ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ವಿರುದ್ಧದ 2ನೇ ಏಕದಿನದಲ್ಲಿ ಭಾರತದ ಗೆಲುವಿಗೆ 5 ಕಾರಣ

ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 105 ರನ್ ಗಳ ಭರ್ಜರಿ ಗೆಲುವು. ಟೀಂ ಇಂಡಿಯಾದ ಗೆಲುವಿಗೆ ಕಾರಣವಾದ 5 ಅಂಶಗಳು. ಆರಂಭಿಕರಾದ ಅಜಿಂಕ್ಯ ರಹಾನೆ, ಶಿಖರ್ ಧವನ್, ಕೊಹ್ಲಿ ಭರ್ಜರಿ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣ.

ಪೋರ್ಟ್ ಆಫ್ ಸ್ಪೇನ್, ಜೂನ್ 26: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಅಮೋಘ ಜಯ ಸಾಧಿಸಿದೆ.

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಪೇರಿಸಿತ್ತು. ಈ ಮೊತ್ತವನ್ನು ಹಿಂದಿಕ್ಕಿದ ವೆಸ್ಟ್ ಇಂಡೀಸ್, 43 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.

2ನೇ ಏಕದಿನ: ವಿಂಡೀಸ್ ವಿರುದ್ಧ ಭಾರತಕ್ಕೆ 105 ರನ್ ಜಯ2ನೇ ಏಕದಿನ: ವಿಂಡೀಸ್ ವಿರುದ್ಧ ಭಾರತಕ್ಕೆ 105 ರನ್ ಜಯ

ಭಾರತದ ಪರವಾಗಿ ಆಕರ್ಷಕ ಶತಕ ಸಿಡಿಸಿದ ಅಜಿಂಕ್ಯ ರಹಾನೆ ಅವರು 103 ರನ್ ಗಳ ವೈಯಕ್ತಿಕ ಮೊತ್ತ ದಾಖಲಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ಕಾರಣಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಸಂದಿತು.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ, ಟೀಂ ಇಂಡಿಯಾ ವಿರುದ್ಧ ದೊಡ್ಡ ಮಟ್ಟದ ಸೋಲು ಕಂಡಿದ್ದು ವಿಪರ್ಯಾಸ.

300 ಪ್ಲಸ್ ರನ್ ಮೊತ್ತ: ಭಾರತದ ಹೊಸ ವಿಶ್ವ ದಾಖಲೆ 300 ಪ್ಲಸ್ ರನ್ ಮೊತ್ತ: ಭಾರತದ ಹೊಸ ವಿಶ್ವ ದಾಖಲೆ

ಹಾಗಾದರೆ, ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮಾಡಿದ ತಪ್ಪುಗಳೇನು, ಆ ತಂಡದ ಯಾವ ತಪ್ಪುಗಳು ಭಾರತದ ಗೆಲುವಿಗೆ ಕಾರಣವಾದವು ಎಂಬಿತ್ಯಾದಿ ವಿಚಾರಗಳ ಕುರಿತಂತೆ ಐದು ಅಂಶಗಳನ್ನು ಇಲ್ಲಿ ನೀಡಲಾಗಿದೆ.(ಚಿತ್ರ ಕೃಪೆ: ಪಿಟಿಐ)

ಸಂಕ್ಷಿಪ್ತ ಸ್ಕೋರ್:

ಭಾರತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 (ಅಜಿಂಕ್ಯ ರಹಾನೆ 103, ವಿರಾಟ್ ಕೊಹ್ಲಿ 87; ಅಲ್ಜಾರಿ ಜೋಸೆಫ್ 73ಕ್ಕೆ 2, ಕ್ಯುಮಿನ್ಸ್ 57ಕ್ಕೆ 1);

ವೆಸ್ಟ್ ಇಂಡೀಸ್ 43 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 205 (ಹೋಪ್ 81 ರನ್, ಚೇಸ್ ಅಜೇಯ 33; ಕುಲ್ದೀಪ್ ಯಾದವ್ 50ಕ್ಕೆ 3, ಭುವನೇಶ್ವರ್ ಕುಮಾರ್ 9ಕ್ಕೆ 2).

ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

ದೊಡ್ಡ ಮೊತ್ತಕ್ಕೆ ಶ್ರೀಕಾರ

ದೊಡ್ಡ ಮೊತ್ತಕ್ಕೆ ಶ್ರೀಕಾರ

ಭಾರತಕ್ಕೆ ಈ ಪಂದ್ಯದಲ್ಲಿ ಯಶಸ್ಸು ತಂದುಕೊಟ್ಟ ದೊಡ್ಡ ಅಂಶಗಳಲ್ಲಿ ತಂಡವು ದಾಖಲಿಸಿದ 300 ಪ್ಲಸ್ ರನ್ ಮೊತ್ತ ಎಂದು ಹೇಳಲಡ್ಡಿಯಿಲ್ಲ. ಬಹುತೇಕ ಅನನುಭವಿಗಳಿಂದ ತುಂಬಿರುವ ವೆಸ್ಟ್ ಇಂಡೀಸ್ 2ನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿದಾಗ, ಆ ತಂಡದ ಮೇಲೆ ಭಾರತ ತಂಡದ ಈ ಮೊತ್ತ ಒತ್ತಡ ಹೇರಿರುವುದರಲ್ಲಿ ಎರಡನೇ ಮಾತಿಲ್ಲ. ಟೀಂ ಇಂಡಿಯಾ ಆರಂಭಿಕರಾದ ಅಜಿಂಕ್ಯ ರಹಾನೆ ಹಾಗೂ ಶಿಖರ್ ಧವನ್ ಜೋಡಿ, ಆರಂಭಿಕ ವಿಕೆಟ್ ಗೆ 114 ರನ್ (110 ಎಸೆತ) ಕಲೆ ಹಾಕಿ ಇನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದು ತಂಡದ ದೊಡ್ಡ ಮೊತ್ತಕ್ಕೆ ನಾಂದಿ ಹಾಡಿತು. ಅಜಿಂಕ್ಯ ಶತಕವೂ ಇಲ್ಲಿ ಸ್ತುತ್ಯಾರ್ಹ.

1983 : ಭಾರತ ವಿಶ್ವಕಪ್ ಗೆದ್ದ ಕ್ಷಣದ ಮೆಲುಕು

ದೊಡ್ಡ ಮೊತ್ತ ಕಟ್ಟಿದ ಬ್ಯಾಟ್ಸ್ ಮನ್ ಗಳು

ದೊಡ್ಡ ಮೊತ್ತ ಕಟ್ಟಿದ ಬ್ಯಾಟ್ಸ್ ಮನ್ ಗಳು

ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಕೊಹ್ಲಿ ಕೂಡಾ, ಕ್ರೀಸ್ ನಲ್ಲಿ ಅಬ್ಬರಿಸುವ ಮೂಲಕ ತಂಡದ ಮೊತ್ತವನ್ನು 300 ರನ್ ಮೊತ್ತದ ಅಂಚಿಗೆ ಕೊಂಡೊಯ್ಯುವಲ್ಲಿ ಸಫಲರಾದರು. ಹಾಗಾಗಿ, ಅಜಿಂಕ್ಯ, ಶಿಖರ್ ಹಾಗೂ ಕೊಹ್ಲಿ ಜೋಡಿಯ ಉತ್ತಮ ಆಟದಿಂದಾಗಿ, ಮಧ್ಯಮ ಕ್ರಮಾಂಕ ವೈಫಲ್ಯಕ್ಕೊಳಗಾದರೂ, ಭಾರತವು 300 ಪ್ಲಸ್ ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿ ಬಿಗಿ ಹಾಕಿದ್ದರೆ ಉತ್ತಮವಾಗಿರುತ್ತಿತ್ತು!

ಆರಂಭದಲ್ಲಿ ಬಿಗಿ ಹಾಕಿದ್ದರೆ ಉತ್ತಮವಾಗಿರುತ್ತಿತ್ತು!

