀಸ್ ತಂಡ, 43 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 205 ರನ್ ಮಾತ್ರ ಗಳಿಸಲು ಶಕ್ತವಾಯಿತು.

India Wins 2nd one day international match against West Indies

ಪಂದ್ಯಕ್ಕೂ ಮುನ್ನ ಮಳೆ ಕಾಡಿದ ಹಿನ್ನೆಲೆಯಲ್ಲಿ ಇತ್ತಂಡಗಳಿಗೆ ತಲಾ 43 ಓವರ್ ಗಳನ್ನು ನಿಗದಿಗೊಳಿಸಲಾಗಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತದ ಇನಿಂಗ್ಸ್ ಗೆ, ಆರಂಭಿಕರಾದ ಅಜಿಂಕ್ಯ ರಹಾನೆ ಹಾಗೂ ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಈ ಜೋಡಿ ಮೊದಲ ವಿಕೆಟ್ ಗೆ 114 ರನ್ ಪೇರಿಸಿತು. ಇನಿಂಗ್ಸ್ ನ 19ನೇ ಓವರ್ ನಲ್ಲಿ ಶಿಖರ್ ಧವನ್ (63 ರನ್, 59 ಎಸೆತ, 10 ಬೌಂಡರಿ) ವಿಕೆಟ್ ಉರುಳಿದರೂ, ಆನಂತರ ರಹಾನೆಯವರನ್ನು ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ (87 ರನ್, 66 ಎಸೆತ, 4 ಬೌಂಡರಿ, 4 ಸಿಕ್ಸರ್) ತಮ್ಮ ಎಂದಿನ ಸ್ಫೋಟಕ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಿದರು.

ವಿರಾಟ್ ಕೊಹ್ಲಿ ಹಾಗೂ ರಹಾನೆ ಜೋಡಿ, 2ನೇ ವಿಕೆಟ್ ಗೆ 97 ರನ್ ಕಲೆಹಾಕುವ ಮೂಲಕ ಸ್ಕೋರ್ ಬೋರ್ಡಿನಲ್ಲಿ ತಂಡದ ಮೊತ್ತ ಗಣನೀಯವಾಗಿ ಹೆಚ್ಚಲು ಕಾರಣರಾದರು.

ಇನಿಂಗ್ಸ್ ನ 34ನೇ ಓವರ್ ನಲ್ಲಿ ರಹಾನೆ (103 ರನ್, 104 ಎಸೆತ, 10 ಬೌಂಡರಿ, 2 ಸಿಕ್ಸರ್) ಅವರು ವಿಕೆಟ್ ಒಪ್ಪಿಸಿದರೂ, ಅಲ್ಲಿಂದ ಮುಂದಕ್ಕೆ ಇನಿಂಗ್ಸ್ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆದ ಕೊಹ್ಲಿ, ತಂಡದ ಮೊತ್ತ 300 ರನ್ ಗಡಿಯ ಸಮೀಪದಲ್ಲಿದ್ದಾಗ ವಿಕೆಟ್ ಒಪ್ಪಿಸಿ ಹೊರನಡೆದರು.

ಆದರೆ, ಅವರಿಗೆ ಕ್ರೀಸ್ ನಲ್ಲಿ ಉತ್ತಮ ಜತೆಗಾರ ಸಿಗಲಿಲ್ಲ. ಮಧ್ಯಮ ಕ್ರಮಾಂಕದ ಹಾರ್ದಿಕ್ ಪಾಂಡ್ಯ (4), ಯುವರಾಜ್ ಸಿಂಗ್ (14), ಧೋನಿ (13) ಕೇದಾರ್ ಜಾಧವ್ (13) ಹೆಚ್ಚು ಆಡದೇ ನಿರಾಸೆಗೊಳಿಸಿದರು. ಆದರೂ, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಉದಾತ್ತ ದೇಣಿಗೆಯಿಂದಾಗಿ ಭಾರತ, 310 ರನ್ ಗಳನ್ನು ಕಲೆಹಾಕಿತು.

ಎಡವಿದ ವಿಂಡೀಸ್
ಆನಂತರ, ಬ್ಯಾಟಿಂಗ್ ಗೆ ಇಳಿದ ವಿಂಡೀಸ್ ತಂಡವು, ಶೂನ್ಯ ಮೊತ್ತಕ್ಕೆ ಆರಂಭಿಕ ಕೀರನ್ ಪೊಲಾರ್ಡ್ ಅವರನ್ನು ಕಳೆದುಕೊಂಡಿತು. ಆನಂತರ, ಕೇವಲ 4 ರನ್ ಮೊತ್ತಕ್ಕೆ ಮೂರನೇ ಕ್ರಮಾಂಕದ ಜೇಸನ್ ಮೊಹಮ್ಮದ್ ಅವರೂ ಔಟಾದರು. ಆದರೆ, ಮತ್ತೊಬ್ಬ ಆರಂಭಿಕ ಶಾಯ್ ಹೋಪ್ (81 ರನ್, 88 ಎಸೆತ, 5 ಬೌಂಡರಿ, 3 ಸಿಕ್ಸರ್) ಮಾತ್ರ ಕೆಚ್ಚೆದೆಯ ಆಟ ಪ್ರದರ್ಶಿಸಿದರು.

ಆದರೆ, ಆ ಹೊತ್ತಿನಲ್ಲಿ ಅವರೊಂದಿಗೆ ಕನಿಷ್ಠ ಶತಕದ ಜೊತೆಯಾಟವಾಡುವಂಥ ಬ್ಯಾಟ್ಸ್ ಮನ್ ಸಿಗಲಿಲ್ಲ. ಎವಿನ್ ಲಿವೀಸ್ (21), ಕಾರ್ಟರ್ (13), ಜೇಸನ್ ಹೋಲ್ಡರ್ (29) ಮುಂತಾದವರು ಬೇಗನೇ ಪೆವಿಲಿಯನ್ ತೊರೆದಿದ್ದು ವಿಂಡೀಸ್ ಅನ್ನು ಸಂಕಷ್ಟಕ್ಕೀಡು ಮಾಡಿತು.

ಅಂತಿಮ ಹಂತದಲ್ಲಿ, ರಾಸ್ಟನ್ ಚೇಸ್ (ಅಜೇಯ 33 ರನ್, 37 ಎಸೆತ, 2 ಬೌಂಡರಿ) ಅವರು ಭಾರತದ ಮೊತ್ತ ಚೇಸ್ ಮಾಡಲು ಹೋರಾಡಿದರೂ, ಆರಂಭಿಕರು ಇನಿಂಗ್ಸ್ ಗೆ ಉತ್ತಮ ಅಡಿಪಾಯ ಹಾಕದ್ದರಿಂದಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಗೂ ಕಷ್ಟವಾಯಿತು. ಅಂತಿಮವಾಗಿ, ವಿಂಡೀಸ್ ಪಡೆ 205 ರನ್ ಗಳಿಗೆ ತನ್ನ ಇನಿಂಗ್ಸ್ ಅಂತ್ಯಗೊಳಿಸಿತು.

ವಿಂಡೀಸ್ ಇನಿಂಗ್ಸ್ ವೇಳೆ, ಭಾರತದ ಪರವಾಗಿ ಐದು ಓವರ್ ಮಾಡಿದ ವೇಗಿ ಭುವನೇಶ್ವರ್ ಕುಮಾರ್, 1 ಮೇಡನ್ ಓವರ್ ಮಾಡಿದ್ದಲ್ಲದೆ ಕೇವಲ 9 ರನ್ ನೀಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್:
ಭಾರತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 (ಅಜಿಂಕ್ಯ ರಹಾನೆ 103, ವಿರಾಟ್ ಕೊಹ್ಲಿ 87; ಅಲ್ಜಾರಿ ಜೋಸೆಫ್ 73ಕ್ಕೆ 2, ಕ್ಯುಮಿನ್ಸ್ 57ಕ್ಕೆ 1);
ವೆಸ್ಟ್ ಇಂಡೀಸ್ 43 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 205 (ಹೋಪ್ 81 ರನ್, ಚೇಸ್ ಅಜೇಯ 33; ಕುಲ್ದೀಪ್ ಯಾದವ್ 50ಕ್ಕೆ 3, ಭುವನೇಶ್ವರ್ ಕುಮಾರ್ 9ಕ್ಕೆ 2).
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X