ವಿಂಡೀಸ್ ತಂಡದ ಬೌಲಿಂಗ್ ವೈಫಲ್ಯವೇ ಆ ತಂಡದ ಸೋಲಿಗೆ ಪ್ರಮುಖವಾದ ಕಾರಣ. ಭಾರತದ ಇನಿಂಗ್ಸ್ ವೇಳೆ ಆರಂಭಿಕರು ಹಾಗೂ ಡೇಂಜರಸ್ ಆದ ಕೊಹ್ಲಿಯನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿದ್ದರೆ, ಆ ತಂಡವು ತನ್ನ 2ನೇ ಇನಿಂಗ್ಸ್ ನಲ್ಲಿ ಒತ್ತಡಕ್ಕೆ ಸಿಲುಕುವ ಪ್ರಮೇಯ ಒದಗಿಬರುತ್ತಿರಲಿಲ್ಲ. ಭಾರತದ ಮಧ್ಯಮ ಕ್ರಮಾಂಕದ ವಿಕೆಟ್ ಗಳನ್ನು ಬೇಗ ಬೇಗನೇ ತೆಗೆದ ಚಾಕಚಕ್ಯತೆಯನ್ನು ಇನಿಂಗ್ಸ್ ನ ಆರಂಭದಲ್ಲೇ ಮಾಡಬೇಕಿತ್ತು. ಗೇಮ್ ಪ್ಲಾನ್ ಇಲ್ಲದ ವಿಂಡೀಸ್ ತಂಡದ ಬೌಲಿಂಗ್ ಲೋಪವನ್ನು ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಉತ್ತಮವಾಗಿ ಉಪಯೋಗಿಸಿಕೊಂಡರು.

ಭರ್ಜರಿ ಆಟವಾಡಿದ ಬ್ಯಾಟ್ಸ್ ಮನ್ ಗಳು

ಭರ್ಜರಿ ಆಟವಾಡಿದ ಬ್ಯಾಟ್ಸ್ ಮನ್ ಗಳು

ವಿಂಡೀಸ್ ತಂಡದ ಪ್ರಮುಖ ಬೌಲರ್ ಗಳಾದ ಜೋಸೆಫ್, ಹೋಲ್ಡರ್, ಬಿಶೂ, ಕುಮಿನ್ಸ್ ಅವರು ಹೆಚ್ಚು ದುಬಾರಿಯಾದರು. ಅವರು ಮಾಡಿದ ದುರ್ಬಲ ಬೌಲಿಂಗ್ ನಿಂದಲೇ ಭಾರತೀಯ ಬ್ಯಾಟ್ಸ್ ಮನ್ ಗಳು ಕ್ರೀಸ್ ನಲ್ಲಿ ಮಿಂಚಲು ಕಾರಣವಾಗಿದ್ದು.

ಹೋಪ್ ಏಕಾಂಗಿ ಹೋರಾಟ ಫಲ ನೀಡಲಿಲ್ಲ

ಹೋಪ್ ಏಕಾಂಗಿ ಹೋರಾಟ ಫಲ ನೀಡಲಿಲ್ಲ

ಭಾರತದ ಬೌಲಿಂಗ್ ಕೂಡ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಭುವನೇಶ್ವರ್ ಕುಮಾರ್ (5 ಓವರ್, 1 ಮೇಡನ್, 9 ರನ್, 2 ವಿಕೆಟ್), ಹಾರ್ದಿಕ್ ಪಾಂಡ್ಯ (6 ಓವರ್, 32 ರನ್) ಅವರ ಎಕಾನಮಿ ಕ್ರಮವಾಗಿ 1.80 ಹಾಗೂ 3.55 ಇದೆ. ಆದರೆ, ಉಳಿದವರ ಎಕಾನಮಿ ಅಷ್ಟಕ್ಕಷ್ಟೆ. ಉಮೇಶ್ ಯಾದವ್ (6.00), ರವಿಚಂದ್ರನ್ ಅಶ್ವಿನ್ (5.22), ಕುಲ್ದೀಪ್ ಯಾದವ್ (50ಕ್ಕೆ 3), ಯುವರಾಜ್ ಸಿಂಗ್ (5.00) ಕೊಂಚ ದುಬಾರಿ ಎನಿಸಿದರು. ಆದರೆ, ಇದರ ಲಾಭವನ್ನು ವಿಂಡೀಸ್ ಆಟಗಾರರು ಉಪಯೋಗಿಸಿಕೊಳ್ಳಲಿಲ್ಲ. ಆ ತಂಡದ ಬ್ಯಾಟ್ಸ್ ಮನ್ ಗಳಲ್ಲಿ ಶಾಯ್ ಹೋಪ್ ಬಿಟ್ಟರೆ ಮಿಕ್ಕವರ್ಯಾರೂ ಆಡಲಿಲ್ಲದಿದ್ದುದೇ ವಿಂಡೀಸ್ ತಂಡವು ಈ ಪಂದ್ಯದಲ್ಲಿ ಗೆಲ್ಲುವ 'ಹೋಪ್' ಕಳೆದುಕೊಳ್ಳಲು ಕಾರಣ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X